ಕೋಟ್ಯಾಂತರ ಜನರಿಗೆ ಆಧಾರವಾಗಿರುವ ಗಂಗಾ ನದಿಯ ಮೂಲ ಗಂಗೋತ್ರಿ ಚಿಂತಾಜನಕ!!!

0
788

ಗಂಗಾ ನದಿ ನಮ್ಮ ಪವಿತ್ರ ನದಿ.  ನಾವು “ಮಾತೆ’’ ಎಂದೇ ಪೂಜಿಸುತ್ತೇವೆ. ಈ ಮಾತೆಯ ಜನ್ಮ ಸ್ಥಳ ಗಂಗೋತ್ರಿ. ಹಿಮಾಲಯದ ಹಿಮರಾಶಿಗಳಲ್ಲಿ ಸಿಯಾಚಿನ್ ಬಿಟ್ಟರೆ ಗಂಗೋತ್ರಿಯೇ ದೊಡ್ಡ ಹಿಮರಾಶಿ. “ಗೋಮುಖ’’ಎಂಬ ಸ್ಥಳದಲ್ಲಿ ಜನ್ಮ ತಳೆಯುವ ಹಿಮರಾಶಿ ಗಂಗೋತ್ರಿ 30 ಕಿ.ಮೀ.ಗಳಷ್ಟು ಉದ್ದ ಹಾಗೂ 2.5 ಕಿ.ಮೀ.ಗಳಷ್ಟು ಅಗಲವಾಗಿದೆ. ಈ ಹಿಮರಾಶಿ ಆರಂಭದಲ್ಲಿ ಭಾಗೀರಥಿ ನದಿಗೆ ಜೀವ ತುಂಬಿ, ಅಲ್ಲಿಂದ ಭಾಗೀರಥಿಯೊಂದಿಗೆ ಅಲಕನಂದಾ ನದಿಗೆ  ಸೇರಿ ಮುಂದೆ ಗಂಗಾನದಿಗೆ ಚೈತನ್ಯ ತುಂಬುತ್ತದೆ. ಶತಕೋಟಿ ವರ್ಷಗಳಿಂದ ಗಂಗಾನದಿಗೆ ಮೂಲವಾಗಿರುವ ಗಂಗೋತ್ರಿ ಹಿಮರಾಶಿ ಕರಗುತ್ತಿರುವುದನ್ನು ವಿಜ್ಞಾನಿಗಳು 1842ರಲ್ಲೇ  ಗುರುತಿಸಿದ್ದರು. ಆದರೀಗ 1970ರಿಂದ ಗಂಗೋತ್ರಿ ಹಿಮರಾಶಿ ಅತ್ಯಂತ ವೇಗವಾಗಿ ಕರಗುತ್ತಿದೆ. ಇದೇ  ಪರಿಸ್ಥಿತಿ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ಗಂಗೋತ್ರಿ ಕರಗಿಹೋಗಿ ಹಿಂದೆ ಹಿಂದೂಗಳ ಪವಿತ್ರ ನದಿ ಸರಸ್ವತಿ ಕಣ್ಮರೆಯಾದಂತೆ ಗಂಗಾಮಾತೆಯೂ ಕಣ್ಮರೆಯಾಗಲಿದ್ದಾಳೆ. ಈಗಾಗಲೇ ಗಂಗಾ ನದಿ ತನ್ನ ಪಾತ್ರವನ್ನು ಕಳೆದುಕೊಳ್ಳುತ್ತಿದೆ. ಇಲ್ಲಿ ಇನ್ನೊಂದು ಅಂಶವನ್ನು ಗಮನಿಸಬೇಕು.  ಮಳೆಗಾಲದಲ್ಲಿ  ಗಂಗಾನದಿ ಭರದಿಂದ ಹರಿಯಲು
ಗಂಗೆಯನ್ನು ಸೇರುವ ನೇಪಾಳದ ನದಿಗಳ ಆರ್ಭಟವೇ ಕಾರಣ.

Image result for gangotri
Image Credits: Shikhar.com

ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸುಮಾರು 1500ಕ್ಕಿಂತಲೂ ಹೆಚ್ಚು ಹಿಮನದಿಗಳು(ಹಿಮರಾಶಿಗಳು) ಇವೆ. ಇವು ಹಿಮಾಲಯದ ಒಟ್ಟು 33,000 ಚ.ಕಿ.ಮೀ.ಗಳಷ್ಟು ಜಾಗವನ್ನು ಆಕ್ರಮಿಸಿಕೊಂಡಿವೆ. ಹಿಮಾಲಯದಲ್ಲಿ  ಹುಟ್ಟಿ ಹರಿಯುವ ಗಂಗೆ, ಭಾಗೀರಥಿ, ಬ್ರಹ್ಮಪುತ್ರ ಮೊದಲಾದ ನದಿಗಳು ಪ್ರತಿವರ್ಷ ಮಳೆಗಾಲದಲ್ಲಿ ಮಳೆಯಿಂದ ತುಂಬಿ ಹರಿದರೆ, ಬೇಸಿಗೆಯಲ್ಲಿ ಬಿಸಿಲಿನ ತಾಪದಿಂದ ಹಿಮಾಲಯದ ಹಿಮರಾಶಿಗಳು ಕರಗಿ ಈ ನದಿಗಳಿಗೆ ಜೀವ ತುಂಬುತ್ತವೆ. ಈ ಹಿಮನದಿಗಳಿಂದ  ವರ್ಷಕ್ಕೆ 8.6 ಮಿಲಿಯನ್ ಕ್ಯೂಬಿಕ್ ಮೀಟರ್‍ಗಳಷ್ಟು ನೀರು ಭಾರತದ ಉಪಖಂಡದಲ್ಲಿ ಹರಿಯುತ್ತದೆ. ಆದರೆ ಹೆಚ್ಚುತ್ತಿರುವ ಭೂತಾಪದಿಂದ ಹಿಮಾಲಯದ ಹಿವiರಾಶಿ ಒಣಗಿ ಹೋಗುತ್ತಿದೆ. “ಇಂಟರ್ ಗವರ್ನಮೆಂಟ್ ಪ್ಯಾನೆಲ್ ಆನ್ ಕ್ಲೈಮೆಟ್ ಚೇಂಜ್’’ ವರದಿಯ ಪ್ರಕಾರ ಹಿಮಾಲಯ ಮತ್ತು ಟಿಯಾನ್‍ಶನ್ ಪರ್ವತ ಪ್ರದೇಶದಲ್ಲಿ ಕಳೆದ ದಶಕದಿಂದ ಶೇ. 70ರಷ್ಟು ಹಿಮರಾಶಿ ಕರಗಿಹೋಗಿದೆ. ಅಂಥವುಗಲ್ಲಿ ಗಂಗಾನದಿಯ ಜೀವವಾದ ಗಂಗೋತ್ರಿಯೂ ಒಂದು!  ಗಂಗೋತ್ರಿ ಈಗಾಗಲೇ ಅಳಿವಿನ ಅಂಚಿಗೆ ಬಂದು ತಲುಪಿದೆ. ಗಂಗೋತ್ರಿ ಅಳಿದರೆ ಗಂಗಾ ನದಿಯೂ ಅಳಿಯುತ್ತದೆ.