ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಸಿಹಿಸುದ್ದಿ; ಶೀಘ್ರವೇ ನಿಮ್ಮ ಮನೆ ಬಾಗಿಲಿಗೆ ಬರಲಿದೆ ದಂತ ಚಿಕಿತ್ಸೆ..

0
904

ರಾಜ್ಯ ಸರ್ಕಾರದಿಂದ ಜಾರಿಗೆ ತರಲಾದ ದಂತ ಭಾಗ್ಯ ಯೋಜನೆ ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ. ಇದರಿಂದ ಹಲ್ಲಿಲ್ಲದವರು ತಾವು ಇದ್ದ ಊರಲ್ಲೇ ಹಲ್ಲು ಹಾಕಿಕೊಳ್ಳಬಹುದು. ಹೀಗಾಗಿ ಆರೋಗ್ಯ ಇಲಾಖೆ ಖಾಸಗಿಯವರ ಸಹಭಾಗಿತ್ವದಲ್ಲಿ ಜನರಿಗೆ ಈ ಯೋಜನೆ ತಲುಪಿಸಲು ಮುಂದಾಗಿದೆ. ಹಿರಿಯ ನಾಗರಿಕರಿಗೆ ಈ ಸೇವೆಯ ಅವಶ್ಯಕತೆ ಹೆಚ್ಚಾಗಿದ್ದು. ಎಲ್ಲಾ ಜಿಲ್ಲೆಗಳಲ್ಲಿರುವ ದಂತ ವೈದ್ಯಕೀಯ ಕಾಲೇಜುಗಳ ಮೂಲಕ ಕ್ಯಾಂಪ್ ನಡೆಸುವುದಾಗಿ ಆರೋಗ್ಯ ಇಲಾಖೆಯ ದಂತ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಹೌದು ಹಲ್ಲು’ ಮನುಷ್ಯ ದೇಹದ ಅವಿಭಾಜ್ಯ ಅಂಗ. ಆರೋಗ್ಯಪೂರ್ಣ ಜೀವನಕ್ಕೆ ಬಾಯಿಯ ಆರೋಗ್ಯವು ಅತೀ ಪ್ರಾಮುಖ್ಯವೆನಿಸಿದೆ. ಹಲ್ಲುಗಳು ಮನುಷ್ಯ ದೇಹದ ಸೌಂದರ್ಯದ ಪ್ರತೀಕವಾಗಿ ವರ್ತಿಸುತ್ತವೆ. ಹೀಗಿರುವ ನಮ್ಮ ಹಲ್ಲಿನ ಆರೈಕೆ ಸರಿಯಾಗಿ ಮಾಡಿಕೊಳ್ಳುವುದು ನಮ್ಮದೇ ಜವಾಬ್ದಾರಿ. ಆದರೆ ಹಣ ಅಥವಾ ಸಮಯದ ಕೊರೆತೆಯಿಂದ ಪ್ರತಿ ಬಾರಿಯೂ ಹಲ್ಲುಗಳ ಆರೋಗ್ಯ ಕಡೆಗಣಿಸಿದಾಗ ಸಮಸ್ಯೆ ಸೃಷ್ಟಿಯಾಗುತ್ತದೆ. ಅದಕ್ಕಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಆರಂಬಿಸಿದ್ಧ ದಂತಭಾಗ್ಯ ಯೋಜನೆ ಮುಂದುವರಿದ ಭಾಗವಾಗಿ, ಗ್ರಾಮೀಣ ಭಾಗದಲ್ಲಿ ನಡೆಸುವ ಡೆಂಟಲ್ ಕ್ಯಾಂಪ್ ನಲ್ಲಿ ಗ್ರಾಮಸ್ಥರು ತಮ್ಮ ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿದೆ.

