ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಕೇಸ್-ನ ಚಾರ್ಜ್ ಶೀಟ್-ನಲ್ಲಿ ಜಾರ್ಜ್ ಹೆಸರು

0
546

ಡಿವೈಎಸ್‍ಪಿ ಎಂ ಕೆ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಮೂರು ಜನರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿನ ಕೆ.ಜೆ ಜಾರ್ಜ್, ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ, ಎ.ಎಂ ಪ್ರಸಾದ್, ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.

ಸಿಐಡಿ ಕ್ಲೀನ್ ಚಿಟ್ ಪಡೆದಿದ್ದು ಈ ಮೂವರು ಈಗ ಮತ್ತೆ ತನಿಖೆಯನ್ನು ಎದುರಿಸಬೇಕಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನು ಸಚಿವ ಹಾಗೂ ಅಧಿಕಾರಿಗಳ ವಿರುದ್ಧ ಐಸಿಸಿ 306, ಐಸಿಸಿ 34 ಆರೋಪ ಇದೆ. ಈ ಸಂಬಂಧ ಸಿಬಿಐ ಎಎಫ್ ಐಆರ್ ದಾಖಲಿದೆ. ಕೇಂದ್ರ ಕಚೇರಿಯಿಂದ ಬಂದ ಆದೇಶದ ಮೇರೆಗೆ ಚೆನ್ನೈ ಸಿಬಿಐ ಅಧೀಕಾರಿಗಳು ಎಫ್ ಐಆರ್ ದಾಖಲಿಸಿದ್ದಾರೆ. ಇನ್ನು ಸಿಐಡಿ ತನಿಖೆಯಿಂದ ಬಚಾವಾದ ಬಳಿಕ ಅಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್‍ ಸೆ. 5 ರಂದು ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಸಿಬಿಐಗೆ ವಹಿಸಿತ್ತು ಅಲ್ಲದೆ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ವರದಿ ಸಲ್ಲಿಸಿದೆ.

ಪ್ರಕರಣ ಏನು?: ಎಂ.ಕೆ ಗಣಪತಿ ಮಂಗಳೂರಿನ ವಸತಿ ಗೃಹದಲ್ಲಿ 2016 ಜು.7 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಇನ್ನು ಸಾವಿಗೂ ಮುನ್ನ ಗಣಪತಿ ಸಂದರ್ಶನ ಒಂದರಲ್ಲಿ ತಮಗೇನಾದ್ರು ಆದ್ರೆ, ಅದಕ್ಕೆ, ಸಚಿವ ಜಾರ್ಜ್, ಐಪಿಎಸ್ ಅಧಿಕಾರಿ ಮೊಹಂತಿ, ಎಂ.ಎಂ ಪ್ರಸಾದ್ ಎಂದು ಹೇಳಿದ್ರು.

ಗಣಪತಿ ಅವರ ಸಾವಿನ ತನಿಖೆಯ ಸಂದರ್ಭದಲ್ಲಿ ಹಲವು ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ. ಅವರ ಮೊಬೈಲ್ ನಲ್ಲಿದ್ದ ಕೆಲವು ನಂಬರ್ ಗಳನ್ನು ಡಿಲಿಟ್ ಮಾಡಲಾಗಿದೆ. ಕಾಲ್ ಲೀಸ್ಟ್ ನಿಂದಲೂ ಅನೇಕ ನಂಬರ್ ಗಳನ್ನು ಅಳಿಸಲಾಗಿದೆ ಎನ್ನಲಾಗಿದೆ. ಇನ್ನು 145 ಕ್ಕೂ ಅಧಿಕ ಪಿ.ಡಿ.ಎಫ್. ಫೈಲ್ ಗಳು ಕೂಡ ನಾಶವಾಗಿವೆ. ಪೆನ್ ಡ್ರೈವ್, ಮೊಬೈಲ್ ಫೋನ್ ನಲ್ಲಿ ಕೆಲವು ಪ್ರಮುಖ ಮಾಹಿತಿಗಳನ್ನು ಡಿಲಿಟ್ ಮಾಡಲಾಗಿದೆ.

ಗಣಪತಿ ಅವರ ಕೊನೆ ದಿನದ ದೂರವಾಣಿ ಕರೆಗಳ ಮಾಹಿತಿಯನ್ನು ಡಿಲಿಟ್ ಮಾಡಲಾಗಿದೆ. 791 ಟೆಕ್ಸ್ಟ್ ಫೈಲ್, 52 ಮೆಸೇಜ್, 352 ಹೆಸರು, 910 ಎಂ.ಎಸ್. ಎಕ್ಸೆಲ್ ಫೈಲ್ಸ್, 100 ಇಮೇಲ್, 2500 ಇಮೇಜ್, 30 ಕಾಲ್ ಲಾಗ್, 31 ಪಿ.ಪಿ.ಟಿ ಡಿಲಿಟ್ ಮಾಡಲಾಗಿದೆ. ಫೋರೆನ್ಸಿಕ್ ವರದಿಯಿಂದ ಸಾಕ್ಷ್ಯಾಧಾರ ನಾಶವಾಗಿರುವುದು ಬಹಿರಂಗವಾಗಿದೆ ಎಂದು ಹೇಳಲಾಗಿದೆ.