ಗಾಯತ್ರಿ ಮಂತ್ರ ಕುರಿತು ಹೊಸ ಸಂಶೋಧನೆ; ಸರಿಯಾದ ಸಮಯದಲ್ಲಿ 108 ಬಾರಿ ಮಂತ್ರ ಓದಿದರೆ ಬುದ್ದಿಶಕ್ತಿ ಹೆಚ್ಚುತ್ತೆ ಎಂದು ವಿಜ್ಞಾನವೇ ತಿಳಿಸಿದೆ..

0
2207

ಭಾರತದ ತುಂಬೆಲ್ಲ ಹಲವು ಧರ್ಮಗಳು, ವಿಧಿ ವಿಧಾನಗಳು ಮತ್ತು ಮಂತ್ರಗಳಿವೆ ಅದರಲ್ಲಿ ಕೆಲವೊಂದು ಮಂತ್ರಗಳು ವ್ಯಕ್ತಿಯ ಮನಸ್ಥಿತಿಯನ್ನು ಮತ್ತು ಬುದ್ದಿಶಕ್ತಿಯನ್ನು ಹೆಚ್ಚಿಸುತ್ತಿವೆ. ಜನರ ಸಮಸ್ತ ಸಮಸ್ಯೆಗಳ ನಿವಾರಣೆಯಲ್ಲಿ ಸಹಕಾರಿಯಾಗಬಲ್ಲ ಮ೦ತ್ರವೊ೦ದಿದ್ದರೆ ಗಾಯತ್ರಿ ಮಂತ್ರವಾಗಿದೆ. ಇದು ಈಗಲೂ ನಮ್ಮ ಹಿಂದೂ ಧರ್ಮದಲ್ಲಿ ಜನಜನಿತವಾಗಿದೆ. ಈ ಸ೦ಗತಿಯು ಹೆಚ್ಚು ಕಡಿಮೆ ಪ್ರತಿಯೊಬ್ಬರಿಗೂ ತಿಳಿದಿರುವ೦ತಹದ್ದೇ ಎಂಬುದರಲ್ಲಿ ಸಂಶಯವಿಲ್ಲ, ಈ ವಿಷಯವಾಗಿ ಸಂಶೋಧನೆಯೊಂದು ನಡೆದಿದ್ದು, ಗಾಯತ್ರಿ ಮಂತ್ರ ಪಟನೆಯಿಂದ ಬುದ್ದಿಶಕ್ತಿ ಹೆಚ್ಚಿಸುತ್ತದೆ ಅಂತೆ.

Also read: ಹಿಂದೂ ಧರ್ಮದ ಶ್ರೇಷ್ಠ ಮಂತ್ರವಾದ ಗಾಯತ್ರಿ ಮಂತ್ರದ ಸಂಪೂರ್ಣ ಅರ್ಥವರಿತು, ತಾಯಿ ಗಾಯತ್ರಿ ದೇವಿಯ ಕೃಪೆಗೆ ಪಾತ್ರರಾಗಿ ಪುನೀತರಾಗಿ..

ಹೌದು IIT ವಿಜ್ಞಾನಿಗಳು ಮತ್ತು AIIMS ವೈದ್ಯರು ಹಲವು ವರ್ಷಗಳಿಂದ ನಡೆಸಲಾದ ಸಂಶೋಧನೆಯ ನಂತರ ಗಾಯತ್ರಿ ಮಂತ್ರದ ಬಗ್ಗೆ ಕಂಡುಕೊಂಡಿದ್ದು, ಈ ಮಂತ್ರವನ್ನು ಓದುವ ಮೂಲಕ, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಬಹುದು ಎಂದು ತಿಳಿಸಿದ್ದಾರೆ. ಗಾಯತ್ರಿ’ ಎ೦ಬ ಶಬ್ದವೇ ಸ್ವತ: ಈ ಮ೦ತ್ರದ ಅಸ್ತಿತ್ವದ ಕಾರಣವನ್ನು ವಿವರಿಸುತ್ತದೆ. ಗಾಯತ್ರಿ ಶಬ್ದವು ‘ಗಾಯ೦ತ೦ ತ್ರಿಯತೇ ಇತಿ’ ಎ೦ಬ ಸ೦ಸ್ಕೃತದ ಸೂಕ್ತಿಯಿ೦ದ ಹುಟ್ಟಿಕೊ೦ಡಿದೆ ಹಾಗೂ ಇದರ ಅರ್ಥವೇನೆ೦ದರೆ, ಈ ಮ೦ತ್ರಪಠಣವನ್ನು ಮಾಡುವಾತನನ್ನು ಮ೦ತ್ರವು ಎಲ್ಲಾ ವಿಪರೀತ ಸನ್ನಿವೇಶಗಳಿ೦ದಲೂ ಕಾಪಾಡುತ್ತದೆ ಹಾಗೂ ತನ್ಮೂಲಕ ಮ೦ತ್ರವನ್ನು ಪಠಿಸುವವನಿಗೆ ಚಿರ೦ಜೀವತ್ವವನ್ನು ದಯಪಾಲಿಸುತ್ತದೆ.