ಈ ಹಿಂದೆ ಇದ್ದ ಚಿಕಿತ್ಸೆಯ ಮಾದರಿಯಲ್ಲಿ ಜಿಲ್ಲಾ ಕೇಂದ್ರಕ್ಕೆ ಸಮೀಪವಿರುವವರಿಗೆ ಮಾತ್ರ ಹಲ್ಲುಸೆಟ್‌ನ ಸೌಭಾಗ್ಯ ಸಿಗುತ್ತಿದೆ. ಒಂದು ಹಲ್ಲುಸೆಟ್‌ನ ಅಳವಡಿಕೆಗೆ ಒಬ್ಬ ರೋಗಿ ಕನಿಷ್ಠ ನಾಲ್ಕೈದು ಬಾರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಬೇಕು. ನಾಲ್ಕು ಬಾರಿ ರೋಗಿಯ ವಸಡು, ಬಾಯಿ ಪರೀಕ್ಷಿಸಿ ನಂತರ ಐದನೇ ಬಾರಿ ಅಳವಡಿಸುತ್ತಾರೆ. ಸರಕಾರ ಕೊಡುವ ಹಲ್ಲುಸೆಟ್‌ನ ನೆರವಿನ ದರಕ್ಕಿಂತ ನಾಲ್ಕೈದು ಪಟ್ಟು ಆಸ್ಪತ್ರೆ ಭೇಟಿ ವೆಚ್ಚ ಆಗುತ್ತಿದೆ. ರೋಗಿ, ಜತೆಗೊಬ್ಬರು ಜಿಲ್ಲಾಸ್ಪತ್ರೆಗೆ ಬಂದರೆ ಪ್ರಯಾಣದ ಖರ್ಚು ವೆಚ್ಚ ಹೊರೆಯಾಗುತ್ತಿದೆ. ಇದೇ ಕಾರಣಕ್ಕೆ ದಂತಭಾಗ್ಯ ಫಲಾನುಭವಿಗಳಾಗಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

2015-16 ರಲ್ಲಿ 1,600 ಮಂದಿ ಜನರನ್ನು ಮಾತ್ರ ತಲುಪಲು ಸಾಧ್ಯವಾಯಿತು, ಅದಾದ ನಂತರ ಪ್ರತಿ ವರ್ಷ ಸಂಖ್ಯೆ ಹೆಚ್ಚಾಗಿ 5,550 ತಲುಪಿದೆ, ಆದರೆ 5 ವರ್ಷಗಳಲ್ಲಿ ಯೋಜನೆ ಸೌಲಭ್ಯ ದೊರಕಿದ್ದು ಕೇವಲ 17 ಸಾವಿರ ಮಂದಿಗೆ ಮಾತ್ರ. ಇದಕ್ಕೆ ಮೂಲ ಕಾರಣವೆಂದರೆ ಹಲ್ಲಿನ ಚಿಕಿತ್ಸೆಯನ್ನು ಒಂದೇ ಬಾರಿಗೆ ನೀಡಲು ಸಾಧ್ಯವಿಲ್ಲ ನಾಲ್ಕು ಐದು ಸಿಟ್ಟಿಂಗ್ ಆಗಬೇಕು,. ಅವರು ಹಿರಿಯ. ನಾಗರಿಕರು, ಅವರ ಜೊತೆಗೆ ಕುಟುಂಬದ ಸದಸ್ಯರಿರುತ್ತಾರೆ, ಹೀಗಾಗಿ ಇದಕ್ಕೆ ಹೆಚ್ಚಿನ ಸಮಯ ಹಿಡಿಯುತ್ತದೆ ಎನ್ನುವುದು ಪರಿಗಣಿಸಿ ಗ್ರಾಮಗಳಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಸಿದರೇ ಅವರಿಗೆ ಉಪಯೋಗವಾಗುತ್ತದೆ, ರಾಜ್ಯದಲ್ಲಿ ಒಟ್ಟು 2 ಸರ್ಕಾರಿ ದಂತ ವೈದ್ಯಕೀಯ ಕಾಲೇಜು ಹಾಗೂ 43 ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಿವೆ, ಎರಡರ ಸಹಭಾಗಿತ್ವದಲ್ಲಿ ಶಿಬಿರ ಆಯೋಜಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದಾರೆ. ಇದರಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ಹಲ್ಲಿನ ಸೆಟ್ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.