2011ರ ವಿಶ್ವಕಪ್‍ ಫೈನಲ್-ನಲ್ಲಿ ಗೌತಮ್ ಗಂಭೀರ್ 3 ರನ್ ಹೊಡೆಯದೆ ಶತಕ ವಂಚಿತರಾಗಲು ಮಹೇಂದ್ರ ಸಿಂಗ್ ಧೋನಿ ಕಾರಣವಂತೆ.!

0
235

ಸತ್ಯ ಬಿಚ್ಚಿಟ್ಟ ಗಂಭೀರ್;

ಜಿಲೇಬಿ ತಿನ್ನುವ ಮೂಲಕ ಸದ್ಯ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಹಾಗೂ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಯಾವುದೇ ಯೋಚನೆ ಮಾಡದೇ ಅವರದೇ ಆದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿತ್ತು, ಅಷ್ಟೇ ಅಲ್ಲದೆ ಗಂಭೀರ್ ಕಳೆದು ಹೋಗಿದ್ದಾರೆ ಎನ್ನುವ ಪೋಸ್ಟರ್-ಗಳನ್ನು ದೆಹಲಿಯ ಬೀದಿಯಲ್ಲಿ ಇಂದು ಅಂಟಿಸಲಾಗಿತ್ತು, ಇದಕ್ಕೆ ಗಂಭೀರ್ ನಾನು ಜಿಲೇಬಿ ತಿನ್ನುವುದರಿಂದ ದೆಹಲಿಯಲ್ಲಿ ಮಾಲಿನ್ಯವಾದರೆ ಅದನ್ನು ತ್ಯಜಿಸುತ್ತೇನೆ ಹೇಳಿ, ನಾನು 2011ರ ವಿಶ್ವಕಪ್‍ನ ಫೈನಲ್ ಪಂದ್ಯದಲ್ಲಿ ಶತಕ ವಂಚಿತನಾಗಲು ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಆರೋಪಿಸಿದ್ದಾರೆ.

Also read: ಕರ್ನಾಟಕ ಕ್ರಿಕೆಟ್-ಗೆ ಕರಾಳ ದಿನ; ಫಿಕ್ಸಿಂಗ್ ಆರೋಪ ಹೊತ್ತು ಸಿ.ಎಂ.ಗೌತಮ್, ಅಬ್ರಾರ್ ಕಾಝಿ ಸೇರಿದಂತೆ ೭ ಜನ ಅರೆಸ್ಟ್!

ಗಂಭೀರ್ ಶತಕ ವಂಚಿತರಾಗಲು ಧೋನಿ ಕಾರಣ?

ಹೌದು ಭಾರತ ಶ್ರೀಲಂಕಾ ವಿರುದ್ಧ 6 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿ ಬರೋಬ್ಬರಿ 28 ವರ್ಷದ ನಂತರ ವಿಶ್ವಕಪ್ ಅನ್ನು ಎತ್ತಿಹಿಡಿದಿತ್ತು. ಈ ಪಂದ್ಯದಲ್ಲಿ ಕೇವಲ ಮೂರು ರನ್‍ಗಳಿಂದ ಶತಕ ವಂಚಿತರಾಗಿದ್ದ ಗೌತಮ್ ಗಂಭೀರ್ ಅವರು, ನಾನು ಶತಕ ವಂಚಿತನಾಗಲು ಅಂದಿನ ನಾಯಕ ಎಂ.ಎಸ್ ಧೋನಿ ಅವರು ಕಾರಣ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಮಾತನಾಡಿರುವ ಗಂಭೀರ್ ಅವರು, ನಾನು ಎಲ್ಲೇ ಹೋದರೂ ಯುವಕರು ಆ ದಿನ ನೀವು ಯಾಕೆ ಶತಕ ಹೊಡೆದಿಲ್ಲ ಎಂದು ಪ್ರಶ್ನಿಸುತ್ತಾರೆ. ನನಗೂ ಯಾವಗಲೂ ಅನ್ನಿಸುತ್ತದೆ. ಆ ಶತಕ ಸಿಡಿಸಿದ್ದರೆ ನನ್ನ ಕ್ರಿಕೆಟ್ ಜೀವನ ಇನ್ನೂ ಚೆನ್ನಾಗಿ ಇರುತಿತ್ತು. ಆದರೆ ಔಟ್ ಆಗಲು ಧೋನಿ ಕಾರಣ.

ಇಷ್ಟು ವರ್ಷದ ನಂತರ ಸತ್ಯ ಹೇಳಲು ಕಾರಣವೇನು?

