ಗೀತಾ ಗೋಪಿನಾಥ್, ಈ ಕನ್ನಡತಿ ಅಂತಾರಾಷ್ಟ್ರೀಯ ಹುದ್ದೆಗೇರಿದ್ದ ಸಾಧನೆ; ಕನ್ನಡಿಗರು ಏನು ಬೇಕಾದರೂ ಮಾಡಬಹುದು ಅಂತ ತೋರಿಸುತ್ತೆ..

0
433

ನಮ್ಮದೇ ಕನ್ನಡ ನೆಲದ ಮೈಸೂರು ಮೂಲದ ಗೀತಾ ಗೋಪಿನಾಥ್ ದೇಶವೇ ಅಚ್ಚರಿಪಡುವ ಸಾಹಸ ಮಾಡಿದ್ದಾರೆ. ಆರ್.ಬಿ.ಐ ಮಾಜಿ ಗವರ್ನರ್ ರಘುರಾಂ ರಾಜನ್ ನಂತರ ಅಂತರಾಷ್ಠ್ರೀಯ ಹಣಕಾಸು ನಿಧಿ(IMF) ಯ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ನಂತರದಲ್ಲಿ ಈ ಹುದ್ಜೆಗೆ ಆಯ್ಕೆಗೊಂಡ ಭಾರತದ ಮೂಲದ ಎರಡನೇ ವ್ಯಕ್ತಿ ಇವರಾಗಿದ್ದಾರೆ. ಗೀತಾ ಗೋಪಿನಾಥ್ ರವರನ್ನು ಸಂಶೋಧನಾ ಇಲಾಖೆಯ ನಿರ್ದೇಶಕರನ್ನಾಗಿಯೂ IMF ಮುಖ್ಯಸ್ಥೆ ಕ್ರಿಸ್ಟಿನ್ ಲಗಾರ್ಡ್ ನೇಮಿಸಿದ್ದಾರೆ.

Also read: ಮೋದಿಯ ದುರಾಡಳಿತ ಹೀಗೆ ಮುಂದುವರೆದರೆ, ಹಣದುಬ್ಬರ ಹೆಚ್ಚಾಗಿ, ಬಡವರು ಹೇಗೆ ಬದುಕಬೇಕು?

ಸಧ್ಯ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಅಂಥರಾಷ್ಠ್ರೀಯ ಅಧ್ಯಯನ ಮಚ್ತು ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿಯಾಗಿರುವ ಗೀತಾ ಗೋಪಿನಾಥ್ ಹುಟ್ಟಿದ್ದು ಕರಾನಾಟಕದ ಮೈಸೂರಿನಲ್ಲಿ. ಟಿ.ವಿ.ಗೋಪಿನಾಥ್ ಮತ್ತು ವಿ.ಸಿ.ಜಯಲಕ್ಷ್ಮೀಯವರ ಪುತ್ರಿ. ಸಣ್ಣ ಪ್ರಾಯದಲ್ಲೇ ಕಲಾ ವಿಭಾಗದ ಆಸಕ್ತಿಯಿಂದ ದೆಹಲಿಯ ಲೇಡಿ ಶ್ರೀರಾಮೇ ಕಾಲೇಜ್ ಆಫ್ ವುಮೆನ್ ನಲ್ಲಿ ಬಿಎ ಪದವಿ ಪಡೆದಾಗ ದೇಶದ ಆರ್ಥಿಕ ಪರಿಸ್ಥಿತಿ ಅಧಃಪತನದಲ್ಲಿತ್ತು. ಅದು 1991-92ರ ಕಾಲ ಈ ಹೊತ್ತಿಗೆ ದೇಶದ ಆರ್ಥಿಕ ಪರಿಸ್ಥಿತಿಯ ಅಧಃಪತನ ಕಂಡು ಅರ್ಥಶಾಸ್ತ್ರ ವಿಷಯದ ಬಗ್ಗೆ ಅಧ್ಯಯನ ಮಾಡಲೇ ಬೇಕೆಂದು ನಿರ್ಧರಿಸಿದ ಅವರು ದೆಹಲಿಯ ಸ್ಕೂಲ್ ಆಫ್ ಎಕಾನಮಿಕ್ಸ್ ಸೇರಿಕೊಂಡರು. ಅಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಮುಂದೆ ಅಮೇರಿಕಾದ ಪ್ರಸಿದ್ಧ ಕಾಲೇಜೊಂದರಲ್ಲಿ ಎಂಎ ಮುಗಿಸಿಕೊಂಡರು. ಅಲ್ಲಿಯ ಪ್ರತಿಷ್ಟಿತ ವಿವಿಯೊಂದರಲ್ಲಿ ಪಿ.ಎಚ್.ಡಿ ಅಧ್ಯಯನ ನಡೆಸುವ ಹೊತ್ತಿಗಾಗಲೇ ಅವರು ವಿವಾಹಿತರಾಗಿದ್ದರು. ಪತಿ ಇಕ್ಬಾಲ್ ಸಿಂಗ್ ದಲಿವಾಲ್ ರ ಸಹಕಾರದಲ್ಲಿ ಇಂದು ದೇಶವೇ ಬೆರಗಾಗೋ ಸಾಧನೆ ಮಾಡಿದ್ದಾರೆ.

