ಹಾಸಿಗೆ ಇದ್ದಷ್ಟು ಕಾಲು ಚಾಚು; ಕನ್ನಡ ಗಾದೆ

0
2772

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಿತಿಯನ್ನು ಅರಿತು ಬಾಳು ಎಂಬ ಉಪದೇಶವನ್ನು ನೀಡುತ್ತಿದೆ. ಆಸೆಯೇ ದುಃಖಕ್ಕೆ ಕಾರಣ ಎನ್ನುವ ಮಾತು ಆಸೆಯೇ ಪ್ರಗತಿಗೆ ಮೂಲ ಎನ್ನುವ ಮಾತು ನಾವು ಕೇಳಿದ್ದೇವೆ. ಇವೆರಡು ಪರಸ್ಪರ ವಿರುದ್ಧವಾಗಿ ಕಂಡರೂ ಈ ಎರಡನ್ನೂ ಹೊಂದಿಸಿ, ಆಸೆಯಿರಬೇಕು. ಆಸೆಗೆ ಮಿತಿಯಿರಬೇಕು ಎಂದು ಹೇಳಬಹುದು. ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೂ ನಮ್ಮ ಶಕ್ತಿ ಮೀರಿ ಕೈ ಚಾಚುವುದಕ್ಕೆ ಹೋದರೆ ಅಪಾಯ ತೊಂದರೆ ತಪ್ಪಿದ್ದಲ್ಲ.

ಒಬ್ಬ ಬಡವ ತನ್ನ ಹೊಲಗದ್ದೆ ಮನೆ ಎಲ್ಲವನ್ನೂ ಮಾರಿ ಸಂಭ್ರಮದಿಂದ ತನ್ನ ಮಗಳ ಮದುವೆ ಮಾಡಲು ಸಿದ್ಧನಿದ್ದ. ಅವನ ಹಿತೈಷಿಯೊಬ್ಬನು ಹೀಗೆಲ್ಲಾ ಮಾಡಬೇಡ ಇದ್ದುದನ್ನೆಲ್ಲಾ ಮಾರಿ ಮದುವೆ ಮಾಡಬೇಡ. ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೇ ಖರ್ಚು ಮಾಡು ಶಕ್ತಿ ಮೀರಿ ಖರ್ಚು ಮಾಡಬೇಡ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹಿತನುಡಿದನು, ಹಾಗೆಯೇ ಸಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಾರ. ಈ ಮಾತು ಎಲ್ಲರಿಗೂ ಅನ್ವಯಿಸುವುದಿಲ್ಲ.