ಜೀವನದಲ್ಲಿ ಪರಿಶ್ರಮ ಮುಖ್ಯ ಒಂದು ಮೆಲ್ ಐಡಿ ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಾಯಿಸುವ ಅದ್ಭುತ ಕಥೆ ಓದಿ..!

1
1667

ಹೌದು ಕಣ್ರೀ ಒಬ್ಬ ಸಾಮಾನ್ಯ ಮನುಷ್ಯ ಒಂದು ಮೆಲ್ ಐಡಿ ಇಲ್ಲ ಅನ್ನೋ ವಿಚಾರದಲ್ಲಿ ಅವನ ಜೀವನವೇ ಬದಲಾದ ಕಥೆ ಇಲ್ಲಿದೆ ನೋಡಿ.
ಒಂದು ದಿನ ಒಬ್ಬ ರಾಮು ಅನ್ನೋ ವ್ಯಕ್ತಿ ಗುಮಾಸ್ತನ ಕೆಲಸಕ್ಕೆ ಅರ್ಜಿ ಹಾಕಿದ್ದ ಅರ್ಜಿ ಒಂದು ಲೈಫ್ ಇನ್ಸೂರೆನ್ಸ್ ಕಂಪನಿಗೆ ಹೋಗುತ್ತದೆ.ಆ ರಾಮು ಅನ್ನೋ ವ್ಯಕ್ತಿಯನ್ನು ಆ ಕಂಪನಿ ಎಂಡಿ ಸಂದರ್ಶನಕ್ಕೆ ಕರೆಸುತ್ತಾನೆ. ಎಂಡಿ ಮಾತನಾಡುತ್ತ ನಿಮಗೆ ನಿಮ್ಮ ಕೆಲಸ ಗುಮಾಸ್ತ ಕೆಲಸ ಹಾಗಾಗಿ ನಿಮಗೆ ಯಾವುದೇ ಸಂದರ್ಶನ ನಡೆಸುವುದಿಲ್ಲ ನಿಮಗೆ ನಾವು ಕೆಲಸ ಕೊಡುತ್ತವೆ ನಿಮಗೆ ನಿಮ್ಮ ಕೆಲಸದ ಅಧಿಕೃತ ಪತ್ರವನ್ನು ನಿಮ್ಮ ಮೆಲ್ ಐಡಿ ಕೊಡಿ ಅದಕ್ಕೆ ನಾವು ಕಳುಹಿಸುತ್ತವೆ ಎಂದು ಹೇಳುತ್ತಾನೆ.

source:YouTube

ಇದಕ್ಕೆ ಉತ್ತರಿಸಿದ ರಾಮು ಸರ್ ನನ್ನ ಬಳಿ ಮೆಲ್ ಐಡಿ ಇಲ್ಲ ಸರ್ ಅಂತ ಹೇಳುತ್ತಾನೆ ಆಗ ಎಂಡಿ ಏನ್ರಿ ನಿಮ್ಮ ಯೋಗ್ಯತೆಗೆ ಒಂದು ಮೆಲ್ ಐಡಿ ಇಲ್ವಾ ನಿಮ್ಮ ಅಂತವರಿಗೆಲ್ಲ ಕೆಲಸ ಕೊಡೋಕೆ ಆಗಲ್ಲ ಹೋಗ್ರಿ ಅಂತ ಮನೆಗೆ ಕಳುಹಿಸುತ್ತಾರೆ.

ರಾಮು ಏನು ಮಾಡೋದು ಅಂತ ಯೋಚನೆ ಮಾಡುತ್ತ ದಾರಿಯಲ್ಲಿ ನಡೆದುಕೊಂಡು ಬರುತಿದ್ದ ಈ ಸಮಯದಲ್ಲಿ ತನ್ನ ಜೇಬಿನಲ್ಲಿದ್ದ ಹಣವನ್ನು ನೋಡಿಕೊಳ್ಳುತ್ತಾನೆ. ಆ ಜೇಬಿನಲ್ಲಿ ೫೦೦ ರೂಪಾಯಿ ಇರುತ್ತದೆ. ರಾಮು ಅಲ್ಲೇ ಪಕ್ಕದಲ್ಲಿ ಇದ್ದ ಮಾರ್ಕೆಟ್ ನಲ್ಲಿ ಒಂದು ಪುಟ್ಟಿ ಟೊಮೊಟೊ ಹಣ್ಣು ತೆಗೆದುಕೊಂಡು ಆ ಟೊಮೊಟೊ ಹಣ್ಣುಗಳನ್ನು ಮಾರಾಟ ಮಾಡುತ್ತಾನೆ. ಈ ಟಮೋಟ ಹಣ್ಣು ಮಾರಿದ ಮೇಲೆ ರಾಮು ತನ್ನ ಹಣವನ್ನು ಲೆಕ್ಕ ಮಾಡಿಕೊಳುತ್ತಾನೆ.