Also read: ಇತಿಹಾಸದಲ್ಲೇ ಅತ್ಯಂತ ಹೀನಾಯ ಸ್ಥಿತಿ ತಲುಪಿದ “ರುಪಾಯಿ” ಬೆಲೆ, ಮೋದಿಯ ಫೇಲ್ ಆದ Demonetization ನ ಧಗೆ ಈಗ ಭಾರತಕ್ಕೆ ತಟ್ಟಿದೆ!!

ತಮ್ಮ ಪಿ.ಎಚ್.ಡಿ ಅಧ್ಯಯನ ಮುಗಿಸುತ್ತಿದ್ದಂತೆಯೇ ಗೀತಾ ಹಲವಾರು ಉನ್ನತ ಹುದ್ದೆಗಳಿಗೆ ನೇಮಕಗೊಂಡರು.ಮೊದಲ ಬಾರಿಗೆ ಹಾರ್ವರ್ಡ್ ಯೂನಿವರ್ಸಿಟಿಯ ಆರ್ಥಿಕ ವಿಭಾಗಕ್ಕೆ ಪ್ರಾಧ್ಯಾಪಕಿಯಾಗಿ ನೇಮಕಗೊಂಡ ಮೊದಲ ಭಾರತೀಯರು ಗೀತಾ ಗೋಪಿನಾಥ್. ಇದರ ಜೊತೆಗೆ ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರೀಸರ್ಚ್ ನಲ್ಲಿ ಅವರಿ ಅಂತಾರ್ಷ್ಠ್ರೀಯ ಹಣಕಾಸು ಮತ್ತು ಮೈಕ್ರೋ ಎಕನಾಮಿಕ್ಸ್ ಯೋಜನೆಯ ಸಹ ನಿರ್ದೇಶಕಿಯಾಗಿಯಾಗಿಯೂ ಕೆಲಸ ಮಾಡಿದ್ದಾರೆ. 2017ರಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರ ಆರ್ಥಿಕ ಸಲಹೆಗಾರರಾಗಿಯೂ ನೇಮಕಗೊಂಡಿದ್ದರು.

Also read: ಮತ್ತೆ ಏರಿತು ಪೆಟ್ರೋಲ್, ಡೀಸೆಲ್ ಬೆಲೆ..! ಗ್ರಾಹಕರ ಜೇಬಿಗೆ ಬಿತ್ತು ಮತ್ತೆ ಬರೆ, ಮೋದಿ ಕೇವಲ ಒಂದು ರುಪಾಯಿ ಕಡಿಮೆ ಮಾಡಿದರೆ ಸಾಕೆ??

ಸಧ್ಯ ಆರ್.ಬಿ.ಐ ಮಾಜಿ ಗವರ್ನರ್ ರಘುರಾಮ್ ರಾಜನ್ ನಂತರದಲ್ಲಿ ಅಂತರಾಷ್ಠ್ರೀಯ ಹಣಕಾಸು ನಿಧಿ(IMF) ಯ ಮುಖ್ಯ ಆರ್ಥಿಕ ಸಲಹೆಗಾರರಾಗಿ ಆಯ್ಕೆಗೊಂಡು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಗೀತಾರನ್ನು ನೇಮಕ ಮಾಡಿರುವ ರ್ಕಿಸ್ಟಿನೇ ಲಗಾರ್ಡ್ ‘ಗೀತಾ ಪ್ರಪಂಚದ ಅತ್ಯುತ್ತಮ ಅರ್ಥಶಾತ್ರಜ್ಞರಲ್ಲೊಬ್ಬರಾಗಿದ್ದು, ಅತ್ಯುನ್ನತ ಶಿಕ್ಷಣ, ಬೌದ್ಧಿಕ ನಾಯಕತ್ವದ ಸಾಮರ್ಥ್ಯ ಮತ್ತು ಅಂತರಾಷ್ಠ್ರೀಯ ಅನುಭವಗಳನ್ನು ಗೀತಾ ಹೊಂದಿದ್ದಾರೆ’ ಎಂದು ಹೇಳಿದ್ದಾರೆ. ನೆನಪಿರಲಿ ಇಂತಹಾ ಆರ್ಥಿಕ ತಜ್ಞೆಯೇ ನೋಟು ಅಮಾನ್ಯೀಕರಣದ ನರೇಂದ್ರ ಮೋದಿ ನಿರ್ಧಾರವನ್ನು ಯಾವನೇ ಒಬ್ಬ ಆರ್ಥಿಕ ತಜ್ಞ ಈ ನಿರ್ಧಾರವನ್ನು ಸರಿ ಎನ್ನಲು ಸಾಧ್ಯವಿಲ್ಲ ಎಂದಿದ್ದರು. ಮೊದಲಿಗೆ ಡಿಮಾನಿಟೈಸೇಷನ್ ನನ್ನು ಧೃಡ ನಿರ್ಧಾರ ಎಂದಿದ್ದ ಅವರು ನಂತರದ ಜನರ ಬವಣೆಗೆ ಮೋದಿಯವರ ಏಕಪಕ್ಷೀಯ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದರು.