‘ತಿಥಿ’ ಸಿನಿಮಾದ hero ಗಡ್ಡಪ್ಪನ ಸ್ಥಿತಿ…

0
2012

ಗಡ್ದಪ್ಪ… ತಿಂಗಳ ಕೆಳಗೆ ಈ ಹೆಸರು ಕೇಳಿದರೆ ಯಾರೋ ಅನ್ಕೊಂಡ್ ಸುಮ್ನೆ ಆಗಿಬಿಡ್ತಿದ್ವಿ… ಆದರೆ ಭಾರತದ sensational ಸಿನೆಮಾ ‘ತಿಥಿ’ ಬಂದ ಮೇಲೆ ಗಡ್ದಪ್ಪ ಉರುಫ್ ಚನ್ನೇಗೌಡರು ಎಲ್ಲರ ಮನೆಯ ನೆಚ್ಚಿನ ತಾತ. ಇಂತಹ subject ಇಟ್ಕೊಂಡು ಕೂಡ ಸಿನೆಮಾ ಮಾಡಬಹುದು ಅಂತ ತೋರಿಸಿಕೊಟ್ಟರು ನಮ್ಮ ಹೆಮ್ಮೆಯ ತಿಥಿ ತಂಡ.

ಆದರೆ ಗಡ್ಡಪ್ಪನನ್ನ ಜನ ಫೇಸ್ ಬುಕ್, ವಾಟ್ಸಪ್ ನಲ್ಲಿ ಉಪಯೋಗಿಸಿಕೊಂಡ ಪರಿ ಅಷ್ಟ್ ಇಸ್ಟ್ ಅಲ್ಲ, ಅವರಿಂದ ತಿಥಿ ಸಿನೆಮಾ ಮಾಡಿದ ಗಳಿಕೆ ಕೂಡ ಬಹಳ ದೊಡ್ಡದೇ… ಎಷ್ಟೋ ಮಂದಿ ಗಡ್ದಪ್ಪನಿಗೋಸ್ಕರ ಚಿತ್ರಮಂದಿರದ ಕದ ತಟ್ಟಿದ್ರು ಅಂದ್ರೆ ನೀವು ನಂಬಲೇ ಬೇಕು.ಸಿನೆಮಾ ಕೋಟ್ಯಂತರ ರೂಪಾಯಿ ದುಡ್ಡು ಮಾಡಿದ್ದು, ಮಾಡುತ್ತಾ ಇರೋ ಶ್ರೇಯಸ್ಸು ಗಡ್ಡಪ್ಪನಿಗೆ ಸಲ್ಲಬೇಕು…

ಆದರೆ ಇವತ್ತಿಗೂ ಸಹ ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದ ಗಡ್ಡಪ್ಪ ತೆಂಗಿನ ಗರಿಯಲ್ಲಿ ನಿರ್ಮಿಸಿದ ಗುಡಿಸಲಿನಲ್ಲಿ ದಿನ ಕಳೆಯುತ್ತಿದ್ದಾರೆ. ಮಳೆಗಾಲದಲ್ಲಿ ಅವರ ಜೀವನ ನರಕಯಾತನೆಯಾಗಿದೆ. ಚನ್ನೇಗೌಡರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಎಲ್ಲರನ್ನ ಮದುವೆ ಮಾಡಿ ಕೊಟ್ಟಿದ್ದಾರೆ. ಕೆಲದಿನಗಳ ಹಿಂದೆ ಗಡ್ಡಪ್ಪ ಅನಾರೋಗ್ಯದಿಂದ ಬಳಲುತ್ತಿದ್ದಾಗ ತಿಥಿ ಸಿನಿಮಾ ತಂಡ ಆಸ್ಪತ್ರೆ ವೆಚ್ಚ ಭರಿಸಿ, ಒಂದಷ್ಟು ಹಣವನ್ನೂ ನೀಡಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ತಿಥಿ ಸಿನಿಮಾದಲ್ಲಿ ಅವರ ನಟನೆಗೆ ಉತ್ತಮ ಪ್ರತಿಕ್ರಿಯೆಗಳು ಬಂದಿತ್ತು. ಆದರೆ ಎಷ್ಟು ಜನಕ್ಕೆ ಗೊತ್ತು ಇವರು ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಾರೆ. ಇವರು ಈಗ್ಲೊ ಆಗ್ಲೊ ಬಿದ್ದು ಹೋಗೊ ಮನೆಯಲ್ಲಿ ವಾಸಿಸುತ್ತಿದ್ದಾರೆ ಇಂತಹ ಒಂದು ಅತ್ಯುತ್ತಮ ಪ್ರತಿಭೆಯನ್ನು ಹೊಂದಿರುವ ಇಂತಹ ಒಂದು ಪ್ರತಿಭೆಯನ್ನು ಹೊಂದಿರುವ ಆ ಬಡ ಜೀವಿಗೆ ಸರ್ಕಾರ ಸಹಾಯ ಹಸ್ತ ನೀಡಲಿ ಎಂಬುದೇ ನಮ್ಮ ಆಶಯ.

