ಡಿವೈಎಸ್ಪಿ ಗಣಪತಿ suicideನ ಸ್ಫೂಟಕ ಮಾಹಿತಿ…

0
1134

ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಮಾಸುವ ಮುನ್ನವೇ ಇದೀಗ ಮತ್ತೊಬ್ಬ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು, ಮಂಗಳೂರು ಕೊಡಗು ಮೂಲದ, ಮಂಗಳೂರು ಐಜಿ ಕಚೇರಿ ಡಿವೈಎಸ್ಪಿ ಎಂ.ಕೆ. ಗಣಪತಿ (45) ಗುರುವಾರ ಸಂಜೆ ಆತ್ಮಹತ್ಮೆ ಮಾಡಿಕೊಂಡಿದ್ದಾರೆ.

ಕಲ್ಲಪ್ಪ ಹಂಡಿಬಾಗ್ ಅವರು ಮಂಗಳವಾರವಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಡೆದು ಎರಡು ದಿನಕಳೆದಿದ್ದು, ಇದೀಗ ಮತ್ತೊಬ್ಬ ಡಿವೈಎಸ್ಪಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಗಣಪತಿಯವರು ಮೂಲತಃ ಸೋಮವಾರಪೇಟೆಯ ರಂಗಸಮುದ್ರದವರಾಗಿದ್ದು, ಇತ್ತೀಚೆಗಷ್ಟೇ ಬೆಂಗಳೂರಿನಿಂದ ಮಂಗಳೂರಿಗೆ ವರ್ಗಾವಣೆಯಾಗಿದ್ದರು.

ಇದರಂತೆ ಗುರುವಾರ ಮಂಗಳೂರಿನಿಂದ ಮಡಿಕೇರಿಗೆ ಹೋಗಿದ್ದ ಅವರು ಲಾಡ್ಜ್ ವೊಂದರಲ್ಲಿ ರೂಂ ಒಂದನ್ನು ಬಾಡಿಗೆಗೆ ಪಡೆದಿದ್ದರು. ಈ ರೂಮ್ ನಲ್ಲೇ ಗಣಪತಿಯವರು ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಗಣಪತಿಯವರು ಸ್ಥಳೀಯ ಖಾಸಗಿ ವಾಹಿನಿಯೊಂದಕ್ಕೆ ಭೇಟಿ ನೀಡಿ ಸಂದರ್ಶನವೊಂದನ್ನು ನೀಡಿದ್ದರು. ಸಂದರ್ಶನದ ವೇಳೆ ಹಿರಿಯ ಅಧಿಕಾರಿಗಳು ತಮಗೆ ನೀಡುತ್ತಿರುವ ಕಿರುಕುಳ ಹಾಗೂ ಸಮಸ್ಯೆಗಳನ್ನು ಹೇಳಿಕೊಂಡಿದ್ದರು.

ಸಚಿವರೊಬ್ಬರಿಂದ ಮಾನಸಿಕವಾಗಿ ಕಿರುಕುಳ ಆಗುತ್ತಿದೆ ಎಂದು ಹೇಳಿದ್ದರು. ಅಲ್ಲದೆ, ಕಿರುಕುಳ ನೀಡಿದ್ದ ಅಧಿಕಾರಿಗಳ ಹೆಸರನ್ನು ಹೇಳಿಕೊಂಡಿರುವ ಗಣಪತಿಯವರು ಮುಂದೆ ನನಗೇನಾದರೂ ಆದರೆ, ಗುಪ್ತಚರ ದಳದ ಎಡಿಜಿ ಎ.ಎಂ. ಪ್ರಸಾದ್, ಐಡಿಪಿ ಪ್ರಣವ್ ಮೊಹಾಂತಿ, ಮಾಜಿ ಗೃಹ ಸಚಿವ ಕೆಜೆ. ಜಾರ್ಜ್ ಅವರೇ ನೇರ ಹೊಣೆಯಾಗಿರುತ್ತಾರೆಂದು ಹೇಳಿಕೊಂಡಿದ್ದರು.

ಪ್ರಾಮಾಣಿಕರಿಗೆ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ಉನ್ನತ ಹುದ್ದೆಯಲ್ಲಿರುವವರು ಈ ರೀತಿಯಾಗಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದರು. ಕಿರುಕುಳ ನೀಡಿದ ಅಧಿಕಾರಿಗಳ ಹೆಸರನ್ನು ಸೂಚಿಸುವುದರೊಂದಿಗೆ ತಮಗೆ ಏನಾದರೂ ಆದರೆ ಈ ಅಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆಂದು ಹೇಳುವ ಮೂಲಕ ಸಂದರ್ಶನದಲ್ಲಿ ತಮ್ಮ ಸಾವಿನ ಸುಳಿವನ್ನು ಗಣಪತಿಯನ್ನು ನೀಡಿದ್ದರು ಎಂದು ಹೇಳಲಾಗುತ್ತಿದೆ.

ಇನ್ನು ಗಣಪತಿಯವರನ್ನು ಸಂದರ್ಶಿಸಿದ ಪತ್ರಕರ್ತ ಹೇಳಿಕೆಯನ್ನು ನೀಡಿದ್ದು, ಮಾಜಿ ಗೃಹವರು ತಮಗೆ ಕಿರುಕುಳ ನೀಡುತ್ತಿದ್ದಾರೆಂದು ಗಣಪತಿಯವರು ನನ್ನ ಬಳಿ ಹೇಳಿಕೊಂಡಿದ್ದರು.

2008ರಲ್ಲಿ ಮಂಗಳೂರಿನಲ್ಲಿ ನಡೆದ ಚರ್ಚ್ ಗಲಾಟೆಗೆ ಸಂಬಂಧಿಸಿ ಸಚಿವರು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲೇ ನನ್ನನ್ನು ಇನ್ಸ್ ಪೆಕ್ಟರ್ ಹುದ್ದೆಯಿಂದ ಸಸ್ಪೆಂಡ್ ಕೂಡ ಮಾಡಿ ದ್ವೇಷ ಸಾಧಿಸಿದ್ದರು ಎಂದು ಗಣಪತಿಯವರು ಹೇಳಿದ್ದರು ಎಂದು ಪತ್ರಕರ್ತ ಹೇಳಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಗಣಪತಿಯವರು ಡೆತ್ ನೋಟ್ ವೊಂದನ್ನು ಬರೆದಿಟ್ಟಿದ್ದು, ಡೆತ್ ನೋಟ್ ನಲ್ಲಿರುವ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

source daily hunt