ಗಣೇಶನ ಪ್ರಿಯ ಪತ್ರೆ ಗರಿಕೆ ಹುಲ್ಲಿನ ಔಷಧೀಯ ಗುಣಗಳು…

0
1822

ಕನ್ನಡದಲ್ಲಿ ಕರಿಕೆ ಹುಲ್ಲು, ಅಂಬಟಿ ಎಂದು ಕರೆಯಲ್ಪಡುವ ಈ ಪತ್ರೆ ಗಣೇಶನ ಪೂಜೆಯಲ್ಲಿ ಉಪಯೋಗಿಸುವ ಅಷ್ಟಮಂಗಳ ವಸ್ತುಗಳಲ್ಲಿ ಒಂದು. ಹಿಂದೆ ಅನಲಾಸುರ ಎಂಬ ರಾಕ್ಷಸ ಗಣಪತಿಯ ಹೊಟ್ಟೆಯಲ್ಲಿ ಹೋಗಿ ಕುಳಿತಾಗ ಅದರಿಂದ ಉರಿಯು ಹೆಚ್ಚಾದಾಗ, ಉರಿಯ ಶಮನಕ್ಕಾಗಿ ಪಾರ್ವತಿಯು ೨೧ ದೂರ್ವಪಾತ್ರೆಯ ರಸವನ್ನು ಗಣೇಶನಿಗೆ ಕುಡಿಯಲು ಕೊಡಲಾಗಿ ಉರಿಯು ತಣ್ಣಗಾಯಿತು. ಅಂದಿನಿಂದ ದೂರ್ವಾಪತ್ರೆಯು ಗಣೇಶನ ಪ್ರಿಯ ಪತ್ರೆಯಾಯಿತು ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ.

Image result for garike

ಪೂಜೆಗಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ದೂರ್ವೆ ಮುಂಚೂಣಿಯಲ್ಲಿದೆ. ಅದರ ಕೆಲವು ಔಷದಿಯ ಗುಣಗಳು ಇಂತಿವೆ:

೧)ಸುತ್ತ ಗಾಯಗಳಿಗೆ ಗರಿಕೆಯ ರಸವನ್ನು ಕೊಬ್ಬರಿ ಎಣ್ಣೆಯ ಜೊತೆ ಬೆರೆಸಿ ಹಚ್ಚಿದರೆ ಕಲೆಗಳು ಮಾಯವಾಗುತ್ತದೆ.

೨) ಅಜೀರ್ಣವುಂಟಾದಾಗ ಗರಿಕೆ ರಸದ ಸೇವನೆ ಒಳ್ಳೆಯದು.

೩) ಜ್ವರದಿಂದ ನಿಶ್ಶಕ್ತಿಯಿರುವಾಗ ಗರಿಕೆ ರಸಕ್ಕೆ ಜೇನು ಬೆರೆಸಿ ಸೇವಿಸಿದರೆ ಸುಸ್ತು ಮಾಯವಾಗುತ್ತದೆ.

೩) ಹಸಿವಾಗದಿದ್ದಲ್ಲಿ ಗರಿಕೆ ರಸಕ್ಕೆ ಶುಂಠಿಪುಡಿ, ಜೀರಿಗೆ ಪುಡಿ ಮತ್ತು ಜೇನುತುಪ್ಪವನ್ನು ಬೆರೆಸಿ ಸೇವಿಸಿದರೆ ಹಸಿವು ಕಾಣಿಸಿಕೊಳ್ಳುತ್ತದೆ.

೪) ನವೆ,ಕಜ್ಜಿ, ದದ್ದು ಮುಂತಾದ ಚರ್ಮರೋಗಗಳಿಂದ ಬಳಲುವವರು ದಿನಕ್ಕೆ ಎರಡು ಬಾರಿ ಗರಿಕೆ ಮತ್ತು ಅರಿಶಿನವನ್ನು ನುಣ್ಣಗೆ ಅರಿದು ಲೇಪಿಸಿದ್ದಲ್ಲಿ ಚರ್ಮಸಂಬಂಧಿ ಕಾಯಿಗಳಿಂದ ಮುಕ್ತರಾಗಬಹುದು.

೫)ಮೂಗಿನಿಂದ ರಕ್ತಸ್ರಾವವಾಗುತ್ತಿದ್ದಲ್ಲಿ ಗರಿಕೆ ಹುಲ್ಲಿನ ರಸ ಕುಡಿಯುವುದಲ್ಲದೆ ರಸದ ಕೆಲವು ಹನಿಗಳನ್ನು ಮೂಗಿಗೆ ಹಾಕಬೇಕು.

೬) ಮೂಲವ್ಯಾಧಿಯಿಂದ ಬಳಲುತ್ತಿರುವವರು ಗರಿಕೆಯ ರಸವನ್ನು ದಿನಕ್ಕೆರಡು/ ಮೂರು ಬಾರಿ ಮೂರು ಚಮಚೆಯಷ್ಟು ಕುಡಿಯಬೇಕು.

೭) ವಾಂತಿಯಾಗುತ್ತಿದ್ದಲ್ಲಿ ಗರಿಕೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಬೆರೆಸಿ ಕುಡಿಯಬೇಕು.

೮) ಮೂತ್ರ ಕಟ್ಟಿದ್ದಲ್ಲಿ ಗರಿಕೆಯ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.

Related image

೯) ಗರಿಕೆಯನ್ನು ನೀರಿನಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ ೧/೪ ಲೀಟರ್ ನಷ್ಟಾದಾಗ ಇಳಿಸಿ ಅದಕ್ಕೆ ಹಾಲು ಮತ್ತು ಬೆಲ್ಲ ಬೆರೆಸಿ ಕುಡಿಯುವುದರಿಂದ ವೀರ್ಯ ವೃದ್ಧಿಯಾಗುತ್ತದೆ.

೧೦) ಚೇಳು ಕಚ್ಚಿದಾಗ ಗರಿಕೆಯ ರಸವನ್ನು ಕಚ್ಚಿದ ಬಾಗಕ್ಕೆ ಲೇಪಿಸುವುದಲ್ಲದೆ ಗರಿಕೆಯ ರಸವನ್ನು ಕುಡಿಯಬೇಕು.

ವಿ.ಸೂ : ನೆನಪಿಡಿ ಇಲ್ಲಿ ಕೊಟ್ಟಿರುವ ಮಾಹಿತಿಯು ಸಾಮಾನ್ಯ ಕಾಯಿಲೆಗಳಿಗೆ ಮಾತ್ರ.. ಪದೇ ಪದೇ ಈ ಮೇಲಿನ ಸಮಸ್ಯೆಗಳು ನಿಮ್ಮನ್ನು ಕಾಡುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.