ಅಮೇಜಾನ್‌-ನಲ್ಲಿ ಮಾರಾಟವಾಗುತ್ತಿದೆ ಶುದ್ಧ ಗಾಳಿ; ಇದು ಮಾನವ ಕುಲಕ್ಕೆ ಅವಮಾನದ ಸಂಗತಿ…

0
634

ಬರುಬರುತ್ತಾ ಕಾಲಮಾನ ಊಹಿಸಲು ಸಾಧ್ಯವಾಗದ ಸ್ಥಿತಿಗೆ ತಲುಪುತ್ತಿದೆ. ಹಳ್ಳಿಗಳಲ್ಲಿ ವರ್ಷದ ಸುಗ್ಗಿಯಲ್ಲಿ ಬರುವ ಬುಡುಬುಡುಕಿ, ಸುಡಗಾಡು ಸಿದ್ದರು ಭಿಕ್ಷೆಮಾಡಿ ಕೊನೆಗೆ ಭವಿಷ್ಯದ ಮಾತು ಹೇಳಿ ಹೋಗುತ್ತಿದ್ದರು ಅದು ಈಗ ಸತ್ಯವಾಗಿದೆ. ನೀವು ಕೊಟ್ಟ ಭಿಕ್ಷೆ ದೇವರು ಕೊಟ್ಟದು, ನೀವು ಪ್ರಕೃತಿಯಿಂದ ಪಡೆಯಿವ ಉಚಿತ ಗಾಳಿ, ನೀರು, ಮಣ್ಣು, ಸೌದೆ ಎಲ್ಲವೂ ಉಚಿತ ಸಿಗುತ್ತಿದೆ. ಈ ಎಲ್ಲ ಸಂಪತ್ತುಗಳಿಂದ ನಿನ್ನ ಒಡಲಿಗೆ ಅನ್ನ ಸಿಗುತ್ತೆ, ಅನ್ನದ ಅರಿವಿಲ್ಲದೆ ಹೊನ್ನಕೆ ಕೈಚಾಚುವ ಕಾಲಬಂದಿದೆ. ಅದಕ್ಕೆ ಪ್ರತಿಪಲವಾಗಿ ಮುಕ್ತವಾಗಿ ದೊರೆಯುವ ಪ್ರಕೃತಿ ಸಂಪತ್ತು ಮಾರಟಕ್ಕೆ ಸಿಗುತ್ತೆ. ಎಂದು ಹೇಳಿದ ಅರ್ಥಪೂರ್ಣವಾದ ಮಾತು ಈಗ ಸತ್ಯವಾಗಿದೆ.

Also read: ಕೆಲವೊಮ್ಮೆ ಪ್ರಾಣಿಗಳಿಗೆ ಇರುವ ಮಾನವೀಯತೆ ಮನುಷ್ಯನಿಗಿರುವುದಿಲ್ಲ.. ಈ ಕಥೆ ಓದಿ ನೀವೆ ನಿಜ ಎನ್ನುವಿರಿ..

ಹೌದು ಮೇಲಿನ ವಿಷಯದಂತೆ ನೀರು, ಕಟ್ಟಿಗೆ, ಅಷ್ಟೇಯಾಕೆ ಮಣ್ಣಿಗೆ ಬೆಲೆಬಂದು ಸುಮಾರು ದಿನಗಳಾಗಿವೆ, ಬಾಕಿ ಇದ್ದ ಒಂದು ವಿಷಯ ಅಂದ್ರೆ ಗಾಳಿ ಮಾತ್ರ ಉಳಿದಿತ್ತು ಇದು ಮಾರಾಟಕ್ಕೆ ಬರುತ್ತೆ ಅಂತ ಯಾರಿಗೂ ಯೋಚಿಸಲು ಸಾದ್ಯವಿರಲಿಲ್ಲ. ಈಗ ಗಾಳಿಯನ್ನು ದುಡ್ಡು ಕೊಟ್ಟು ಖರೀದಿಸುವ ಸನ್ನಿವೇಶ ಭಾರತದಲ್ಲೂ ಎದುರಾಗಿದೆ. ಕೆಲವು ಖಾಸಗಿ ಸಂಸ್ಥೆಗಳು ಶುದ್ಧ ಗಾಳಿಯನ್ನು ಆನಲೈನ್ ಮೂಲಕ ಮಾರಾಟ ಮಾಡಲು ಆರಂಭಿಸಿವೆ.

ಏನಿದು ಶುದ್ದ ಗಾಳಿ ಮಾರಾಟ?

ದೇಶಾದ್ಯಂತ ವಾಯು ಮಾಲಿನ್ಯ ವಿಪರೀತ ಎನ್ನುವ ಮಟ್ಟದಲ್ಲಿ ಹೆಚ್ಚುತ್ತಿದೆ. ಇದನ್ನೇ ಕೆಲವು ಖಾಸಗಿ ಸಂಸ್ಥೆಗಳು ಬಂಡವಾಳವನ್ನಾಗಿ ಮಾಡಿಕೊಂಡು, ಶುದ್ಧ ಗಾಳಿ ಮಾರಾಟ ಮಾಡಲು ಮುಂದಾಗುತ್ತಿದೆ. ಶುದ್ಧ ಕುಡಿಯುವ ನೀರು ಬಾಟಲ್‌ಗಳಲ್ಲಿ ಹೇಗೆ ಲೀಟರ್ ಲೆಕ್ಕಾಚಾರದಲ್ಲಿ ತುಂಬಿ ಮಾರಾಟ ಮಾಡಲಾಗುತ್ತದೆಯೋ ಹಾಗೆಯೇ, ಶುದ್ಧ ಗಾಳಿಯನ್ನು ಸಹ ಬಾಟಲ್‌ಗಳಲ್ಲಿ ತುಂಬಿ ಮಾರಾಟ ಮಾಡುವ ಯೋಜನೆ ಕಾರ್ಯರೂಪಕ್ಕೆ ಬಂದಿದೆ.

Also read: ಮಾನವನ ಉಳಿವಿಗಾಗಿ ಹೋಂಡ ಕೆರೆಗಳನ್ನು ಉಳಿಸಿ ಬೆಳೆಸಲೇಬೇಕು!!

ದೇಶದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಭಾರತೀಯ ಅನಿಲ ಪ್ರಾಧಿಕಾರ(ಗೇಲ್) 2016ರಲ್ಲಿ ಜಾಗೃತಿ ಅಭಿಯಾನ ಆರಂಭಿಸಿತು. ಸಂಘ-ಸಂಸ್ಥೆಗಳ ಮೂಲಕ ಪ್ರತಿಯೊಂದು ಹಳ್ಳಿ, ನಗರಗಳಲ್ಲಿಯೂ ಸಾರ್ವಜನಿಕರನ್ನು ಜಾಗೃತಿಗೊಳಿಸಲು ಮುಂದಾಗಿತ್ತು. ಈ ಅಭಿಯಾನಕ್ಕೆ ಪುಷ್ಟಿ ನೀಡುವಂತೆ ದಿಲ್ಲಿಯಲ್ಲಿ ಶುದ್ಧ ಗಾಳಿ ಮಾರಾಟದ ಕಲ್ಪನೆ ಹೊಂದಿರುವ ವಿಡಿಯೋ ಯೂಟೂಬ್‌ನಲ್ಲಿ ಪ್ರಸಾರವಾಗಿತ್ತು. ಆಗ, ‘ಗಾಳಿ ಮಾರಾಟವೆಲ್ಲ ಅಸಾಧ್ಯವಾದದ್ದು. ಅವೆಲ್ಲ ಕಲ್ಪನೆಗಷ್ಟೇ ಸೀಮಿತ’ ಎಂದು ಬಹುತೇಕರು ಮೂಗು ಮುರಿದ್ದರು. ಅದು ಇದೀಗ ನಿಜವಾಗುತ್ತಿದೆ ಎನ್ನುವುದು ಸೋಜಿಗದ ಸಂಗತಿ.

ಹಾಗಾದ್ರೆ ಗಾಳಿಯ ಬೆಲೆ ಎಷ್ಟಿದೆ?

Also read: ಮಾನವ ಅನ್ನೋ ಈ ಜನ್ಮ ಎಷ್ಟು ವಿಚಿತ್ರ ಅಂದ್ರೆ ಈ ಸ್ಟೋರಿನೇ ಸಾಕ್ಷಿ ಅನ್ಸುತ್ತೆ ಕಣ್ರೀ ಒಮ್ಮೆ ಆದ್ರೂ ಓದಿ ಅರ್ಥಮಾಡಿಕೊಳ್ಳಿ..!