ಏನಿದು ಸಂಶೋಧನೆ?

ಎಐಐಎಂಎಸ್ ಮಿದುಳಿನ ಸಕ್ರಿಯಗೊಳಿಸುವಿಕೆಯ MRI ಸಂಶೋಧನೆಯ ಮೂಲಕ ದೃಢಪಡಿಸಿದೆ. ಈ ಸಂಶೋಧನೆಯಲ್ಲಿ, ಗಾಯತ್ರಿ ಮಂತ್ರದೊಂದಿಗೆ ಬುದ್ದಿಶಕ್ತಿಯನ್ನು ಹೆಚ್ಚಿಸುವ ಕುರಿತು ಗಾಯತ್ರಿಮಂತ್ರವನ್ನು ಪಟಿಸಲಾಗುತ್ತೆ, ನಂತರ ಮತ್ತು MRI ಯೊಂದಿಗೆ ಬುದ್ದಿಶಕ್ತಿಯ ಹೇಗೆ ಹೆಚ್ಚುತ್ತದೆ ಎನ್ನುವುದನ್ನು ತಿಳಿದಿದ್ದು. ನಿಗದಿತ ಸಮಯಕ್ಕೆ ಈ ಮಂತ್ರವನ್ನು ಓದುವ ಮೂಲಕ ಮಿದುಳಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದೆ. ಇನ್ನೂ ಈ ಸಂಶೋಧನೆಗಾಗಿ ಜನರನ್ನು ಗುಂಪುಗಳಾಗಿ ಎರಡು ಗುಂಪುಗಳಾಗಿ ಮಾಡಿ. ಮೊದಲನೇ ಗುಂಪಿಗೆ ಮಂತ್ರವನ್ನು 108 ಬಾರಿ ಮಂತ್ರವನ್ನು ಓದಲು ಹೇಳಿತ್ತು. ಎರಡನೇ ಗುಂಪಿಗೆ ಮಾತ್ರವನ್ನು ಓದಲು ಹೇಳಲಿಲ್ಲ, ಮಂತ್ರವನ್ನು ಓದಿದವರಿಗೆ ತಮ್ಮ ದೇಹದಲ್ಲಿ ಹಲವು ಬದಲಾವಣೆಗಳು ಕಂಡು ಬಂದು ದೇಹದಲ್ಲಿ ಸಂತೋಷದ ಸಮಯದಲ್ಲಿ ಹುಟ್ಟಿದ ರಾಸಾಯನಿಕಗಳು, GABA ಮೆದುಳಿನಲ್ಲಿ ಕಂಡುಬರುವ ರಾಸಾಯನಿಕವನ್ನು ವೇಗವಾಗಿ ಬೆಳೆಯಲು ಪ್ರಾರಂಭಿಸಿದವು. ಈ ರಾಸಾಯನಿಕದ ಕೊರತೆಯು ನಿದ್ರೆ ಮತ್ತು ಖಿನ್ನತೆಯಂತಹ ಕಾಯಿಲೆಗಳ ಕೊರತೆಯನ್ನು ಉಂಟುಮಾಡುತ್ತದೆ. ಆದರೆ ಗಾಯತ್ರಿ ಮಂತ್ರವನ್ನು ಓದಿದ ಎರಡನೇ ವಾರದಲ್ಲಿ, GABA ಕೆಮಿಕಲ್ ದೇಹದಲ್ಲಿ ವೇಗವಾಗಿ ಬೆಳೆಯಲು ಪ್ರಾರಂಭಿಸಿತು.

