ಗಾರ್ಲಿಕ್ ಬ್ರೇಡ್ ಮಾಡುವ ಸಿಂಪಲ್ ವಿಧಾನ

0
708

ಬೇಕಾಗುವ ಪದಾರ್ಥಗಳು

  • ಬೆಣ್ಣೆ – 2 ಚಮಚ
  • ಬ್ರೆಡ್ ಪೀಸ್ ಗಳು – 5-6
  • ಉಪ್ಪು – ರುಚಿಗೆ ತಕ್ಕಷ್ಟು
  • ಓರೆಗಾನೊ – ಅರ್ಧ ಚಮಚ
  • ಬೆಳ್ಳುಳ್ಳಿ ಪೇಸ್ಟ್ – ಅರ್ಧ ಚಮಚ
  • ಕರಿ ಮೆಣಸಿನ ಪುಡಿ – ಅರ್ಧ ಚಮಚ
  • ಚಿಲ್ಲಿ ಫ್ಲೇಕ್ಸ್ – ಸ್ವಲ್ಪ

ಮಾಡುವ ವಿಧಾನ

  1. ಬ್ರೆಡ್ ಪೀಸ್ ಗಳನ್ನು ಆರ್ಧಕ್ಕೆ ಕತ್ತರಿಸಿಕೊಳ್ಳಬೇಕು.
  2. ಬೆಣ್ಣೆಯನ್ನು ಬಿಸಿ ಮಾಡಬೇಕು. ನಂತರ ಅದಕ್ಕೆ ಬೆಳ್ಳುಳ್ಳಿ ಪೇಸ್ಟ್ ತಕ್ಕಷ್ಟು ಉಪ್ಪು ಮತ್ತು ಬೆಣ್ಣೆ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಪೇಸ್ಟ್ ತಯಾರಿಸಿ.
  3. ನಂತರ ಇದನ್ನು ಬ್ರೆಡ್ ಗಳ ಮೇಲೆ ಹಾಕಬೇಕು. ಒಲೆಯ ಮೇಲೆ ಪ್ಯಾನ್ ಇಟ್ಟು ಬಿಸಿಯಾದ ನಂತರ ಬ್ರೆಡ್ ಗಳ ಎರಡೂ ಬದಿಯಲ್ಲು ಕೆಂಪಗೆ ಸುಡಬೇಕು.
  4. ನಂತರ ಕೆಂಪಗಾದ ಬ್ರೆಡ್ ಗಳ ಮೇಲೆ ಚಿಲ್ಲಿ ಫ್ಲೇಕ್ಸ್, ಓರೆಗಾನೊ, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿದರೆ ರುಚಿಕರವಾದ ಗಾರ್ಲಿಕ್ ಬ್ರೆಡ್ ಸವಿಯಲು ಸಿದ್ಧ.