ಈ ಮಹಿಳೆಗೆ ಫ್ರೆಂಚ್ ಮೂಲವಿದ್ದರೂ ತಮ್ಮ ಉತ್ತಮ ಕೆಲಸಗಳಿಂದ ಗ್ರಾಮ ಪಂಚಾಯತಿ ಅಧ್ಯಕ್ಷೆ ಸ್ಥಾನಕ್ಕೇರಿರುವ ವಿಚಾರ ನಿಮ್ಮನ್ನು ಅಚ್ಚರಿಗೊಳಿಸುತ್ತದೆ.

0
806

ಫ್ರೆಂಚ್ ಮೂಲದ ಭಾರತೀಯ ಮಹಿಳೆ ಅಂಜನಾ ದೇವಿ, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅನೆಗುಂಡಿ ಗ್ರಾಮ ಪಂಚಾಯತ್ ವಾರ್ಡ್ ನಂ 2, ರ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಇವರ ತಾಯಿ ಫ್ರಾಂಕೋಯಿಸ್ ಫ್ರೆಂಚ್ ರಾಷ್ಟ್ರೀಯದವರು. ಇವರು 1965 ರಲ್ಲಿ ಆಧ್ಯಾತ್ಮಿಕ ಪುನರ್ವಸತಿಗಾಗಿ ಭಾರತಕ್ಕೆ ಬಂದು ಐತಿಹಾಸಿಕ ಪವಿತ್ರ ಸ್ಥಳಗಳಿಗೆ ಪ್ರಯಾಣದಲ್ಲಿ ನಿರತರಾಗಿದ್ದ ಸಮಯದಲ್ಲಿ ಶಾಂತಮೂರ್ತಿಯವರ ಪರಿಚಯವಾಯಿತು. ನಂತರ ಕೊಪ್ಪಳದ ಅನೆಗುಂಡಿಯಲ್ಲಿ ನೆಲೆಸಿ ಮದುವೆಯಾಗಿ ‘ಶಾರದಾ’ ಎಂಬ ಹೆಸರನ್ನು ಪಡೆದು. ವಿದೇಶಿ ಮೂಲದ ಶಾರದಾ ಅನೆಗುಂಡಿಯಲ್ಲಿ ಗೌರವಾನ್ವಿತ ಮಹಿಳೆಯಾದರು.

@thenewsminute

Also read: ನ್ಯಾಷನಲ್ ಹೆಲ್ತ್ ಮಿಶನ್; ಕಮ್ಯುನಿಟಿ ಹೆಲ್ತ್ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಶಾರದಾ ತನ್ನ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವ ಗುರಿಹೊಂದಿದ್ದರು ಆದರೆ ಅಂಜನಾ ಸ್ಥಳೀಯ ಭಾಷೆಯೇ ಮೇಲೆ ಹೆಚ್ಚು ವ್ಯಾಮೊಹಗೊಂಡು ಕನ್ನಡ ಮಾದ್ಯಮದಲ್ಲಿ ಓದಿದರು. ಇಂಗ್ಲಿಷ್ ಅವರ ತಾಯಿಯ ಭಾಷೆ, ಅಂಜನಾ ಹುಟ್ಟಿದು ಕನ್ನಡ ಮಣ್ಣಿನಲ್ಲಿ ಈ ಅಭಿಮಾನದಿಂದ ಅವರು ಗಂಗಾವತಿ ಕಾಲೇಜ್-ನಲ್ಲಿ ಇತಿಹಾಸ, ಸಮಾಜಶಾಸ್ತ್ರ ಮತ್ತು ರಾಜಕೀಯ ವಿಷಯದಲ್ಲಿ ಬಿ.ಎ ಪದವಿ ಪಡೆದರು. ನಂತರ 2009 ರಲ್ಲಿ ಅವರ ತಾಯಿ ನಿಧನರಾದರು.

ನಂತರ ಅಂಜನಾ ಕೊಪ್ಪಳದಲ್ಲಿ Fourth Wave Foundation ಎಂಬ NGO ದಲ್ಲಿ ಕೆಲಸ ಪಡೆದು “ನನಗೂ ಶಾಲೆ” ಎಂಬ ವಿಭಿನ್ನ ರೀತಿಯ ಕಾರ್ಯಕ್ರಮ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪಾಲಕರಿಗೆ ಮನವರಿಕೆ ಮಾಡಿ ಯಶಸ್ವಿಯಾದರು. ಹಾಗೆಯೆ ಸ್ಥಳೀಯ ಸರಕಾರಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎನ್ನುವುದನ್ನು ಜನರಿಗೆ ತಿಳಿಸಿ ಗ್ರಾಮಗಳ ಅಭಿವೃಧಿಯಲ್ಲಿ ಅಂಜನಾ ಅವರ ಪಾತ್ರ ಮುಖ್ಯವಾಹಿನಿಯಾಯಿತು.

