ನೀವು ಗ್ಯಾಸ್ ಗೀಸರ್ ಬಳುಸುತಿದ್ದರೆ ಜಾಗ್ರತೆ ಯಾಕೆ ಅಂತೀರಾ ಈ ಸ್ಟೋರಿ ನೋಡಿ..!

0
8550

ಹೌದು ನೀವು ನಿಮ್ಮ ಮನೆಯಲ್ಲಿ ಗ್ಯಾಸ್ ಗೀಸರ್ ಬಳಕೆ ಮಾಡುವಾಗ ಆದೊಷ್ಟು ಹೆಚ್ಚರಿಕೆಯಿಂದ ಇರೋದು ಒಳ್ಳೇದು ಯಾಕೆ ಅಂದ್ರೆ ಬೆಂಗಳೂರಿನಲ್ಲಿ ನೆಡದಿರುವ ಘಟನೆ ಸಾಕ್ಷಿ ಇಂತಹ ಘಟನೆಗಳು ಯಾರ ಮನೆಯಲ್ಲೂ ನೆಡೆಯಬಾರದು ಅನ್ನೋದು ನಮ್ಮ ಕಳಕಳಿ ಏನ್ ಘಟನೆ ಅನ್ನೋದು ಇಲ್ಲಿದೆ ನೋಡಿ.

gas geyser -1
source:r4sales.com

ಸ್ನಾನದ ಕೋಣೆಯಲ್ಲಿ ಹಾಕಿದ್ದ ಗ್ಯಾಸ್ ಗೀಸರ್ ನಿಂದ ತಾಯಿ ಮತ್ತು ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗ್ಯಾಸ್ ಗೀಸರ್ ನಿಂದ ಹೊರಗೆ ಬಂದ ಕಾರ್ಬನ್ ಮಾನಾಕ್ಸೈಡ ನಿಂದ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ. ೩ ವರ್ಷದ ಮಗು ಮತ್ತು ೨೩ ವರ್ಷದ ಅರ್ಪಿತಾ ತಾಯಿ ಬೆಂಗಳೂರಿನ ಕೆ.ಜಿ.ನಗರದ ಲಕ್ಷ್ಮೀಪುರದಲ್ಲಿ ಭಾನುವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ.

ತಾಯಿ ಮಧ್ಯಾಹ್ನ ಸ್ನಾನ ಮಾಡುವುದಕ್ಕೆ ಸ್ನಾನದ ಕೋಣೆಗೆ ಹೋಗಿದ್ದಾರೆ ಮತ್ತು ಮಗು ಹೊರಗಡೆ ಆಟವಾಡುತ್ತಿತ್ತು ಇಂತಹ ಸಮಯದಲ್ಲಿ ಸ್ನಾನದ ಕೋಣೆಯಲ್ಲಿ ತಾಯಿ ಸುಮಾರು ಹೊತ್ತಾದರೂ ಸ್ನಾನದ ಕೋಣೆಯಿಂದ ಹೊರಬಂದಿಲ್ಲ ಮತ್ತು ಹೊರಗಡೆ ಆಟವಾಡುತಿದ್ದ ಮಗು ಮನೆಯ ಒಳಗೆ ಬಂದು ಸ್ನಾನದ ಕೋಣೆಗೆ ಹೋಗಿದೆ ಈ ಸಮಯದಲ್ಲಿ ಮಗು ಮತ್ತು ತಾಯಿ ಸುಮಾರು ಹೊತ್ತಾದರೂ ಕಾಣಿಸಿದ ಕಾರಣ ಮನೆಯ ಹೊರಗಡೆಯಲ್ಲಿದ್ದ ಅಜ್ಜಿ ಅಜ್ಜ ಬಂದು ಕೂಗಿದರು ಯಾರು ಮಾತನಾಡುವುದಿಲ್ಲ ಆಗ ಸ್ನಾನದ ಕೋಣೆಯಲ್ಲಿ ನೋಡಿದಾಗ ತಾಯಿ ಮತ್ತು ಮಗು ಮಲಗಿದ್ದರು ಇದನ್ನು ನೋಡಿದ ಅಕ್ಕ ಪಕ್ಕದ ಮನೆಯವರು ಪ್ರಜ್ಞೆ ತಪ್ಪಿ ಮಲಗಿರಬೇಕು ಎಂದು ಆಸ್ಪತ್ರೆಗೆ ಸಾಗಿಸಲಾಗುತ್ತದೆ.

gas geyser -4
source:supergas24.wordpress.com

ತಾಯಿ ಮತ್ತು ಮಗುವನ್ನು ಪರೀಕ್ಷಿಸಿದ ವೈದ್ಯರು ಇಬ್ಬರೂ ಉಸಿರುಗಟ್ಟಿ ಸತ್ತಿರುವುದಾಗಿ ತಿಳಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರ ಸಾವಿಗೆ ಕಾರ್ಬನ್ ಮಾನಾಕ್ಸೈಡ್ ಕಾರಣ ಎಂದು ತಿಳಿದುಬಂದಿದೆ. ಸ್ನಾನದ ಮನೆಯಲ್ಲಿದ್ದ ಗ್ಯಾಸ್ ಗೀಜರ್ನಿಂದ ಉತ್ಪತ್ತಿಯಾದ ಕಾರ್ಬನ್ಮಾ ನಾಕ್ಸೈಡ್ನಿಂದ ಉಸಿರುಗಟ್ಟಿ ಇಬ್ಬರೂ ಮೃತಪಟ್ಟಿದ್ದಾರೆ ಎನ್ನುವುದು ನಂತರದ
ತನಿಖೆಯಿಂದ ದೃಢಪಟ್ಟಿದೆ.

