ನಿಮ್ಮ ವಾಹನದಲ್ಲಿ ಇಂಧನವಿದೆಯೋ ಇಲ್ಲವೋ ಎಂದು ಈಗಲೇ ಚೆಕ್ ಮಾಡಿ ತುಂಬಿಸಿಕೊಳ್ಳಿ, ಇಂದು ಸಂಜೆಯಿಂದ ಇಂಧನ ಸಿಗೋದು ಅನುಮಾನ…!!

0
579

ವೀಕೆಂಡ್ ಅನ್ನು ಜೋಲಿ ಆಗಿ ಎಂಜಾಯ್ ಮಾಡೋಣ ಅಂತ ನಿಮ್ಮ ಕಾರು, ಬೈಕ್ ಅಥವಾ ಖಾಸಗಿ ವಾಹನವನ್ನು ತಯಾರು ಮಾಡಿಕೊಂಡಿದ್ದೀರಾ, ಹಾಗಾದರೆ ನಿಮಗೊಂದು ಶಾಕಿಂಗ್ ವಿಷಯ ಕಾದಿದೆ. ಅದೇನು ಅಂತ ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಮುಂದೆ ಓದಿ.

ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪೆಟ್ರೋಲ್ ಮತ್ತು ಡೀಸೆಲ್ ಪೂರೈಸುವ ಟ್ಯಾಂಕರ್ ಲಾರಿ ಚಾಲಕರ ಮುಷ್ಕರದಿಂದ, ಪೆಟ್ರೋಲ್ ಪಂಪ್ ಗಳಲ್ಲಿ ಇಂದು ಸಂಜೆಯಿಂದಲೇ ಪೆಟ್ರೋಲ್ ಅಥವಾ ಡೀಸೆಲ್ ಸಿಗುವ ಸಾಧ್ಯತೆ ತುಂಬಾ ಕಡಿಮೆ. ಏನಿದು ಮುಷ್ಕರ ಅಂತೀರ, ನೀವೇ ನೋಡಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ದೇವನಗುಂದಿ ಬಳಿ ಇಂದಿನಿಂದಲೇ ಡೀಸೆಲ್ ಮತ್ತು ಪೆಟ್ರೋಲ್ ಪೂರೈಕೆ ಮಾಡುವ ಲಾರಿಗಳು ಮುಷ್ಕರ ಆರಂಭಿಸಿವೆ. ಹಾಳಾಗಿರುವ ರಸ್ತೆಯನ್ನು ಸರಿಪಡಿಸುವಂತೆ ಕಳೆದ ಮೂರು ವರ್ಷಗಳಿಂದ ಮನವಿ ಮಾಡಿಕೊಂಡಿದ್ದರೂ ಕಂಪನಿ ಮಾಲೀಕರು ಎಚ್ಚೆತ್ತುಕೊಳ್ಳದ ಕಾರಣ ಇಂದು ಬೆಳಗ್ಗೆಯಿಂದಲೇ ಪೂರೈಕೆದಾರರು ರಸ್ತೆಯಲ್ಲಿ ಲಾರಿ ನಿಲ್ಲಿಸಿ ಮುಷ್ಕರ ಆರಂಭಿಸಿದ್ದಾರೆ.

ರಾಜ್ಯದಲ್ಲಿ ಡೀಸೆಲ್ , ಪೆಟ್ರೋಲ್ ಹಾಗೂ ಅಡುಗೆ ಇಂಧನವನ್ನು ಪೂರೈಕೆ ಮಾಡುವ ಪ್ರಮುಖ ತಾಣಗಳಲ್ಲಿ ದೇವಗುಂದಿಯೂ ಒಂದು. ಇಲ್ಲಿಂದ ಬೆಂಗಳೂರು ಸೇರಿದಂತೆ ತಮಿಳುನಾಡು ಆಂಧ್ರಪ್ರದೇಶಕ್ಕೆ ಪ್ರತಿದಿನ ಮೂರು ಸಾವಿರಕ್ಕೂ ಅಧಿಕ ಲಾರಿಗಳಲ್ಲಿ ಇಂಧನವನ್ನು ಪೂರೈಕೆ ಮಾಡಲಾಗುತ್ತದೆ.

ಇನ್ನು ದೇವಗುಂದಿಯಲ್ಲಿ HPCL, BPCL, IOCL ಹಾಗೂ ಒಂದು ಗ್ಯಾಸ್ ಘಟಕ ಕೂಡ ಇದೆ. ದೇವನಗುಂದಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭಾರೀ ಗಾತ್ರದ ಲಾರಿಗಳು ಸಂಚರಿಸುವುದರಿಂದ ರಸ್ತೆ ಹಾಳಾಗಿದ್ದು , ಇದನ್ನು ಸರಿಪಡಿಸಬೇಕೆಂಬುದು ಪೂರೈಕೆದಾರರ ಹಲವು ವರ್ಷದ ಬೇಡಿಕೆಯಾಗಿದೆ.

ಲಾರಿ ಚಾಲಕರ ಜೊತೆ ಸರ್ಕಾರ ಸಂಧಾನ ನಡೆಸುವ ಪ್ರಯತ್ನ ನಡೆಸಲು ಮುಂದಾಗಿದೆ. ಆದರೆ ಸರ್ಕಾರದ ದೂರಣೆಯಿಂದ ಬೇಸತ್ತ ಲಾರಿ ಚಾಲಕರು, ನಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಯಾವುದಕ್ಕೂ ನಿಮ್ಮ ವಾಹನದಲ್ಲಿ ಇಂಧನವಿದೆಯೋ ಇಲ್ಲವೋ ಎಂದು ಈಗಲೇ ಚೆಕ್ ಮಾಡಿ ತುಂಬಿಸಿಕೊಳ್ಳುವುದು ಒಳ್ಳೆಯದು.