ಗಣೇಶ ಹಬ್ಬದ ದಿನ ಈ ಕೆಲಸಗಳನ್ನ ಅಪ್ಪಿ ತಪ್ಪಿನೂ ಮಾಡಕ್ಕೆ ಹೋಗ್ಬೇಡಿ….!!

0
1963

ಜನಜೀವನದ ಎಲ್ಲ ಶುಭಕಾರ್ಯಗಳಲ್ಲೂ-ವಿದ್ಯಾಭ್ಯಾಸ, ವಿವಾಹ, ಉಪನಯನ, ಗೃಹಪ್ರವೇಶ, ಇತ್ಯಾದಿ-ಮೊದಲ ಪುಜೆಯನ್ನು ಇಂದಿಗೂ ಭಾವುಕರು ಗಣಪತಿಗೆ ಸಲ್ಲಿಸುತ್ತಾರೆ. ನಿತ್ಯ ಆತನ ದರ್ಶನ ಮಾಡುವುದರಿಂದ ಮನಸ್ಸು ಶಾಂತವಾಗಿರುತ್ತದೆ. ಎಲ್ಲ ಕಾರ್ಯಗಳು ಯಶಸ್ವಿಯಾಗಿ ನೆರವೇರುತ್ತವೆ. ಹೀಗೆ ಗಣೇಶನ ದರ್ಶನ ಪಡೆಯುವಾಗ ಕೆಲವು ನಿಯಮಗಳಿವೆ.

ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವ ವನ್ನು ಕಡಿಮೆ ಮಾಡುತ್ತದೆ.

ಗಣೇಶನ ಶರೀರದ ಪ್ರತಿಯೊಂದು ಅಂಗಾಂಗವೂ ತನ್ನದೇ ಆದ ಮೌಲ್ಯ ಮತ್ತು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರತಿಯೊಂದು ಭಾಗದಲ್ಲಿಯೂ ಜೀವನ ಹಾಗೂ ಬ್ರಹ್ಮಾಂಡದ ಅಂಶಗಳು ಅಡಗಿವೆ. ಆದರೆ ಗಣೇಶನ ಹಿಂಬದಿಯನ್ನು ಮಾತ್ರ ನೋಡಬಾರದು. ಕಾರಣ, ಗಣೇಶನ ಹಿಂಭಾಗದಲ್ಲಿ ದಾರಿದ್ರ್ಯ ನೆಲೆಸಿದೆಯಂತೆ. ಗಣೇಶನ ಹಿಂಭಾಗವನ್ನು ದರ್ಶನ ಮಾಡುವ ವ್ಯಕ್ತಿ ಎಂತಹ ಶ್ರೀಮಂತನಾಗಿರಲಿ ಆತನಿಗೆ ಬಡತನ ಬರಲಿದೆಯಂತೆ. ಹಾಗಾಗಿ ಗಣೇಶನ ಹಿಂಭಾಗವನ್ನು ನೋಡುವಂತಿಲ್ಲ. ಗೊತ್ತಿಲ್ಲದೆ ನೋಡಿದಲ್ಲಿ ಗಣೇಶನಿಗೆ ಕ್ಷಮೆ ಕೋರಿ, ಪ್ರಾರ್ಥನೆ ಮಾಡಿದ್ರೆ ಎಲ್ಲ ಪಾಪಗಳು ಪರಿಹಾರವಾಗಲಿದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

ಗಣಪತಿ ಹಬ್ಬದ ಚಂದ್ರನನ್ನು ನೋಡಬಾರದು ಅಂತ ಇದೆ. ನೋಡಿದರೆ ನಿಮ್ಮ ಮೇಲೆ ಮಿಥ್ಯಾಪವಾದ ಬರುತ್ತೆ ಅಂತ ಹೇಳುತ್ತಾರೆ. ಒಂದು ವೇಳೆ ಅಕಸ್ಮಾತ್ ಚಂದ್ರದರ್ಶನ ಮಾಡಿದಲ್ಲಿ, ಅದರ ದೋಷ ಪರಿಹಾರಕ್ಕಾಗಿ ಸ್ಯಮಂತಕೋಪಾಖ್ಯಾನವನ್ನು(ಶಮಂತಕ ಮಣಿ ಕಥೆ) ಶ್ರವಣ ಮಾಡಿ, ಈ ಶ್ಲೋಕವನ್ನು ಪಠಿಸಬೇಕು.

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾರೋಧಿಃ ತವಹ್ಯೇಷಃ ಸ್ಯಮಂತಕಃ ||