ಭೂಮಿಗೆ ಮೊದಲು ಬಂದ ಗಂಗೋತ್ರಿ

0
972

ಉತ್ತರಕಾಶಿಯಿಂದ ಗಂಗೋತ್ರಿಗೆ 99.ಕಿ.ಮೀ. ದೂರ. ಗಂಗೆಯು ಉತ್ತರದಿಂದ ಹರಿದುಬರುವುದರಿಂದ ಇದನ್ನು ‘ಗಂಗೋತ್ರಿ’ ಎಂಬ ಹೆಸರು ಬಂದಿತೆನ್ನುತ್ತಾರೆ. ಗಂಗೆಯು ಭವಸಾಗರದಿಂದ ಪಾರುವುದರಿಂದ (ತಾರಣ) ಇದು ‘ಗಂಗೋತ್ರಿ’ಯಾಯಿತು ಎಂದು ಇನ್ನೋಂದು ವಿವರಣೆ. ಇಲ್ಲಯ ಮೊದಲ ಮಂದಿರವನ್ನುಆದಿ ಶಂಕರಾಚಾರ್ಯರು ಕಟ್ಟಿದ್ದರೆಂದು ಪ್ರತೀತಿ. 19ನೇಯ ಶತಮಾನದಲ್ಲಿ ಗೂರ್ಖಾ ಜನರಲ್ ಆಗಿದ್ದು ಅಮರ್ ಸಿಂಗ್ ಥಾಪಾ ಹೊಸ ಮಂದಿರವನ್ನು ಕಟ್ಟಿದನೆಂದು, ನಂತರ ಅದರ ಜೀರ್ಣೋದ್ಧಾರವನ್ನು 1920ರಲ್ಲಿ ಜಯಪುರದ ರಾಜ ಮಾಧೋಸಿಂಗ್ ಮಾಡಿಸದನೆಂದು ಐತಿಹ್ಯವಿದೆ. ಈ ಮಂದಿರ ನಿಂತಿರುವುದು ಭಗೀರಥ ತಪಸ್ಸು ಮಾಡಿದ ಭಗೀರಥಶಿಲೆಯ ಮೇಲೆ ಎಂದು ಹೇಳುತ್ತಾರೆ.

ಪ್ರಾಯಶಃ ಗಂಗೆ ಈ ಸ್ಥಳದಲ್ಲಿ ಮೊದಲ ಭೂಮಿಯನ್ನು ಮುಟ್ಟಿರಬೇಕು, ಕ್ರಮೇಣ ಹಿಮನದಿ ಹಿಂದೆ ಸರಿಯುತ್ತ ಇಂದಿನ ಗೋಮುಖ ತಲುಪಿರಬಹುದು. ಮಂದಿರದಲ್ಲಿ ಗಂಗೆ, ಯಮುನಾ, ಸರಸ್ವತಿ, ಲಕ್ಷ್ಮೀ, ಅನ್ನಪೂರ್ಣೇ ಮತ್ತು ಭಗೀರಥಿ ಸುಮಾರು 49ಅಡಿ ಎತ್ತರದಿಂದ ಕೆಳಗಿನ ಲಿಂಗಾಕಾರದ ಶಿಲೆಗಳ ಮೇಲೆ ಭೋರ್ಗರೆಯುತ್ತ ಧುಮುಕಿ ಅಭಿಷೇಕ ಮಾಡುತ್ತಾಳೆ, ಇದನ್ನು ಗೌರೀಕುಂಡ (ರಾಧಾಕುಂಡ) ಎಂದು ಕರೆಯುತ್ತಾರೆ, ಗಂಗೋತ್ರಿಮಂದಿರವು ದೀಪಾವಳಿಯಿಂದ ಮೇ ತಿಂಗಳವರೆಗೆ ಮುಚ್ಚಿರುತ್ತದೆ. ಚಳಿಗಾಲದಲ್ಲಿ ಗಂಗಾಮೂರ್ತಿಯನ್ನು ಮುಖ್ವಾ ಎಂಬ ಹಳ್ಳಿಯಲ್ಲಿಟ್ಟು (29 ಕಿ.ಮೀ. ದೂರದ ‘ಹರಸಿಲ್’ನಲ್ಲಿ) ಪೂಜಿಸುತ್ತಾರೆ. ಪಾಂಡವರು ಇಲ್ಲಿ ಕೆಲವು ರಾತ್ರಿ ತಂಗಿದ್ದರೆಂದು. (ಯಜ್ಞ ಮಾಡಿದ್ದರೆಂದು) ಹೇಳುತ್ತಾರೆ. ಗಂಗೋತ್ರಿಯಿಂದ 11.ಕಿ.ಮೀ. ದೂರದ ಭೈರೋಘಾಟಿಯಿಂದ ಜಹ್ನು ಋಷಿಯ ಆಶ್ರಮವಿದೆ.