ಏಕೆಂದರೆ ಪಂದ್ಯದ ವೇಳೆ ನನಗೆ ನಾನು 97 ರನ್ ಹೊಡೆದಿದ್ದೇನೆ ಎಂಬ ಅರಿವೇ ಇರಲಿಲ್ಲ. ಕೇವಲ ನನ್ನ ಗುರಿ ಶ್ರೀಲಂಕಾ ನೀಡಿದ 275 ರನ್‍ಗಳನ್ನು ಬೆನ್ನಟ್ಟವುದು ಆಗಿತ್ತು. ಆದರೆ ಆ ಓವರಿನ ಮಧ್ಯದಲ್ಲಿ ನನ್ನ ಬಳಿಗೆ ಬಂದ ಧೋನಿ ಅವರು, ನೀನು ಈಗ 97 ರನ್ ಹೊಡೆದಿದ್ದಿ. ಇನ್ನು ಮೂರು ರನ್ ಹೊಡೆದರೆ ಶತಕ ಆಗುತ್ತದೆ ಎಂದು ಹೇಳಿ ನನ್ನ ಗಮನಕ್ಕೆ ತಂದರು. ಆಗ ನನಗೆ ನನ್ನ ವೈಯಕ್ತಿಕ ಸ್ಕೋರ್ ಮೇಲೆ ಗಮನ ಹೆಚ್ಚಾಯ್ತು. ಆದ್ದರಿಂದ ನಾನು ಅಂದು ಔಟ್ ಆದೆ. ಧೋನಿ ಅವರು ಅದನ್ನು ನೆನಪಿಸದೆ ಇದ್ದರೆ ಅವತ್ತು ನಾನು ಶತಕ ಸಿಡಿಸುತ್ತಿದ್ದೆ ಎಂದು ಹೇಳಿದ್ದಾರೆ.

2011 ಏಪ್ರಿಲ್ 2 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 275 ರನ್ ಗಳ ಗುರಿ ಹೊಂದಿತ್ತು. ಆದರೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹ್ವಾಗ್ ಅವರು ಮಾಲಿಂಗ ಅವರ ಬೌಲಿಂಗ್ ಗೆ ಬೇಗ ಔಟಾದರು. ಈ ವೇಳೆ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಜೋಡಿಯಾಗಿ 83 ರನ್ ಗಳ ಕೊಡುಗೆ ನೀಡಿದ್ದರು. ಸಂಕಷ್ಟ ಸಿಲುಕಿದ್ದ ಭಾರತವನ್ನು ಗೌತಮ್ ಗಂಭೀರ್ ಅವರ ತಾಳ್ಮೆಯ ಆಟವಾಡಿ 3 ರನ್ ಗಳಿಂದ ಶತಕದಿಂದ ವಂಚಿತರಾದರು. ಲಂಕಾ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ್ದ ಗೌತಮ್ 97 ರನ್(122 ಎಸೆತ, 9 ಬೌಂಡರಿ) ಹೊಡೆದು ಔಟಾದರು. ಶತಕಕ್ಕೆ ಮೂರು ರನ್‍ಗಳ ಅವಶ್ಯಕತೆ ಇದ್ದಾಗ ಥಿಸರಾ ಪೆರೆರಾ ಅವರಿಗೆ ಬೌಲ್ಡ್ ಆಗಿದ್ದರು. ಈಗ ಸಂಸದನಾಗಿ ಯಾವುದೇ ಸ್ಥಳಕ್ಕೆ ಹೋದರು ಇದೇ ವಿಚಾರವನ್ನು ಜನರು ಕೇಳುತ್ತಾರೆ ಅದಕ್ಕಾಗಿ ಸತ್ಯವನ್ನು ಬಿಚ್ಚಿಟ್ಟಿದ್ದೇನೆ ಎಂದು ಹೇಳಿದ್ದಾರೆ. ಹಾಗಾದ್ರೆ ಧೋನಿಯಿಂದ ಗಂಭೀರ್ ಶತಕ ವಂಚಿತರಾದ್ರ?

Also read: ಬಿ.ಸಿ.ಸಿ.ಐ. ಅಧ್ಯಕ್ಷರಾಗಿದ ಕೆಲವೇ ದಿನದಲ್ಲಿ ಅದ್ಭುತ ನಿರ್ಧಾರ ತೆಗೆದುಕೊಂಡ ಗಂಗೂಲಿ; ದುಬಾರಿ ಐಪಿಎಲ್ ಉದ್ಘಾಟನೆ ಮಾಡುವ ಬದಲು ಕೋಟಿ ಕೋಟಿ ಹಣವನ್ನು ಸೇನೆಗೆ ನೀಡಲು ನಿರ್ಧಾರ!!