ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧ ಗುರು ಪತ್ನಿ ಮಂಡ್ಯ ಕ್ಷೆತ್ರದಿಂದ ಲೋಕಸಭಾ ಅಕಾಡಕ್ಕೆ??

0
358

ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಾವು ಜೋರಾಗಿದ್ದು, ಸುಮಲತಾ ಅವರಿಗೆ ಟಿಕೆಟ್ ನೀಡಬೇಕು ಎಂದು ಬಹು ದಿನಗಳಿಂದ ಚರ್ಚೆ ನಡೆಯುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಗ ಅಡ್ಡಗಾಲು ಹಾಕಿದ್ದು ಸುಮಲತಾ ರಾಜಕೀಯ ಪ್ರವೇಶಕ್ಕೆ ನಿರಾಶೆ ಮೂಡಿದೆ. ಇದಕ್ಕೆ ಅಂಬಿ ಅಭಿಮಾನಿಗಳು ಮಂಡ್ಯದಲ್ಲಿ ಸುಮಲತಾ ಅವರೇ ಈ ಸಲದ ಸ್ಪರ್ಧಿ ಎಂದು ಘೋಷಣೆ ಮಾಡುತ್ತಿದ್ದು, ಈಗಾಗಲೇ ನಿಕಿಲ್ ಅವರಿಗೆ ಜೆಡಿಎಸ್ ನಿಂದ ಟಿಕೆಟ್ ಫಿಕ್ಸ್ ಆಗಿದೆ ಎಂದು ತಿಳಿದಿದೆ. ಈ ಎಲ್ಲ ಹಗ್ಗ ಜಗ್ಗಾಟದ ನಡುವೆ ಇನ್ನೋಬ್ಬ ಸ್ಪರ್ಧಿಯನ್ನು ಅಕಾಡಕ್ಕೆ ಇಳಿಸಲು ದ್ವನಿಗಳು ಕೇಳಿಬರುತ್ತಿದ್ದು ಮಂಡ್ಯದ ಗುಡಿಗೆರೆ ಕಾಲೋನಿ ವೀರಯೋಧ ಗುರು ಪತ್ನಿ ಕಲಾವತಿ ಅವರನ್ನು ಸಂಸದರಾಗಿ ಆಯ್ಕೆ ಮಾಡುವಂತೆ ಆಗ್ರಹಿಸಿ ಮೂರು ಪಕ್ಷದ ರಾಜ್ಯಾಧ್ಯಕ್ಷರಿಗೆ ಸಾಮಾಜಿಕ ಕಾರ್ಯಕರ್ತರು ಪತ್ರ ಬರೆದಿದ್ದು ರಾಜ್ಯದ ರಾಜಕೀಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.


Also read: ಮಕ್ಕಳು, ಸೊಸೆ ಮತ್ತು ಮೊಮ್ಮಕ್ಕಳಿಗೂ ಸಹ ಪಾರ್ಟಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದ್ದರೂ ಸಹ ದೇವೇಗೌಡರು ಹೇಳುತ್ತಾರೆ “ನಾನು ಕುಟುಂಬ ರಾಜಕಾರಣ ಮಾಡಿಲ್ಲ” ಇವರ ಮಾತನ್ನು ನಂಬುತ್ತೀರಾ??

ಯೋಧ ಗುರು ಪತ್ನಿ ರಾಜಕೀಯಕ್ಕೆ?

ಹೌದು ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಗುರು ಅವರ ಪತ್ನಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಮೂರೂ ರಾಜಕೀಯ ಪಕ್ಷಗಳಿಗೆ ಮನವಿ ಪತ್ರ ಕೊಡಲಾಗಿದೆ. ಇವರಿಗೆ ಟಿಕೆಟ್ ನೀಡಿದರೆ ರಾಜಕೀಯದಲ್ಲಿ ಒಳ್ಳೆಯ ವಿಚರಗಾಳು ಮೂಡಲಿವೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬಕ್ಕೆ ಟಿಕೆಟ್ ನೀಡಿದರೆ ಅವರ ಮೇಲಿರುವ ಅಭಿಮಾನವನ್ನು ಮತವನ್ನಾಗಿ ಜನರು ನೀಡುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೆಚ್​​.ಎಂ.ವೆಂಕಟೇಶ್​​, ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.

ಮಂಡ್ಯದಲ್ಲಿ ರಾಜಕೀಯ ಹೊಸ ಜ್ವಾಲೆ?


Also read: ಪೌರ ಕಾರ್ಮಿಕರ ಕಾಲು ತೊಳೆದಿದ್ದು ಪಬ್ಲಿಸಿಟಿ ಸ್ಟಂಟ್ ಅಂತ ಹೇಳಿದವರಿಗೆ ಇದನ್ನು ತೋರಿಸಿ, ಪೌರ ಕಾರ್ಮಿಕರಿಗೆ ಮೋದಿ ತಮ್ಮ ಸ್ವಂತ ಉಳಿತಾಯದಿಂದ 21 ಲಕ್ಷ ದೇಣಿಗೆ ನೀಡಿ ಅವರು ಮಹಾನ್ ನಾಯಕ ಅನ್ನೋದನ್ನ ಸಾಬೀತು ಮಾಡಿದ್ದಾರೆ!

