ಪಾಕ್​ ಬಾಲಕಿಯ ಹೃದಯ ಶಸ್ತ್ರಚಿಕಿತ್ಸೆಗೆ ಮಿಡಿದ ಗೌತಮ್​ ಗಂಭೀರ್​ ಹೃದಯ; ಗೌತಮ್​ ರೂಪದಲ್ಲಿ ಸುಷ್ಮಾ ಸ್ವರಾಜ್​ ಜೀವಂತ ಎಂದ ಪಾಕಿಸ್ತಾನಿಗಳು.!

0
161

ಭಾರತ ಪಾಕಿಸ್ತಾನದ ಮೇಲೆ ತೋರುತ್ತಿರುವ ಮಾನವಿತೆಗೆ ಪಾಕ್ ಎಷ್ಟೇ ಧನ್ಯವಾದ ಹೇಳಿದರು ಕಡಿಮೆ. ಏಕೆಂದರೆ ಪಾಕ್ ಅಂತ ದೇಶದಲ್ಲಿ ಯಾವುದು ಸರಿ ಇಲ್ಲ ಒಂದು ಸರಿಯಾದ ಆಸ್ಪತ್ರೆಗಳು ಕೂಡ ಇಲ್ಲ, ಕೆಲವು ಗಂಭಿರವಾದ ರೋಗಿಗಳಿಗೆ ಭಾರತದಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ. ಇದೆಲ್ಲವನ್ನು ಮರೆತು ಪಾಕ್ ತನ್ನ ನಿಚ್ಚತನ ತೋರುತ್ತಿರುವುದು ಅಲ್ಲಿನ ಜನರಿಗೆ ಬೇಸರ ತಂದಿದೆ ಅಂತೆ. ಏಕೆಂದರೆ ಬಿಜೆಪಿ ಸಂಸದ ಗೌತಮ್ ಗಂಭೀರ್ ಭಾರತದಲ್ಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಲು ಪಾಕಿಸ್ತಾನ ಮಗುವಿಗೆ ವೀಸಾ ಕೊಡಿಸಿ ಮಾನವಿತೆ ಮೆರೆದಿದ್ದು ಭಾರಿ ಚರ್ಚೆಯಾಗಿದೆ.

ಪಾಕ್​ ಬಾಲಕಿಯ ಹೃದಯ ಶಸ್ತ್ರಚಿಕಿತ್ಸೆಗೆ ಅವಕಾಶ?

