ಬೆಳ್ಳುಳ್ಳಿಯಿಂದ ಅರೋಗ್ಯಕ್ಕೆ ಎಷ್ಟು ಉಪಯೋಗ ಇದೆ ಗೊತ್ತ??

0
5499

ಹೃದಯ ಬಡಿತಕ್ಕೆ ಬೆಳ್ಳುಳ್ಳಿ ಭಾರತೀಯ ಶೈಲಿಯ ಅಡುಗೆಯಲ್ಲಿ ಹೆಚ್ಚು ಬಳಕೆಯಾಗುವಂತಹ ಒಂದು ಮಸಾಲೆ ಪದಾರ್ಥ. ಬೆಳ್ಳುಳ್ಳಿಯು ಆಹಾರಕ್ಕೆ ಒಂದು ವಿಶಿಷ್ಟ ಸ್ವಾದವನ್ನು ಕೊಡುವುದಷ್ಟೇ ಅಲ್ಲದೆ, ಇದರ ಸಣ್ಣ ಬಿಳಿಯ ಎಸಳುಗಳು ವಿಶೇಷ ರೀತಿಯ ಔಷಧೀಯ ಗುಣಗಳನ್ನೂ ಸಹ ಹೊಂದಿವೆ. ಬೆಳ್ಳುಳ್ಳಿಯನ್ನು ಅನೇಕ ವರ್ಷಗಳಿಂದಲೂ ವಿವಿಧ ಕಾಯಿಲೆಗಳಲ್ಲಿ ಚಿಕಿತ್ಸೆಗಾಗಿ ಬಳಸುತ್ತಿದ್ದರು.

ನೆಗಡಿ, ಕೆಮ್ಮು, ಜ್ವರ, ಅಷ್ಟೇ ಏಕೆ ಕ್ಯಾನ್ಸರ್ ಅಂತಹ ಕಾಯಿಲೆಗೂ ಬೆಳ್ಳುಳ್ಳಿ ಸೇವನೆ ಯಿಂದ ತಡೆಯಬಹುದೆಂದು ವಿಜ್ಞಾನಿ ತಿಳಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಬೆಳ್ಳುಳ್ಳಿ ಎನ್ನುವುದು ನಿಮ್ಮ ಅಡುಗೆ ಮನೆಯಲ್ಲಿರುವ ಹಲವು ಪ್ರಯೋಜನಕಾರಿ ಅಂಶಗಳಿರುವ ಒಂದು ಔಷಧಿ.

Image result for garlic health benefits
Image Credits: Sun Gazing

ಹೆಚ್ಚು ಕೊಬ್ಬಿನಾಂಶ ರಕ್ತನಾಳದಲ್ಲಿ ಸೇರಿರುವುದರಿಂದ ಹೃದಯದ ಬಡಿತದಲ್ಲಿ ಏರಿಳಿತವಾಗುತ್ತದೆ. ಹೃದಯ ತನ್ನಿಂದ ತಾನೆ ನಿಶ್ಕ್ರಿಯಗೊಂಡು, ಹೃದಯಾಘಾತ ಉಂಟಾಗುವ ಸಂಭವ ಹೆಚ್ಚಾಗಬಹುದು. ದೇಹದಲ್ಲಿನ ಕೊಬ್ಬಿನಾಂಶವನ್ನು ಕಡಿಮೆ ಮಾಡುವುದರಿಂದ ಹೃದಯಾಘಾತವನ್ನು ತಡೆಯಬಹುದಾಗಿದೆ. ಅದಕ್ಕೆ ನಿಯಮಿತ ಬೆಳ್ಳುಳ್ಳಿ ಸೇವನೆಯೂ ಒಂದು ಸುಲಭ ಮಾರ್ಗ.

Image result for garlic health benefits
Image Credits: Wagarlic
  • ಬೆಳ್ಳುಳ್ಳಿಯನ್ನು ನಿಯಮಿತವಾಗಿ ಅಡುಗೆಯಲ್ಲಿ ಬಳಸವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.
  • ಬೆಳ್ಳುಳ್ಳಿಯಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
  • ಬೆಳ್ಳುಳ್ಳಿ ಮತ್ತು ಕಟಕಲು ರೋಟ್ಟಿಯನ್ನು ತಿನ್ನುವುದರಿಂದ ಗಂಟಲು ಬೇನೆ ನಿವಾರಣೆಯಾಗುತ್ತದೆ.
  • ಮಕ್ಕಳಲ್ಲಿ ವಾಂತಿಯಾದಗ ಬೆಳ್ಳುಳ್ಳಿಯನ್ನು ದಾರದಲ್ಲಿ ಪೋಣಿಸಿ ಕಟ್ಟಿದರೆ ವಾಂತಿ ನಿಲ್ಲುತ್ತದೆ.
  • ತಲೆನೋವುಂಟದಾಗ ಬೆಳ್ಳುಳ್ಳಿಯನ್ನು ಕುಟ್ಟಿ ಪೆಸ್ಟಮಾಡಿಕೂಂಡು ತಲೆಗೆ ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ.
  • ಬೆಳ್ಳುಳ್ಳಿ ಸೇವನೆಯಿಂದ ಸಕ್ಕರೆ ಖಾಯಿಲೆ, ರಕ್ತದ ಹೆಪ್ಪುಗಟ್ಟುವುದನ್ನು, ಕ್ಯಾನ್ಸರ್ ಕಾಯಿಲೆ ಹಾಗೂ ಚರ್ಮದ ಅಲರ್ಜಿಯನ್ನು ನಿಯಂತ್ರಿಸುತ್ತದೆ.