ಯಾವುದೇ ವ್ಯಕ್ತಿ ಅತೀಂದ್ರಿಯ ಶಕ್ತಿಗಳ ವಶಕ್ಕೀಡಾಗಿದ್ದರೆ, ಈ ದತ್ತಾತ್ರೇಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಖಂಡಿತ ಪರಿಹಾರ ಸಿಕ್ಕೆ ಸಿಗುತ್ತೆ!!

0
1888

ಯಾವುದೇ ವ್ಯಕ್ತಿ ಅತೀಂದ್ರಿಯ ಶಕ್ತಿಗಳ (ದೆವ್ವ, ಭೂತ, ಪಿಶಾಚಿ) ವಶಕ್ಕೀಡಾಗಿದ್ದರೆ ಅಂಥವರು ಈ ದೇವಾಸ್ಥಾನ ಒಮ್ಮೆ ಹೋದ್ರೆ ಪರಿಹಾರವಾಗುತ್ತಂತೆ ! ಈ ಜಾಗಕ್ಕಿದೆ ಭೂತ, ಪಿಶಾಚಿಗಳನ್ನು ಓಡಿಸುವ ಶಕ್ತಿ. ಇಂದಿಗೂ ಇಲ್ಲೀ ಪೂಜೆ ಮಂಗಳಾರತಿ ವೇಳೆಗೆ ಮೈ ಮೇಲೆ ದೆವ್ವಗಳು ಬರುತ್ತವಂತೆ. ಹೀಗೆ ಮೈ ಮೇಲೆ ಬರುವ ದೆವ್ವಗಳು ಹುಚ್ಚೆದ್ದು ಕುಣಿಯುತ್ತವೆ. ಈ ದೇಗುಲದಲ್ಲಿ ಇದ್ದು ಸೇವೆ ಮಾಡಿದರೆ ಇಷ್ಟಾರ್ಥಗಳು ಇಡೆರುತ್ತವೆ. ಇಂಥಹ ಕೂತುಹಲ ವಿಷಯವನ್ನು ಇಟ್ಟುಕೊಂಡಿರುವ ದೇವಾಲಯವೇ ಗಾಣಗಾಪುರದ ದತ್ತಾತ್ರೇಯ ದೇವಾಲಯ.

Also read: ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನದ ಹಿನ್ನಲೆ

600 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವು ಕರ್ನಾಟಕದ ಗುಲ್ಬರ್ಗ ಜಿಲ್ಲೆಯ ಗಣಾಗಪುರದಲ್ಲಿ ನೆಲೆಗೊಂಡಿದೆ. ಹಿಂದೊಮ್ಮೆ ಅತ್ರಿ ಮಹರ್ಷಿಗಳು ತಪಸ್ಸನ್ನು ಆಚರಿಸಿ ಶಿವನನ್ನು ಮೆಚ್ಚಿಸಿ ಶಿವನೆ ತನಗೆ ಮಗನಾಗಿ ಹುಟ್ಟಿ ಬರಬೇಕೆಂದು ಪ್ರಾರ್ಥಿಸುತ್ತಾರೆ. ಅದಕ್ಕೆ ಅತ್ರಿ ಮಹರ್ಷಿಗಳು ಕೋರಿಕೆಯಂತೆ ದತ್ತಾತ್ರೇಯನ ರೂಪದಲ್ಲಿ ಅತ್ರಿ ಮಹರ್ಷಿಗೆ ಮಗನಾಗಿ ಮೂರು ಮುಖಗಳುಳ್ಳ ದತ್ತಾತ್ರೇಯರು ಆಂದ್ರಪ್ರದೇಶದಲ್ಲಿ ಜನಸಿದರು. ಈ ಸ್ವಾಮಿ ಭೂಲೋಕದಲ್ಲಿ ಮೂರು ಅವತಾರಗಳನ್ನು ಹೊಂದಿ ಅವತಾರ ಪುರುಷ ಎನಿಸಿಕೊಂಡಿದ್ದಾರೆ. ದತ್ತಾತ್ರೇಯನು ಗುಲ್ಬಾರ್ಗ ಜಿಲ್ಲೆಯ ಗಣಗಪುರದಲ್ಲಿ ಸರಸ್ವತಿ ನರಸಿಂಹಸ್ವಾಮಿಯಾಗಿ ಎರಡನೇ ಅವತಾರವೆತ್ತಿ, ಮಹರಾಷ್ಟ್ರದಲ್ಲಿ ಮೂರನೇ ಅವತಾರದೊಂದಿಗೆ ಸಮಾಪ್ತಿಯಾಗಿದ್ದಾರೆ.

Also read: ಯಾವುದೇ ವ್ಯಕ್ತಿ ಅತೀಂದ್ರಿಯ ಶಕ್ತಿಗಳ ವಶಕೊಳಗಾಗಿದ್ದೀರಾ..? ಈ ದೇವಾಸ್ಥಾನಗಳಿಗೆ ಹೋದ್ರೆ ಪರಿಹಾರವಾಗುತ್ತಂತೆ !