ಪಾಕಿಸ್ತಾನದ ಒಮೈಮಾ ಅಲಿ ಎಂಬ ಪುಟ್ಟ ಮಗುವಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು, ಪಾಕ್‍ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗದ ಕಾರಣ ಅವರು ಭಾರತಕ್ಕೆ ಬರಬೇಕಿತ್ತು. ಆದರೆ ಈಗ ನಡೆಯುತ್ತಿರುವ ಕೆಲ ವಿದ್ಯಮಾನಗಳಿಂದ ಭಾರತ ಸರ್ಕಾರ ಮಗು ಮತ್ತು ಆಕೆ ಪೋಷಕರಿಗೆ ವೀಸಾ ನೀಡಿರಲಿಲ್ಲ. ಈ ವಿಚಾರ ಗಂಭೀರ್ ಅವರಿಗೆ ಗೊತ್ತಾಗಿದೆ. ಅದ್ದರಿಂದ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಮಗು ಒಮೈಮಾ ಅಲಿ ಮತ್ತು ಅವರ ಪೋಷಕರಿಗೆ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾ ಕೊಡಿಸಬೇಕು ಎಂದು ಮನವಿ ಮಾಡಿದ್ದಾರೆ. ಈ ಮನವಿಗೆ ಸ್ಪಂದಿಸಿದ ಸಚಿವ ಜೈಶಂಕರ್ ಅವರು ಮಗು ಮತ್ತು ಪೋಷಕರು ಬರಲು ವೀಸಾ ನೀಡುವಂತೆ ಭಾರತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಹಿಂದೆ ಸುಷ್ಮಾ ಸ್ವರಾಜ್​ ಇಂತಹ ವಿಷಯಕೆ ಬೇಗನೆ ಕರುಣೆ ತೋರಿಸಿ ಯಾರಾದರೂ ಸಂಕಷ್ಟದಲ್ಲಿದ್ದಾರೆ ಅದರಲ್ಲೂ ಅನಾರೋಗ್ಯದಿಂದ ಬಳಲುತ್ತಿದ್ದು ಭಾರತದಲ್ಲಿ ಚಿಕಿತ್ಸೆ ಪಡೆಯಲು ಅಡ್ಡಿಗಳನ್ನು ಎದುರಿಸುತ್ತಿದ್ದಾರೆ ಎಂದು ಗೊತ್ತಾಗುತ್ತಲೇ ಅವರ ನೆರವಿಗೆ ಧಾವಿಸುತ್ತಿದ್ದರು. ಅಷ್ಟೇ ಅಲ್ಲ, ಅನ್ಯ ರಾಷ್ಟ್ರಗಳಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗೊತ್ತಾಗುತ್ತಲೇ ಅವರ ಮಾತೃ ಹೃದಯ ಮಿಡಿಯುತ್ತಿತ್ತು. ಅವರನ್ನು ಸುರಕ್ಷಿತವಾಗಿ ತವರಿಗೆ ಕರೆತರುವವರೆಗೂ ಅವರು ನಿದ್ರಿಸುತ್ತಿರಲಿಲ್ಲ. ಇದೀಗ ಅಂಥದ್ದ ಹೃದಯವೈಶಾಲತೆಯನ್ನು ಟೀಮ್​ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಹಾಗೂ ದೆಹಲಿಯ ಸಂಸತ್​ ಸದಸ್ಯ ಗೌತಮ್​ ಗಂಭೀರ್​ ಮೆರೆದಿದ್ದಾರೆ.

ಗಂಭೀರ್ ವೀಸಾ ನೀಡುವಂತೆ ಭಾರತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ವಿಚಾರವಾಗಿ ಜೈಶಂಕರ್ ಅವರು ಭಾರತಕ್ಕೆ ಪ್ರಯಾಣಿಸಲು ಬಾಲಕಿ ಮತ್ತು ಆಕೆಯ ಪೋಷಕರಿಗೆ ವೀಸಾ ನೀಡುವಂತೆ ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮಿಷನ್‍ಗೆ ಸೂಚಿಸಿದ್ದು, ಅವರಿಗೆ ಇಸ್ಲಾಮಾಬಾದ್‍ನಲ್ಲಿ ವೀಸಾ ನೀಡಲಾಗಿದೆ ಎಂದು ಜೈಶಂಕರ್ ಗಂಭೀರ್‍ಗೆ ಬರೆದಿರುವ ಪತ್ರವನ್ನು ಗಂಭೀರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡು. ಈ ಪತ್ರದ ಜೊತೆ ‘ಸೌಮ್ಯ ಹೃದಯವು ಇನ್ನೊಂದು ಕಡೆಯಿಂದ ನಮ್ಮನ್ನು ಸಂಪರ್ಕಿಸಿದಾಗ, ನಮ್ಮ ಹೃದಯವು ಎಲ್ಲಾ ಅಡೆತಡೆಗಳನ್ನು ಮತ್ತು ಗಡಿಗಳನ್ನು ಬದಿಗಿರಿಸುತ್ತದೆ. ಅವಳ ಸಣ್ಣ ಪಾದಗಳಿಂದ, ಅವಳು ನಮಗಾಗಿ ಸಿಹಿ ಗಾಳಿಯನ್ನು ಸಹ ತರುತ್ತಾಳೆ. ನನ್ನ ಮಗಳು ನನ್ನ ಮನೆಗೆ ಭೇಟಿ ನೀಡುತ್ತಿರುವಂತೆ ಅನಿಸುತ್ತಿದೆ’ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಗಂಭೀರ್ ಅವರ ಈ ಮಾತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.