ಗಡ್ದಪ್ಪನನ್ನ ಇಟ್ಕೊಂಡು Troll ಮಾಡಿದ ಮೇಲೆ ಮರೆತುಬಿಡ್ತೀರ, ಆದ್ರೆ ಯಾರು ಕೂಡ ಇಂತವರ ಪರಿಸ್ತಿತಿ ಬಗ್ಗೆ ಯೋಚನೆಮಾಡಲ್ಲ. Troll ಮಾಡೋ ಕೆಲವರು ತಮ್ಮ ಕನ್ನಡ ಮೇಲಿನ ಅಭಿಮಾನಕ್ಕೆ ಮಾಡ್ತಾರೆ, ಇನ್ನು ಕೆಲವರು ತಮ್ಮ ಪಬ್ಲಿಸಿಟಿಗೆ, ಲೈಕ್ಸ್ ಗೆ ಮಾಡ್ತಾರೆ.. ಇವಾಗ ಕೆಲವರು ಪೋಸ್ಟರ್ ಹಾಕಿ ಪಬ್ಲಿಸಿಟಿ ಕೂಡ ಪಡೆಯುತ್ತಿದ್ದಾರೆ.

ಮೆಚ್ಚುವಂತ ವಿಷಯವೆಂದರೆ, ಮಂಡ್ಯದ ಒಬ್ಬ ರಿಯಲ್ ಎಸ್ಟೇಟ್ ಉದ್ಯಮಿ ತಮ್ಮ 80 ಎಕರೆಯಲ್ಲಿ ಮಾಡುತ್ತಿರುವ ಲೇಔಟ್ಗೆ ” ಗಡ್ಡಪ್ಪ ಲೇಔಟ್” ಅಂತ ಹೆಸರಿಟ್ಟಿದ್ದಾರಂತೆ, ಅಷ್ಟೇ ಅಲ್ಲ ಅ ಲೇಔಟ್ನಲ್ಲಿ ಇವರಿಗೆ ಒಂದು 30×40 ನಿವೇಶನವನ್ನೂ ನೀಡಿದ್ದಾರಂತೆ…

ಈ ರೀತಿ ಅವರ ಹೆಸರು ಉಪಯೋಗಿಸಿಕೊಂಡು ಬಿಟ್ಟಿ ಪಬ್ಲಿಸಿಟಿ ಪಡೆದು ಲಾಭಗಳಿಸುತ್ತಿದ್ದಾರೆ… ಇದು ಎಷ್ಟರಮಟ್ಟಿಗೆ ಸರಿ ಅಂತ ಯಾರಾದರೂ ಯೋಚನೆ ಮಾಡ್ತೀರಾ…?