ಅಂಜನಾ 2015 ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ಚುನಾಯಿತರಾದರು. ಅವರು ಪರಿಪೂರ್ಣವಾಗಿ ಕೆಲಸಮಾಡಿ ಜನರಿಗೆ ಇನ್ನೂ ಹತ್ತಿರವಾದರೂ. ಇದಕ್ಕೆ ಸಾಕ್ಷಿಯಾಗಿ ಇತ್ತೀಚಿನ ಚುನಾವಣೆಯಲ್ಲಿ ಅವಿರೋಧವಾಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಎಂದು ಸ್ಥಳೀಯ ನಿವಾಸಿಯೋಬ್ಬರು ಅವರ ಅಭಿಮಾನವನ್ನು ಹೇಳಿಕೊಂಡಿದ್ದಾರೆ.

Also read: ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸುವ ಯೋಚನೆಯಲ್ಲಿರುವ ಇತ್ತೀಚಿನ ಹೊಸ ಟ್ರೆಂಡ್-ಗಳು ಆಲೋವೆರಾ ಬಿಸಿನೆಸ್ ಮಾಡಿ ನೋಡಿ..

ಅಂಜನಾ ತಾನು ಭಾರತದಲ್ಲಿ ನೆಲೆಸಿದರು ಫ್ರೆಂಚ್ ಸಂಬಂಧವನ್ನು ಬಿಟ್ಟಿಲ್ಲ (ತನ್ನ ತಾಯಿಯ ಅಮ್ಮ) ಅಜ್ಜಿ ಯೊಂದಿಗೆ ಸಂಪರ್ಕದಲ್ಲಿದೆನೆ ನನ್ನ ತಾಯಿ ಮರಣದ ನಂತರ ಫ್ರಾನ್ಸ್-ಗೆ ಬೆಟ್ಟಿನೀಡಿ ತಾಯಿಯ ಸಂಬಧಿಕರನ್ನು ಬೆಟ್ಟಿನೀಡಿದ್ದೆ ಅವರು ಕೂಡ ಭಾರತಕ್ಕೆ ಬಂದು ಇಲ್ಲಿನ ಸಂಸೃತಿ ಸೌಂದರ್ಯ ಮತ್ತು ನನ್ನ ರಾಜಕೀಯ ಸೇವೆಯನ್ನು ನೋಡಿ ಹೆಮ್ಮೆಪಟ್ಟರು ಎಂದಿದ್ದಾರೆ. ತನ್ನ ಹೊಸ ಅಧಿಕಾರದಲ್ಲಿ ನನಗೆ ಹಲವಾರು ಯೋಜನೆಯನ್ನು ಜಾರಿಗೆ ತರುವ ಯೋಚನೆ ಇದೆ. ಅದರಲ್ಲಿ ಕೊಪ್ಪಳ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಗಮನಹರಿಸುತ್ತೇನೆ, ಮತ್ತು ನೈರ್ಮಲ್ಯ ಗ್ರಾಮ, ಮಹಿಳಾ ಸಬಲೀಕರಣ ಇನ್ನು ಹಲವಾರು ಯೋಜನೆಯನ್ನು ಕೈಗೊಳ್ಳತ್ತೇನೆ ನನ್ನ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆನೆಗುಂಡಿ, ಕಡೆಬಾಗಿಲು, ಚಿಕ್ಕರಾಮಪುರ್, ಮತ್ತು ಬಸವನದುರ್ಗ ಗ್ರಾಮಗಳ ಅಭಿವೃಧಿಯಲ್ಲಿ ಸ್ವಲ್ಪಸಮವನ್ನು ಹಾಳುಮಾಡದೆ ದುಡಿವುತ್ತೇನೆ ಎಂದು ತಮ್ಮ ಮನದಾಳದ ರಾಜಕೀಯ ಜೀವನವನ್ನು ಹಚ್ಚಿಕೊಂಡಿದ್ದಾರೆ.