ಭಾರತದ ಇತಿಹಾಸದಲ್ಲೇ ಅತಿ ಹೆಚ್ಚು ಏರಿಕೆಯಾದ ಗ್ಯಾಸ್ ಸಿಲಿಂಡರ್-ನ ಬೆಲೆ!!

0
545
ಗ್ಯಾಸ್ ಬಳಕೆ ದಾರರಿಗೆ ಇಲ್ಲಿದೆ ಒಂದು ಕಹಿ ಸುದ್ದಿ. ಇನ್ನು ಮೇಲೆ ನೀವು ಹೆಚ್ಚು ಗ್ಯಾಸ್ ಬಳಸಿದರೆ ನಿಮ್ಮ ಜೇಬಿಗೆ ಕತ್ತರಿ ಬೀಳಲಿದೆ. ಹೌದು ಗುರುವಾರದಿಂದಲೇ ಸಬ್ಸಿಡಿ ರಹಿತ ಎಲ್‌ಪಿಜಿ ಅಡುಗೆ ಅನಿಲ ಬೆಲೆ ಭಾರಿ ಏರಿಕೆಯಾಗಿದೆ.
Image result for gas lpg
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಹಾಗೂ ಅನಿಲ ಬೆಲೆ ಏರಿಕೆಯಾಗಿದ್ದರಿಂದ ಈ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ತೈಲ ಕಂಪನಿಗಳು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿವೆ. ಹೊಸ ದರಂದಂತೆ ೧೪.೨ ಕಿಲೋ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ಬೆಂಗಳೂರಿನಲ್ಲಿ ೭೫೧ ರೂಪಾಯಿ ಆಗಲಿದೆ. ವರ್ಷಕ್ಕೆ ೧೨ ಸಿಲಿಂಡರ್‌ಗಳಿಗೆ ಸಬ್ಸಿಡಿ ನೀಡಲಾಗುತ್ತದೆ. ಈ ಮಿತಿಯನ್ನು ದಾಟಿದಲ್ಲಿ ಗ್ರಾಹಕರು ಸಬ್ಸಿಡಿ ಸೇವೆ ಇಂದ ವಂಚಿತರಾಗಲಿದ್ದಾರೆ. ಸಬ್ಸಿಡಿ ಪ್ರಮಾಣವನ್ನು ೩೦೭ ರೂ.ಗೆ ಏರಿಸಲಾಗಿದೆ. ಅಂದರೆ ಸಬ್ಸಿಡಿ ಸಹಿತ ಎಲ್‌ಪಿಜಿ ೪೪೨ ರುಪಾಯಿನಲ್ಲೇ ಮುಂದುವರೆಯಲಿದೆ.
೧೯ ಕೆ.ಜಿ ತೂಕದ ಅನಿಲ ಸಿಲೆಂಡರ್ ಬೆಲೆ ಈ ವರೆಗೆ ೧೨೯೦ ಇತ್ತು. ಇನ್ನು ಇದಕ್ಕೆ ೧೪೪೦ ರೂಪಾಯಿ ಪಾವತಿಸಬೇಕಾಗುತ್ತದೆ.
Image result for gas lpg
ಎಲ್‌ಪಿಜಿ ಬೆಲೆ ಏರಿಕೆಯನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡ ವಿರೋಧ ಪಕ್ಷಗಳು ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿವೆ. ಜನ ಸಾಮಾನ್ಯರಿಗೆ ಶಾಕ್ ನೀಡಿರುವ ಮೋದಿ, ಮಧ್ಯ ರಾತ್ರಿಯಿಂದಲೇಲೆ ಎಲ್‌ಪಿಜಿ ದರದಲ್ಲಿ ಏರಿಕೆ ಮಾಡಿದ್ದು ನೀವು ಹೇಲುವ ಅಛ್ಛೇ ದಿನ ಎಂದು ವ್ಯಂಗ ಮಾಡಿವೆ.
ಕಳೆದ ಫ್ರೆಬ್ರವಾರಿಯಲ್ಲಿ ಸಿಲೆಂಡರ್ ದರದಲ್ಲಿ ಏರಿಕೆ ಮಾಡಲಾಗಿತ್ತು. ಆಗ ೬೬.೫೦ ಪೈಸೆ ಹೆಚ್ಚಿಸಲಾಗಿತ್ತು. ಸಬ್ಸಿಡಿ ರಹಿತ ಡುಗೆ ಅನಿಲದ ದರದಲ್ಲಿ ಇಷ್ಟೋಂದು ಏರಿಕೆ ಹಿಂದೆಂದೂ ಆಗಿರಲಿಲ್ಲ. ತೈಲ ಕಂಪನಿಗಳು ಸಬ್ಸಿಡಿ ಎಲ್‌ಪಿಜಿ ಗಳ ಮೇಲೆ ೧೩ ಪೈಸೆ ಏರಿಕೆ ಮಾಡಿವೆ. ಇದಕ್ಕೂ ಮುನ್ನ ೯ ಪೈಸೆ ಎಷ್ಟು ಏರಿಕೆ ಮಾಡಲಾಗಿತ್ತು.