ಇಂತಹ ಘಟನೆಗಳಿಂದ ದೂರವಿರಲು ಮತ್ತು ಗ್ಯಾಸ್ ಗೀಸರ್ ಹೇಗೆ ಅಳವಡಿಸಿಕೊಳ್ಳಬೇಕು ಅನ್ನೋದರ ಬಗ್ಗೆ ಕೆಲವೊಂದು ಸಲಹೆಗಳು ಇಲ್ಲಿವೆ ನೋಡಿ.

gas geyser -2
source:Tribune India

೧. ಆಮ್ಲಜನಕ ಚೆನ್ನಾಗಿ ಹರಿದಾಡುವ ರೂಮಿನಲ್ಲಿ ಮಾತ್ರ ಗ್ಯಾಸ್ ಗೀಜರ್ ಅಳವಡಿಸಬೇಕು.

೨.ಸ್ನಾನದ ಮನೆಯಲ್ಲಿ ಕಿಟಕಿಗಳು ಇರುವಂತೆ, ಹಾಗೂ ಆ ಕಿಟಕಿಯಲ್ಲಿ ಒಳಗಿನ ಗಾಳಿ ಹೊರಗೆ ಮತ್ತು ಹೊರಗಿನ ಗಾಳಿ ಒಳಗೆ ಬರುವಂತೆ ಎರಡೂ ದಿಕ್ಕುಗಳಲ್ಲೂ ಕಿಟಕಿ ಅಥವಾ ವೆಂಟಿಲೇಟರ್ ಇರುವಂತೆ ನೋಡಿಕೊಳ್ಳಿ.

೩.ಕಿಟಕಿಗಳು ಇಲ್ಲದಿದ್ದರೆ ಗ್ಯಾಸ್ ಗೀಜರ್ನಿಂದ ಬಿಸಿ ನೀರನ್ನು ಮೊದಲೇತುಂಬಿಸಿ ಇಟ್ಟುಕೊಂಡು ಗ್ಯಾಸ್ ಆಫ್ ಮಾಡಿದನಂತರವಷ್ಟೆ ಸ್ನಾನಕ್ಕೆ ಹೋಗುವುದು ಉತ್ತಮ. ಗ್ಯಾಸ್ ಗೀಜರ್ನಿಂದ ನೀರು ತುಂಬಿಸುವಾಗಲೂ ಸ್ನಾನ ಗೃಹದ ಬಾಗಿಲು ತೆರೆದಿರಲಿ.

೪.ಗ್ಯಾಸ್ ಆಫ್ ಮಾಡಿದ ಕೆಲವುನಿಮಿಷಗಳ ನಂತರ ಸ್ನಾನಕ್ಕೆ ಹೋಗುವುದು ಒಳ್ಳೆಯದು. ಮಕ್ಕಳನ್ನು ಸ್ನಾನ ಮಾಡಿಸುವಾಗ ಸ್ನಾನ ಗೃಹದ ಬಾಗಿಲು ಅರ್ಧ ತೆರೆದು ಗಾಳಿ ಆಡುವಂತೆ ನೋಡಿಕೊಳ್ಳಿ.

gas geyser -3
source:IndiaMART

೫.ಗ್ಯಾಸ್ ನಲ್ಲಿ ಆಮ್ಲಜನಕ ಸರಬರಾಜು ಕಡಿಮೆ ಆದಾಗ ಅದು ಅರ್ಧದಷ್ಟು ಮಾತ್ರ ಉರಿಯುತ್ತಿರುತ್ತದೆ. ಅದು ಮುನ್ನೆಚ್ಚರಿಕೆ.
ಎಚ್ಚರಿಕೆ ತೆಗೆದುಕೊಳ್ಳುವ ಮೊದಲೇ ಅನಾಹುತ ಸಂಭವಿಸಿಬಿಡುವುದರಿಂದ ಎಷ್ಟು ಬೇಗ ಸ್ನಾನ ಗೃಹದಿಂದ ಹೊರಗೆ ಬರುತ್ತೀರೋ ಅಷ್ಟು ಉತ್ತಮ.

೬.ಗ್ಯಾಸ್ ಗೀಜರ್ನಿಂದ ಹೊರಸೂಸುವ ಕಾರ್ಬನ್ ಮಾನಾಕ್ಸೈಡ್ ಮೊದಲು ನೆಲ ಮಟ್ಟದಿಂದ ಸ್ನಾನದ ಮನೆಯಲ್ಲಿ ಶೇಖರಣೆ ಗೊಳ್ಳುತ್ತಾ ಹೋಗುತ್ತದೆ. ಇದರಿಂದ ಕುಳಿತು ಸ್ನಾನ ಮಾಡುವವರ ಮೂಗಿಗೆ ತಕ್ಷಣ ಸೋಕಿ ಬೇಗ ಸಾವು ಸಂಭವಿಸುತ್ತದೆ.
ನಿಂತು ಸ್ನಾನ ಮಾಡುವಾಗ 3 ರಿಂದ 4 ನಿಮಿಷದೊಳಗೆ ಸಾವು ಸಂಭವಿಸುತ್ತದೆ. ಅಷ್ಟರಲ್ಲಿ ಸ್ನಾನ ಮುಗಿದು
ಬಾಗಿಲು ತೆರೆದರೆ ಅವರು ಅದೃಷ್ಟವಂತರು.