source:Business Line

ರಾಮು ಲೆಕ್ಕ ಮಾಡಿದ ಹಣ ಒಂದು ಸಾವಿರ ಆಗಿರುತ್ತದೆ. ತಾನು ೫೦೦ ಟೊಮೊಟೊ ತೆಗೆದುಕೊಂಡು ಒಂದು ಸಾವಿರ ಹಣವನ್ನು ದುಡಿಮೆ ಮಾಡಿದ್ದೇನೆ ಅಂತ ರಾಮು ತುಂಬ ಖುಷಿಪಡುತ್ತಾನೆ. ಆದ್ರೆ ಆ ಖುಷಿ ಅಷ್ಟಕ್ಕೇ ನಿಲ್ಲುವುದಿಲ್ಲ ರಾಮು ಮತ್ತೆ ಟೊಮೊಟೊ ವ್ಯಾಪಾರ ಮಾಡಲು ಶುರು ಮಾಡುತ್ತಾನೆ. ಒಂದು ಸಾವಿರದಿಂದ ಎರಡು ಸಾವಿರ ಎರಡು ಸಾವಿರದಿಂದ ೫೦೦೦ ಸಾವಿರ ದಿಂದ ಹತ್ತು ಸಾವಿರ ಹೀಗೆ ರಾಮು ತುಂಬ ದುಡಿಮೆ ಮಾಡಿ ತುಂಬ ಶ್ರೀಮಂತನಾಗುತ್ತಾನೆ ಮತ್ತು ಒಂದು ದೊಡ್ಡ ಕಂಪನಿಯನ್ನು ಕಟ್ಟುತ್ತಾನೆ. ಆದ್ರೆ

source:rivo-inc.com

ದೊಡ್ಡ ಕಂಪನಿ ಕಟ್ಟಿದ ರಾಮು ಒಂದು ಲೈಫ್ ಇನ್ಸೂರೆನ್ಸ್ ಮಾಡಿಸಬೇಕು ಎಂದು ಇನ್ಸೂರೆನ್ಸ್ ಕಂಪನಿಗೆ ಕರೆಮಾಡಿ ಮಾತನಾಡುತ್ತಾನೆ ಆಗ ಆ ಕಂಪನಿ ಕಡೆಯಿಂದ ಮಾತನಾಡಿ ಸರ್ ಒಳ್ಳೆ ಒಳ್ಳೆ ಪ್ಲಾನ್ ಇದಾವೆ ಸರ್ ನಿಮ್ಮ ಮೆಲ್ ಐಡಿ ಕೊಡಿ ಸರ್ ಎಲ್ಲ ವಿವರವನ್ನು ಕಳುಹಿಸುತ್ತೇನೆ ಅಂತ ಹೇಳುತ್ತಾನೆ ಆಗ ರಾಮು ನನ್ನ ಹತ್ತಿರ ಮೆಲ್ ಐಡಿ ಇಲ್ಲ ಅಂತ ಹೇಳಿದ ಅದಕ್ಕೆ ಕಂಪೆನಿಯವನು ಏನ್ ಸರ್ ನೀವು ಎಷ್ಟು ದೊಡ್ಡ ಕಂಪನಿ ಕಟ್ಟಿದ್ದೀರಾ ನಿಮ್ಮ ಹತ್ತಿರ ಮೆಲ್ ಐಡಿ ಇಲ್ವಾ ಅಂತಾನೆ. ಆಗ ಅದಕ್ಕೆ ಉತ್ತರಿಸಿದ ರಾಮು ನಂದು ಮೆಲ್ ಐಡಿ ಇದಿದ್ರೆ ಇವತ್ತು ನಾನು ಗುಮಾಸ್ತನಾಗಿ ಕೆಲಸ ಮಾಡಬೇಕಿತ್ತು ಅಂತ ಹೇಳುತ್ತಾನೆ.

source:Shutterstock

ನೋಡಿ ಎಂತಹ ಪರಿಶ್ರಮ ಹಾಕಿ ರಾಮು ಶ್ರೀಮಂತನಾದ ಅಂದ್ರೆ ನೀವು ಮೆಲ್ ಐಡಿ ಬಾಲಸಬಾರದು ಅಂತಲ್ಲ.
ಜೀವನದಲ್ಲಿ ಒಂದು ಕೆಲಸ ಹೋದರೆ ಏನು ನೀವು ದುಡಿಮೆ ಮಾಡಲು ಸಾವಿರ ದಾರಿ ಇರುತ್ತವೆ ನೀವು ಕಷ್ಟಪಟ್ಟು ದುಡಿಮೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ. ಮೆಲ್ ಐಡಿ ಒಂದು ಉದಾಹರಣೆ ಅಷ್ಟೇ..