2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ, ಇವರೆಗೂ ಮಾಧ್ಯಮಗಳಲ್ಲಿ ಮಂಡ್ಯ ಲೋಕಸಭಾ ಚುನಾವಣೆ ಬಗ್ಗೆ ಹಲವಾರು ವಿಚಾರಗಳು ಚರ್ಚೆ ಆಗುತ್ತಿವೆ. ಜೆಡಿಎಸ್‌ನಿಂದ ಹೆಚ್.ಡಿ.ದೇವೇಗೌಡ, ಎಲ್.ಆರ್.ಶಿವರಾಮೇಗೌಡ, ಡಾ.ಲಕ್ಷ್ಮೀ ಅಶ್ವಿನ್‌ಗೌಡ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಇವರಲ್ಲಿ ಒಬ್ಬರು ಸ್ಪರ್ಧಿಸುವ ಬಗ್ಗೆ ಸುದ್ದಿಗಳು ಕೇಳಿಬರುತ್ತಿವೆ. ಕಾಂಗ್ರೆಸ್‌ನಿಂದ ಸುಮಲತಾ ಅಂಬರೀಷ್, ಬಿಜೆಪಿಯಿಂದ ಡಾ‌.‌ಸಿದ್ದರಾಮಯ್ಯ ಸೇರಿದಂತೆ ಅನೇಕ ಹೆಸರುಗಳು ಪ್ರಸ್ತಾಪವಾಗುತ್ತಿದೆ. ಈ ಪತ್ರದ ಮೂಲಕ, ಈ ಬಾರಿ ಹುತಾತ್ಮ ಯೋಧ, ಹೆಚ್.ಗುರು ಅವರ ಪತ್ನಿ ಕಲಾವತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ, ಸಂಸತ್‌ಗೆ ಕಳುಹಿಸಿ. ಇದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿ ಉಳಿಯಲಿ ಎಂದು ಮೂರು ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರದಲ್ಲಿ ಮನವಿ ಮಾಡಿದ್ದಾರೆ.


Also read: ಕೇಂದ್ರದಲ್ಲಿ ಸ್ಪಷ್ಟ ಬಹುಮತ ಬರದಿದ್ದರೆ, ಕರ್ನಾಟಕದ ರಿಮೋಟ್ ಮುಖ್ಯಮಂತ್ರಿ ಥರ ಪ್ರಧಾನಿಯೂ ಇರಬೇಕಾಗುತ್ತೆ; ದೇಶದ ಹಿನ್ನೆಡೆ ಆಗಲಿದೆ : ಮೋದಿ

ಮಂಡ್ಯದಲ್ಲಿ ಹಣ ಬಲಕ್ಕೆ ಮುಕ್ತಿ?

ಮಂಡ್ಯದಲ್ಲಿ ಹಣಬಲ, ತೋಳ್ಬಲದ ರಾಜಕೀಯ ನಡೆಯುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಜನತಾ ರಾಜಕೀಯಕ್ಕೆ ನಾಂದಿ ಹಾಡಲು ಹುತಾತ್ಮ ಯೋಧ ಗುರುವಿನ ಪತ್ನಿಗೆ ಟಿಕೆಟ್ ನೀಡಬೇಕು ಎಂದು ದ್ವಾರಕಾನಾಥ್ ಆಗ್ರಹಿಸಿ ಅವರು ಸಿನಿಮಾ ನಟ-ನಟಿಯರು ರಾಜಕಾರಣದಲ್ಲಿದ್ದರೇ ಅವರ ಕುಟುಂಬಸ್ಥರು ರಾಜಕೀಯಕ್ಕೆ ಬರುತ್ತಾರೆ. ರಾಜಕಾರಣಿಗಳ ಕುಟುಂಬದಲ್ಲಿಯೇ ಯಾರಾದ್ರೂ ಅಗಲಿದ ಬಳಿಕವೂ ಅವರ ಕುಟುಂಬದವರೇ ರಾಜಕೀಯಕ್ಕೆ ಬರುತ್ತಾರೆ. ಆದ್ರೆ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ಯೋಧರ ಕುಟುಂಬಸ್ಥರು ಯಾರೂ ರಾಜಕೀಯಕ್ಕೆ ಎಂಟ್ರಿ ನೀಡಿದ್ದು ಕಡಿಮೆ. ಆದರಿಂದ ಮಂಡ್ಯದಲ್ಲಿ ಈ ಸಲ ಹೊಸ ಪ್ರಯತ್ನ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ಇನ್ನು ದ್ವಾರಕಾನಾಥ್ ಅವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಕುರಿತು ಕೆಲವರು ಸಹಮತ ವ್ಯಕ್ತಪಡಿಸಿದರೆ ಇನ್ನೂ ಕೆಲವರು ವಿರೋಧಿಸುತ್ತಿದ್ದಾರೆ. ಈ ಕುರಿತು ಯಾವ ರೀತಿಯ ಬದಲಾವಣೆಯಾಗುತ್ತೆ ಅಂತ ಕಾದು ನೋಡಬೇಕಿದೆ.