ಇಲ್ಲಿರುವ ಮುಖ್ಯ ದೇವಾಲಯವೆ ದತ್ತಾತ್ರೇಯರ ಎರಡನೇ ಅವತಾರವಾದ ಸರಸ್ವತಿ ನರಸಿಂಹಸ್ವಾಮಿಯ ನಿರ್ಗುಣ ಪಾದುಕೆಗಳಿವೆ. ಗುರುದತ್ತ ಅನ್ನುವ ಹೆಸರಿನಿಂದ ಸುಪ್ರಸಿದ್ಧಿ ಹೊಂದಿರುವ ಈ ದೇವಸ್ಥಾನವನ್ನು ಒಂದು ಅದ್ಭುತ ಶಕ್ತಿ ಪಿಠವೆಂದೇ ಕರೆಯಲಾಗುತ್ತದೆ. ಈ ದೇವಾಲಯ ಇಷ್ಟು ಪ್ರಸಿದ್ಧಿ ಪಡೆಯುವ ಮುಖ್ಯ ಕಾರಣವೆಂದರೆ ಈ ಸ್ಥಳದಲ್ಲಿರುವ ಅದ್ಭುತ ಶಕ್ತಿ. ಆ ಶಕ್ತಿ ಯಾವುದೆಂದರೆ ಮನುಷ್ಯನಿಗೆ ಮೆಟ್ಟಿ ಕೊಂಡಿರುವ ದೆವ್ವಗಳು ಈ ಜಾಗದಲ್ಲಿ ದೇವರಿಗೆ ಮುಖ ಮುಖಿ ಯಾಗುತ್ತವೆಯಂತೆ. ಅಮಾವಾಸ್ಸೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಜನರು ಇಲ್ಲಿಗೆ ಬರುತ್ತಾರೆ, ಮತ್ತು ದುಷ್ಟಶಕ್ತಿಗಳಿಂದ ಬಳಲುವವರು 11.30 ಗಂಟೆಗೆ ಪ್ರಾರಂಭವಾಗುವ ‘ಮಹಾಮಂಗಳಾರತಿ’ ಸಮಯದಲ್ಲಿ ದುಷ್ಟಶಕ್ತಿಗಳು ದೇವಾಲಯದ ಒಳಗಡೆ ಇರುವ ಛಾವಣಿಗಳನ್ನು ಏರಿ ಕೂಗಾಡುವುದು, ಕಿರಿಚಾಡುವುದನ್ನು ಇಲ್ಲಿ ನೋಡಬಹುದಾಗಿದೆ.

Also read: ದತ್ತ ನಾಮೋಚ್ಚಾರಣೆ ಭವಕತ್ತಲನ್ನು ದೂರಮಾಡುತ್ತದೆ..ಅಂತಹ ದತ್ತ ಜಯಂತಿಯ ಮಹತ್ವದ ಬಗ್ಗೆ ತಿಳಿಯಲು ಇದನ್ನು ಓದಿ…

ಇಲ್ಲಿಗೆ ಬರುವ ಭಕ್ತರು ವಿಶೇಷವಾಗಿ ನಿರ್ಗುಣ ಪಾದುಕೆಗಳ ಪೂಜೆಯನ್ನು ಮಾಡುತ್ತಾರೆ. ಇಲ್ಲಿನ ಜನರ ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಾಣಗಾಪುರದಲ್ಲಿರುವ ಮನೆಗಳ ಪೈಕಿ ಕನಿಷ್ಠ ಐದು ಮನೆಗಳಲ್ಲಿ ಭೀಕ್ಷೆ ಬೇಡಿ ನಂತರ ಪಾದುಕೆಯ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ. ಕಾರಣ ಇಲ್ಲಿ ಸ್ವತಃ ದತ್ತಾತ್ರೇಯ ಸ್ವಾಮಿಯವರು ಇಂದಿಗೂ ಮುಂಜಾನೆಯ ವೇಳೆಗೆ ಸಂಗಮದಲ್ಲಿ ಸ್ನಾನ ಮಾಡಿ ಮಧ್ಯಾಹ್ನದ ಸಮಯದಲ್ಲಿ ಭೀಕ್ಷಾಟನೆ ಮಾಡಿ ಭಕ್ತರ ಪಾದುಕಾ ಪೂಜೆಯನ್ನು ಸ್ವಕರಿಸುತ್ತಾರೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಹೀಗೆ ಮಾಡುವುದರಿಂದ ಗುರು ದತ್ತಾತ್ರೇಯರ ಕೃಪೆಯಾಗಿ ಭಕ್ತರ ಇಷ್ಟಾರ್ಥಗಳನ್ನು ಈಡೆರಿಸುತ್ತಾರೆ ಎನ್ನುವ ಬಲವಾಗಿ ನಂಬಲಾಗುತ್ತಿದೆ.

Also read: ದತ್ತಾತ್ರೇಯ ದೇವರ ಪ್ರಿಯವಾದ ಅತ್ತಿ / ಔದುಂಬರ ಮರದಲ್ಲಿ ಎಷ್ಟೆಲ್ಲ ಆರೋಗ್ಯಕರ ಗುಣಗಳಿವೆ ಅಂತ ಗೊತ್ತಾದ್ರೆ ಆಶ್ಚರ್ಯ ಪಡ್ತಿರಾ..

ಇಲ್ಲಿನ ಭಕ್ತರ ಅನಿಸಿಕೆ ಪ್ರಕಾರ ಗುರು ದತ್ತಾತ್ರೇಯರ ಈ ಜಾಗ ವಿಸ್ಮಯ ವಿಚಿತ್ರಗಳನ್ನು ಒಳಗೊಂಡಿದೆಯಂತೆ. ಈ ಕ್ಷೇತ್ರಕ್ಕೆ ಬಂದು ಸೇವೆಯನ್ನು ಮಾಡಿ ಹೋದವರ ಪ್ರಕಾರ ಭಕ್ತಿಯಿಂದ ತಮ್ಮ ಸಮಸ್ಸೆಗೆ ಶಾಂತಿ ದೊರೆತಿದೆಯಂತೆ. ನೀವು ಒಮ್ಮೆ ತಪ್ಪದೆ ಭೇಟಿ ಕೊಡಿ.