ಉದಾರತೆ ಅಂದರೆ ಇದೆ ಅನ್ಸುತ್ತೆ ನೀವು ಓದಿ ಅರ್ಥ ಮಾಡಿಕೊಳ್ಳಿ…!

0
1182

ಒಂದು ಊರಲ್ಲಿ ಓಮ್ಮೆ ರಾಜನು ತನ್ನ ಸೈನಿಕರೊಡನೆ ಬೇಟೆಯಾಡಲು ಕಾಡಿಗೆ ಹೋಗುತ್ತಿದ್ದಾಗ, ಇದ್ದಕಿದ್ದಂತೆ ಒಂದು ಕಲ್ಲು ಹಾರಿ ಬಂದು ರಾಜನ ಹಣೆಗೆ ಬಿತ್ತು. ಹಣೆಯಿಂದ ರಕ್ತ ಸುರಿಯಲು, ಸೈನಿಕರು ಸಿಟ್ಟಾಗಿ ‘ನಮ್ಮ ರಾಜರಿಗೆ ಪೆಟ್ಟಾಗುವಂತೆ ಹೊಡೆಯುವ ದುಸ್ಸಾಹಸ ಯಾರದ್ದು? ಬನ್ನಿ ನೋಡೊಣ’ ಎಂದು ಮುನ್ನಡೆದರು.

ಅಲ್ಲಿಯೇ ಪಕ್ವವಾದ ಹಣ್ಣುಗಳು ನೇತಾಡುತಿದ್ದ ಒಂದು ಮಾವಿನ ಮರ ಕಂಡರು. ಮರದ ಕೆಳಗೆ, ವಯಸ್ಸಾದ ಮುದುಕಿಯು ಕೈಯಲ್ಲಿ ಕಲ್ಲು ಹಿಡಿದು ಹಣ್ಣಿಗೆ ಹೊಡೆಯುತ್ತಿದಳು. ಆವಳನ್ನು ಕಂಡ ಸೈನಿಕರು ‘ಇವಳೇ ನಮ್ಮ ರಾಜನಿಗೆ ಪೆಟ್ಟಾಗುವಂತೆ ಹೊಡೆದಿದ್ದು’ ಎಂದುಕೊಂಡು ಅವಳನ್ನು ರಾಜನ ಬಳಿ ಕರೆ ತಂದರು.

‘ಮಹಾರಾಜ, ಇವಳಿಗೆ ಛಡಿ ಏಟು ಕೊದೋಣವೆ?’ ಎಂದು ಒಬ್ಬ ಸೈನಿಕನು, ‘ಮಹಾರಾಜ, ಇವಳಿಗೆ ಮರಣ ದಂಡನೆ ವಿಧಿಸೋಣವೇ?’ ಎಂದು ಇನ್ನೊಬ್ಬನು ಕೇಳಿದರು. ಪಾಪ ಮುದುಕಿಯು ಹೆದರಿ ನಡಗುತ್ತಾ ನಿಂತಳು. ರಾಜನು ಸೈನಿಕರಿಗೆ ಸುಮ್ಮನಿರಲು ಹೆಳಿ, ಮುದುಕಿಯನ್ನು ವಿಚಾರಿಸಲು ಪ್ರಾರಂಭಿಸಿ, ‘ನನಗೆ ಪೆಟ್ಟಾಗುವಂತೆ ಹೊಡೆದದ್ದು ಏಕೆ?’ ಎಂದು ಕೇಳಿದನು.

ಮುದುಕಿಯು ಭಯದಿಂದ ನಡುಗುತ್ತಾ ‘ಮಹಾಸ್ವಾಮಿ, ನಾನು ಬಡವಿ. ಮನೆಯಲ್ಲಿ ತಿನ್ನಲು ಏನೂ ಇಲ್ಲದೆ, ನನ್ನ ಮೊಮ್ಮಗ ಹಾಗೂ ನಾನು ಮೂರು ದಿನಗಳಿಂದ ಉಪವಾಸವಿದ್ದೀವಿ. ಹಸಿವು ನೀಗಿಸಲು ಹಣ್ಣು ತಿನ್ನೋಣ ಎಂದು, ಈ ಮರದಲ್ಲಿರುವ ಹಣ್ಣುಗಳಿಗೆ ಕಲ್ಲು ಎಸೆದೆ. ಆ ಕಲ್ಲು ನಿಮಗೆ ತಾಕಿ, ಪೆಟ್ಟಾಯಿತು. ದಯಮಾಡಿ ನನ್ನನ್ನು ಕ್ಷಮಿಸಿ’ ಎಂದಳು.

ರಾಜನ ಪರಿವಾರ ರಾಜನ ನಿರ್ಧಾರಕ್ಕೆ ಕಾತುರದಿಂದ ಕಾಯುತ್ತಿತ್ತು.

ರಾಜನು ಸ್ವಲ್ಪ ಸಮಯ ಯೊಚಿಸಿ, ಸೈನಿಕರಿಗೆ ಈ ರೀತಿ ಆದೇಶಿಸಿದನು ‘ಸೈನಿಕರೇ, ಈಕೆಯ ಮನೆಗೆ ಹೊಗಿ, ಊಟ ತಿಂಡಿಗೆ ಬೇಕಾದ ದವಸ ಧಾನ್ಯಗಳ್ಳನ್ನು, ಉಡಲು ಬಟ್ಟೆಯನ್ನು ಹಾಗು ಕೈಗೆ ಸಾಕಷ್ಟು ಹಣವನ್ನು ಕೊಟ್ಟು ಬನ್ನಿ’ ಏಂದು ಆದೇಶಿಸಿದನು.

ಇದನ್ನು ಕೇಳಿದ ಸೈನಿಕರು ಆಶ್ಚರ್ಯಚಕಿತರಾಗಿ, ‘ಮಹಾಸ್ವಾಮಿ, ಅವಳು ತಮಗೆ ಕಲ್ಲಿನಿಂದ ಹೊಡೆದು ಪೆಟ್ಟು ಮಾಡಿದ್ದರೂ, ಅವಳಿಗೆ ಕಠಿಣ ಶಿಕ್ಷೆ ಕೊಡುವ ಬದಲು, ಉಪಚರಿಸುತಿರುವಿರಲ್ಲ!’ ಎಂದರು.

ಇದನ್ನು ಕೇಳಿದ ರಾಜನು ಹೀಗೆಂದನು ‘ಕಲ್ಲಿನ ಪೆಟ್ಟು ಬಿದ್ದ ಮರವೇ ನೋವಿಗೆ ಬದಲಾಗಿ ಸಿಹಿಸಿಹಿಯಾದ ಹಣ್ಣನ್ನು ಕೊಡುವಾಗ, ಅಕಸ್ಮಾತ್ತಾಗಿ ಬಿದ್ದ ಕಲ್ಲಿನಿಂದ ಆದ ಪೆಟ್ಟಿಗೆ ಮಾನವರು ನಾವು ಶಿಕ್ಷೆ ಕೊಟ್ಟರೆ, ಆ ಮರಕ್ಕಿಂತ ನಾವು ಕಡೆಯಾಗುವುದಿಲ್ಲವೆ?’ ಎಂದ. ರಾಜನ ಮಾತಿಗೆ ಎಲ್ಲರೂ ತಲೆದೂಗಿದರು