ಇನ್ಮುಂದೆ ಪಾನ್ ಕಾರ್ಡ್​ ಕಡ್ಡಾಯವಲ್ಲ; ಆದಾಯ ತೆರಿಗೆ ವಿವರ ಸಲ್ಲಿಸಲು ಪಾನ್ ಬದಲು ಆಧಾರ್​ ಕಾರ್ಡ್​​ ಬೇಕು..

0
204

ಇಂದು ಕೇಂದ್ರದ ಮೊದಲ ಬಜೆಟ್ ಮಂಡನೆ ಮಾಡಿದ ನಿರ್ಮಲ ಸಿತಾರಾಮನ್ ಹಲವು ಹೊಸ ಹೊಸ ಯೋಜನೆಗಳ ಜೊತೆಗೆ ದೇಶದ ಜನರಿಗೆ ಅನುಕೂಲವಾಗುವಂತೆ ಹಲವಾರು ನಿಯಮಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರ ಪಾನ್ ಕಾರ್ಡ್-ಗೆ ಸಂಬಂಧಿಸಿದಂತೆ ಹಲವು ಗೊಂದಲಗಳಿಗೆ ಮುಕ್ತಿ ಹಾಡಿದ್ದು, ಇನ್ಮುಂದೆ ಯಾವುದೇ ಆದಾಯ ತೆರಿಗೆ ಪಾವತಿಸಲು ಪಾನ್​ ಕಡ್ಡಾಯವಲ್ಲ, ಆಧಾರ್​ ಕಾರ್ಡ್​​ ಇದ್ದರೆ ಸಾಕು ಎಂದು ಹೇಳಿದ್ದಾರೆ.

Also read: ಇಂಡೋ ಟಿಬೆಟನ್ ಬಾರ್ಡರ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಹೌದು ಈ ಹಿಂದೆ ಆದಾಯ ತೆರಿಗೆ ಸಲ್ಲಿಕೆಗೆ ಪ್ಯಾನ್​ ಕಡ್ಡಾಯವಾಗಿತ್ತು. ಆದರೆ ಈ ನಿಯಮವನ್ನು ಬದಲಾಯಿಸಿದ್ದು, ಪ್ಯಾನ್​ ಬದಲಾಗಿ ಆಧಾರ್​ ಕಾರ್ಡ್​ ಮೂಲಕವೂ ಐಟಿ ಸಲ್ಲಿಸಬಹುದಾಗಿದೆ. ಆದಾಯ ತೆರಿಗೆ ಸಲ್ಲಿಸಲು ಪ್ಯಾನ್​ ಕಾರ್ಡ್​ ಕಡ್ಡಾಯ ಎಂಬ ನಿಯಮವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಸಡಿಲಗೊಳಿಸಿ, ಪಾನ್-​ಗೆ ಬದಲಾಗಿದೆ ಆಧಾರ್​ ಕಾರ್ಡ್​ ಮೂಲಕವೂ ಇನ್ಮುಂದೆ ಆದಾಯ ತೆರಿಗೆಯನ್ನು ಸಲ್ಲಿಸಬಹುದು ಎಂದು ಲೋಕಸಭೆಯಲ್ಲಿಂದು ಕೇಂದ್ರ ಬಜೆಟ್ ಮಂಡನೆ ವೇಳೆ ಈ ವಿಷಯ ತಿಳಿಸಿದ ಅವರು, ಪಾನ್ ಕಾರ್ಡ್ ಜೋಡಣೆಗೆ ವಿನಾಯಿತಿ ನೀಡಲಾಗಿದೆ. ತೆರಿಗೆ ಪಾವತಿ ಮಾಡುವವರು ಪಾನ್ ಕಾರ್ಡ್ ಹೊಂದಿಲ್ಲದಿದ್ದರೆ ಆಧಾರ್ ಸಂಖ್ಯೆ ನಮೂದಿಸಿ ಮುಂದುವರೆಯಬಹುದು ಎಂದು ಹೇಳಿದರು.

5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಹೊಂದಿದವರು ತೆರಿಗೆ ಪಾವತಿಸುವಂತಿಲ್ಲ ಎಂದು ಹೇಳಿದ ನಿರ್ಮಲಾ ಸೀತಾರಾಮನ್, ಮಧ್ಯಮ ವರ್ಗದವರಿಗೆ ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. 15 ವರ್ಷದವರೆಗಿನ ಸಾಲಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದರು. ಸ್ಟಾರ್ಟ್ ಅಪ್ ಕಂಪನಿಗಳಿಗೆ ಐಟಿ ಇಲಾಖೆ ಪರಿಶೀಲನೆಯಿಂದ ವಿನಾಯಿತಿ ನೀಡಲಾಗಿದೆ. ಬ್ಯಾಂಕ್ ಖಾತೆಯಿಂದ 1 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತ ತೆಗೆದರೆ ಶೇ, 2 ರಷ್ಟು ತೆರಿಗೆ ವಿಧಿಸಲಾಗುವುದು, ನೇರ ತೆರಿಗೆ ಸಂಗ್ರಹ ಶೇ, 78 ರಷ್ಟು ಹೆಚ್ಚಾಗಿದ್ದು, 11 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದರು.

Also read: ಮೊದಲ ಬಜೆಟ್-ನಲ್ಲಿ ಸೂಟ್‍ಕೇಸ್ ಸಂಸ್ಕೃತಿ ಕೈ ಬಿಟ್ಟು, ದೇಸಿ ಸಂಸ್ಕೃತಿಯನ್ನು ಎತ್ತಿಹಿಡಿದ ನಿರ್ಮಲಾ ಸೀತಾರಾಮನ್​..

ಅದರಂತೆ ಭಾರತದಲ್ಲಿ 120 ಕೋಟಿಗೂ ಹೆಚ್ಚು ಭಾರತೀಯರು ಆಧಾರ್​ ಕಾರ್ಡ್​ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಅನುಕೂಲವಾಗಲು ನಿಯಮವನ್ನು ಸಡಿಲಗೊಳಿಸಲಾಗಿದೆ. ಈ ಮೂಲಕ ಪಾನ್​ ಇಲ್ಲದವರು ಆಧಾರ್​ ಕಾರ್ಡ್​ ಮೂಲಕವೂ ತೆರಿಗೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ಯಾನ್​ ಕಾರ್ಡ್​ ಇಲ್ಲದವರು ಕೂಡ ಆಧಾರ್​ ನಂಬರ್​ ಬಳಸುವ ಮೂಲಕ ಆದಾಯ ತೆರಿಗೆ ಸಲ್ಲಿಸಬಹುದಾಗಿದೆ ಎಂದರು. ಎಂದು ಮಹತ್ವದ ಬದಲಾವಣೆಯನ್ನು ಮಾಡಿ ತೆರಿಗೆದಾರರಿಗೆ ಅನುವು ಮಾಡಿದ್ದಾರೆ.

ಒಂದು ದೇಶ, ಒಂದು ಕಾರ್ಡ್:

ಬಜೆಟ್‍ನಲ್ಲಿ ಒಂದು ದೇಶ, ಒಂದು ಕಾರ್ಡ್ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದು, ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (ಎನ್‍ಸಿಎಂಸಿ) ಮಾನದಂಡಗಳ ಆಧಾರದ ಮೇಲೆ ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಾವತಿ ವ್ಯವಸ್ಥೆಯನ್ನು ಮಾರ್ಚ್, 2019ರಲ್ಲಿ ಪ್ರಧಾನ ಮಂತ್ರಿ ಉದ್ಘಾಟಿಸಿದ್ದರು. ಎನ್‍ಸಿಎಂಸಿ ದೇಶೀಯವಾಗಿ ಅಭಿವೃದ್ಧಿಗೊಂಡಿದ್ದು, ಹಲವು ಸೇವೆಗಳನ್ನು ಗ್ರಾಹಕರು ಈ ಒಂದೇ ಕಾರ್ಡ್‍ನಿಂದ ಪಡೆಯಬಹುದಾಗಿದೆ.