ಆಟದಿಂದ ಆರೋಗ್ಯ

0
541

ಆಟ, ವ್ಯಾಯಾಮದಿಂದ ಮನಸ್ಸು ಉಲ್ಲಸಿತಗೊಂಡು ಕಲಿಕೆಯಲ್ಲಿ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. ಆರೋಗ್ಯ ವೃದ್ಧಿಸುವ ಜತೆಗೆ, ಮೆದುಳು ಚುರುಕಾಗುತ್ತದೆ.

ಮಕ್ಕಳಬಗ್ಗೆ ನಡೆಸಿದ ಒಂದು ಅದ್ಯಾಯನದ ಪ್ರಕಾರ ದೈಹಿಕವಾಗಿ ಹೆಚ್ಚು ಚಟುವಟಿಕೆಯಲ್ಲಿರುವ ಮಕ್ಕಳ ಮೆದುಳು ಹೆಚ್ಚು ಚುರುಕಾಗಿರುತ್ತದೆಯಂತೆ. ಅಷ್ಟೇ ಅಲ್ಲದೇ, ನಿಯಮಿತವಾಗಿ ವ್ಯಾಯಮ ಮಾಡುವ ಮಕ್ಕಳು ಜೀವನದ ಕೌಶಲಗಳನ್ನು ಬೇಗನೆ ಕಲಿತುಕೊಳ್ಳುತ್ತಾರೆ ಶಾಲೆಯಲ್ಲಿ ದೈಹಿಕ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳು ಸಾಮಾಜಿಕವಾಗಿ ಬೆರೆಯುತ್ತಾರೆ ಎನ್ನುತ್ತದೆ ಈ ಅಧ್ಯಯನ.

ಆಟವಾಡುವುದರಿಂದ ಲಾಭ ಅಲವು: ಹೆಚ್ಚೆಚ್ಚು ವ್ಯಾಯಾಮ, ಆಟೋಗಳಲ್ಲಿ ಭಾಗವಹಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಬಹುದಾಗಿದೆ. ಬಾಲ್ಯದಲ್ಲಿ ವ್ಯಾಯಾಮ ಮಾಡುವುದರಿಂದ  ಮಧುಮೇಹ ಮತ್ತು ಹೃದಯ ಸಮಸ್ಯೆಯಿಂದ ಮಕ್ಕಳು ಪಾರಾಗಬಹುದು ಎನ್ನುತ್ತಾರೆ ಮಕ್ಕಳ ತಜ್ಞರು. ಮಕ್ಕಳು ಮೈದಾನದಲ್ಲಿ ಆಟವಾಡುವುದರಿಂದ ಮನಸ್ಸು ಉಲ್ಲಸಿತಗೊಂಡು ಕಲಿಕೆಯಲ್ಲಿ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. ಶಾಲಾ ಚಟುವಟಿಕೆ ಮತ್ತು ಆಟಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಶಾಲೆಯನ್ನು ಹೆಚ್ಚು ಆನಂದಿಸುತ್ತಾರಂತೆ. ವಿವಿಧ ವಯೋವರ್ಗದ ಸುಮಾರು 1000 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿದ ಬಳಿಕ ದೈಹಿಕ ಚಟುವಟಿಕೆಗಳಲ್ಲಿ  ತೊಡಗಿಕೊಂಡಿರು ಮಕ್ಕಳು ಕಲಿಕೆಯಲ್ಲಿ ಮುಂದಿರುತ್ತಾರೆ ಮತ್ತು ಆರೋಗ್ಯವೂ ಉತ್ತಮವಾಗುತ್ತದೆ.

ಸಲಹೆಗಳು:

*ಪ್ರತಿದಿನ ಬೆಳಗ್ಗೆ ಅರ್ಧಗಂಟೆ ಯಾದರೂ ವ್ಯಾಯಮ ಮಾಡಿ.

*ಶಾಲೆಯಲ್ಲಿ ನಡೆಸುವ ಆಟೋಟ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಿ.

*ದೈಹಿಕ ಚಟುವಟಿಕೆಗಳಿಂದ ದೇಹ ಸದೃಢವಾಗುತ್ತದೆ. ಆತ್ಮವಿಶ್ವಾಸ ಹೆಚ್ಚುತ್ತದೆ. ಜೀವನ ಕೌಶಲಗಳನ್ನು ಬೇಗನೇ ಕಲಿತುಕೊಳ್ಳಬಹುದಾಗಿದೆ.