ಈಗಾಗಲೇ ಭಾರತ ಮೂಲದ ‘ಪ್ಯೂರ್ ಹಿಮಾಲಯನ್ ಏರ್’ ಸಂಸ್ಥೆ 10 ಲೀಟರ್ ಶುದ್ಧ ಗಾಳಿಗೆ 550 ರೂ. ನಂತೆ ಮಾರಾಟ ಮಾಡುತ್ತಿದೆ. ಎರಡು ಬಾಟಲ್‌ಗಳಿಗೆ 1000 ರೂ., ನಾಲ್ಕು ಬಾಟಲ್‌ಗಳಿಗೆ 1900 ರೂ. ನಂತೆ ಅಮೇಜಾನ್ ಮೂಲಕವೂ ಈ ಶುದ್ಧ ಗಾಳಿ ದೊರೆಯುತ್ತಿದೆ. ಆಸ್ಪ್ರೇಲಿಯಾ ಮೂಲದ ಆಜೈರ್ ಸಂಸ್ಥೆ 7.5 ಲೀಟರ್ ಶುದ್ಧ ಗಾಳಿಯ ಬಾಟಲ್‌ಗೆ 1,500 ರೂ. ನಿಗದಿ ಪಡಿಸಿದ್ದರೆ, ಕೆನಡಾದ ‘ವಿಟಾಲಿಟಿ ಏರ್’ ಸಂಸ್ಥೆ ಮೊದಲ ಬಾರಿಗೆ 2014ರಲ್ಲಿಯೇ ಶುದ್ಧ ಗಾಳಿ ಮಾರಾಟ ಆರಂಭಿಸಿತ್ತು. ಪರಿಸರ ಮಾಲಿನ್ಯ ಎನ್ನುವ ಸ್ವಯಂಕೃತ ಅಪರಾಧದಿಂದ ಗಾಳಿಯನ್ನು ಸಹ ದುಡ್ಡು ಕೊಟ್ಟು ಖರೀದಿಸುವುದು ದುರಂತವೇ ಸರಿ.

ದಿನಕ್ಕೆ ಎಷ್ಟೊಂದು ಗಾಳಿ ಬೇಕು?

ಓರ್ವ ಮನುಷ್ಯ ಪ್ರತಿ ನಿಮಿಷ ಸರಾಸರಿ 8 ರಿಂದ 10 ಲೀಟರ್ ಗಾಳಿ ಸೇವಿಸುತ್ತಾನೆ. ಅಂದರೆ ಪ್ರತಿ ದಿನ ಎಷ್ಟು ಲಕ್ಷ ಲೀಟರ್ ಗಾಳಿ ಬೇಕಾಗುತ್ತದೆ ಎನ್ನುವ ಅಂದಾಜು ಲೆಕ್ಕವನ್ನು ನೀವೇ ಹಾಕಿಕೊಳ್ಳಿ. ಶುದ್ಧ ಗಾಳಿಯಿದ್ದರೆ ಮಾತ್ರ ಆರೋಗ್ಯದಿಂದ ಬದುಕಬಹುದು. ಆ ಗಾಳಿ ಬೇಕೆಂದರೆ ಪರಿಸರ, ಮರ, ಗಿಡ ರಕ್ಷಣೆ ಮಾಡಲೇಬೇಕು. ಆದರೆ, ನಾವು ಅಭಿವೃದ್ಧಿ ಹೆಸರಲ್ಲಿ ಕಣ್ಣಿಗೆ ಕಾಣುವ ಮರ-ಗಿಡಗಳನ್ನೆಲ್ಲ ಉರುಳಿಸುತ್ತ, ಕಂಡ-ಕಂಡಲ್ಲಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದೇವೆ. ಇದು ಹೀಗೆ ಮುಂದುವರಿದರೆ online ನಲ್ಲಿ ಮಾತ್ರವಲ್ಲ petrol-diesel ಪಂಪ್ ರೀತಿಯಲ್ಲಿ ಗಾಳಿ ಪಂಪ್ ಬರುವುದರಲ್ಲಿ ಸಂದೇಹವೇ ಸಂದೇಹವೇ ಇಲ್ಲ.