ನಕ್ಷತ್ರ ಪುಂಜಗಳ ಬಗ್ಗೆ ನಿಮಗೊಂದಿಷ್ಟು ಮಾಹಿತಿ.

0
729

ನಮ್ಮ ಸೌರವ್ಯೂಹದಂತಹ ಲಕ್ಷೋಪಲಕ್ಷ ಕುಟುಂಬಗಳು ಸೇರಿ ಒಂದು ನಕ್ಷತ್ರ ಪುಂಜವಾಗಿ ರೂಪುಗೊಂಡಿದೆ. ಆದರೆ ನಮ್ಮ ಸೌರಮಂಡಲ ಯಾವುದೇ ನಕ್ಷತ್ರ ಪುಂಜದಲಿಲ್ಲ. ಇದೊಂದು ಬಾನಂಗಳದಲ್ಲಿ ಸಿಗುವ ಒಂಟಿ ಮನೆ. ನಮ್ಮ ಆಕಾಶಗಂಗೆಯಲ್ಲಿ ಇಂತಹ ಸಾಕಷ್ಟು ಒಂಟಿ ಮನೆಗಳು, ನಕ್ಷತ್ರಗಳ ನಗರಗಳು, ಜನಸಂದಣಿಯ ಪಟ್ಟಣಗಳ ಜೊತೆಗೆ ಅಸಂಖ್ಯಾತ ನಕ್ಷತ್ರಗಳನ್ನು ಪಡೆದ ರಾಜಧಾನಿಗಳ ರಾಜ್ಯವನ್ನು ನಾವು ನಕ್ಚತ್ರ ಪುಂಜಗಳೆಂದು ಹೇಳಬಹುದಾಗಿದೆ.

ನಾವರಿತಂತೆ ನಮಗೆ ಅತಿ ಹತ್ತಿರದ ಗ್ರಹವೆಂದರೆ ಆಲ್ಪಾಸೆಂಟಾರಿ. ಅದು ನಮ್ಮಿಂದ 4.3 ಕೋಟಿ ಕಿ.ಮೀ.ಗಳ ದೂರದಲ್ಲಿವೆ. ಇದಿರುವುದು ನಮ್ಮ ಸಮೀಪದ ನಕ್ಷತ್ರ ಪುಂಜವಾದ ಸೆಂಟಾರಸ್’ ನಲ್ಲಿದೆ.

ಒಂದು ವರ್ಷದ ಕಾಲದಲ್ಲಿ ನಮಗೆ ಕಾಣಿಸುವ 12 ನಕ್ಷತ್ರ ಪುಂಜಗಳ (ರಾಶಿ) ರಾಜ್ಯದಲ್ಲಿ ನಾವು ಪರಿಗಣಿಸಬಹುದು. ಅವುಗಳ ಹೆಸರು ಇಂತಿವೆ ಮೇಷ, ವೃಷಭ, ಮಿಥುನ, ಮಕರ, ಕುಂಭ, ಹಾಗೂ ಮೀನ. ಇವುಗನ್ನೇ ನಾವು ತಿಂಗಳುಗಳಾಗಿ ವಿಂಗಡಿಸಿದ್ದೇವೆ. ಅಲ್ಲದೇ ಇತರ ನಕ್ಚತ್ರ ಪುಂಜಗಳ ಹೆಸರೆಂದರೆ ಒರೈಯನ್, ಕಾಸೇಯೋಪಿಯಾ, ಸಪ್ತರ್ಷಿ ಮಂಡಲ, ಮಹಾ ವ್ಯಾಧ, ಸೆಂಟಾರಸ್ ಹೀಗೆ ಒಟ್ಟು 88 ನಕ್ಷತ್ರ ಪುಂಜಗಳಿವೆ. 1930ರಲ್ಲಿ ಅಂತರರಾಷ್ಟ್ರೀಯ ಖಗೋಳ ವೈಜ್ಞಾನಿಕ ಒಕ್ಕೂಟವು ಈ ಪುಂಜಗಳ ಎಲ್ಲಗಳ ಪರಿಶೀಲಿಸಿದೆ.

ಹಾಗೇ ನೋಡಿದರೆ ಮಾನವ ಬರಿಗಣ್ಣಿಗೆ ಕಾಣುವ ನಕ್ಚತ್ರ ಪುಂಜಗಳ ಸಂಖ್ಯೆ ಒಟ್ಟು 88. ಇಂತಹ ಲಕ್ಷೋಪಲಕ್ಷ ನಕ್ಷತ್ರ ಪುಂಜಗಳು ಸೇರಿ ನಮ್ಮ ಆಕಾಶ ಗಂಗೆಯೆಂಬ ಮಹಾ ಸಾಮ್ರಾಜ್ಯವನ್ನುನಿರ್ಮಿಸಿವೆ. ಹಾಗೆಂದು ಕೇವಲ ನಕ್ಷತ್ರಗಳು ಮಾತ್ರ ಆಕಾಶಗಂಗೆಯ ರೂಪುರೇಷೆಗೆ ಕಾರಣವಲ್ಲ. ಇದರ ಭಾಗವಾಗಿ ಧೂಳು ಮತ್ತು ಅನಿಲಗಳ ಗುಂಪುಗಳು ಸಹ ಸೇರಿಕೊಂಡಿವೆ.