Also read: ಹಿಂದೂ ಧರ್ಮದಲ್ಲಿ ಮಂತ್ರದಲ್ಲಿ ಬಹಳ ಪ್ರಾಮುಕ್ಯತೆ ಇದೆ, ಯಾವ ಮಂತ್ರವನ್ನು ಯಾವಾಗ ಹೇಳಬೇಕು ಅಂತ ಹೇಳ್ತಿವಿ ನೋಡಿ..!!

ಅದಕ್ಕಾಗಿ ಅದಕ್ಕಾಗಿ ಗಾಯತ್ರಿಮಂತ್ರ ಹಿಂದೂ ಧರ್ಮದ ಸಂಪ್ರದಾಯಗಳಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ಹಿಂದೂ ಧರ್ಮದಲ್ಲಿ, ಈ ಮಂತ್ರವನ್ನು ಓದುವುದು ಪದ್ದತಿಯಾಗಿದ್ದರಿಂದ, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಈ ಮಂತ್ರದ ಉಚ್ಚಾರಣೆ ಮಾಡಿದರೆ ಮನಸ್ಸನ್ನುಹಿಡಿತಕ್ಕೆ ತರುತ್ತದೆ. ಗಾಯತ್ರಿ ಮಂತ್ರವನ್ನು ನಿಯಮಿತವಾಗಿ ಪ್ರತಿ ದಿನ ಉಚ್ಚರಿಸಿದರೆ, ಅದು ನಿಮ್ಮ ಮನಸ್ಸಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಇದುವೇ ಮನೋವಿಜ್ಞಾನಿಗಳಿಗೆ ಅಧ್ಯಯನ ವಿಷಯವಾಗಿದೆ. ಈ ಮಂತ್ರವನ್ನು ಪಠಿಸುವುದರ ಮೂಲಕ, ಮೆದುಳಿನ ಜೀವಕೋಶಗಳಲ್ಲಿ ವಿವಿಧ ರೀತಿಯ ಬದಲಾವಣೆಗಳನ್ನು ಕಾಣಬಹುದು. ಅಲ್ಲದೆ, ಮೆದುಳಿನ ನಿರ್ದಿಷ್ಟ ಪ್ರದೇಶಗಳಿಗೆ ರಕ್ತ ಪೂರೈಕೆಯನ್ನು ಹೆಚ್ಚಿಸುವುದನ್ನು ಕಂಡುಬಂದಿದೆ. ಅದಕ್ಕಾಗಿ ವಿಜ್ಞಾನವೇ ಗಾಯತ್ರಿ ಮಂತ್ರವನ್ನು ಮನಸ್ಸಿನಲ್ಲಿ ಓದುವುದು ಪ್ರಯೋಜನಕಾರಿಯಾಗಿದೆ.

108 ಸಲ ಯಾಕೆ?

Also read: ನೀವು ಪ್ರತಿದಿನ ಈ ಚಿಕ್ಕ ಮಂತ್ರ ಜಪಿಸಿದರೆ ನಿಮಗೆ ಅರೋಗ್ಯ ಮತ್ತು ಶಾಂತಿ, ಸಮೃದ್ಧಿ ಸಿಗಲಿದೆ..!

ಯಾಕೆಂದರೆ 9 ಗ್ರಹಗಳು ಮತ್ತು 12 ನಕ್ಷತ್ರಪುಂಜಗಳು ಇವೆ. 9 ಗ್ರಹಗಳು 12 ನಕ್ಷತ್ರ ಪುಂಜಗಳ ಸುತ್ತಲು ತಿರುಗುತ್ತಾ ಇರುವ ವೇಳೆ ಅದು 108 ರೀತಿಯ ಬದಲಾವಣೆಗಳನ್ನು ಉಂಟು ಮಾಡುವುದು. ಈ ಬದಲಾವಣೆಯಲ್ಲಿ ಯಾವುದೇ ರೀತಿಯ ತಪ್ಪು ಇದ್ದರೆ ಆಗ ಅದನ್ನು ಮಂತ್ರದ ಮೂಲಕವಾಗಿ ಸರಿಪಡಿಸಿಕೊಳ್ಳಬಹುದಾಗಿದೆ.