ಈ ಸಂಗತಿಗಳನ್ನು ನೀವು ಮನಸ್ಸಿನಲ್ಲಿ ಇಟ್ಟುಕೊಂಡು ಪಾಲಿಸಿದರೆ, ಖಂಡಿತವಾಗಿ ಶ್ರೀಮಂತರಾಗುತ್ತೀರ!!

0
1787

ಮನುಷ್ಯ ಮಾಡುವ ಎಲ್ಲಾ ತರಹದ ವ್ಯಾಪಾರ- ವ್ಯವಹಾರ ಅಥವಾ ಉದ್ಯೋಗದ ಮೂಲ ಕಾರಣ ದುಡ್ಡು ಸಂಪಾದನೆ. ಪ್ರತಿಯೊಬ್ಬ ವ್ಯಕ್ತಿಯ ಮೂಲ ಗುರಿ ದುಡ್ಡು ಸಂಪಾದಿಸುವುದು. ಹೆಚ್ಚೆಚ್ಚು ದುಡ್ಡುಸಂಪಾದನೆ, ಹೆಚ್ಚೆಚ್ಚು ಆವಶ್ಯಕತೆಗಳು, ಹೆಚ್ಚೆಚ್ಚು ಸೇವಿಂಗ್ಸ್. ಆದರೆ ದುಡ್ಡು ಸಂಪಾದಿಸುವುದು ಹೇಗೆ ಎಂಬುದು ಮನುಕುಲವನ್ನು ಅನಾದಿ ಕಾಲದಿಂದಲೂ ಕಾಡುತ್ತಿರುವ ಸಮಸ್ಯೆ. ಈ ರೀತಿಯ ಹುಡುಕಾಟದಲ್ಲಿ ಅನೇಕರು ವಿನಾಶಗಳಿಗೆ ಹಾದಿ ಹಾಕಿಕೊಳ್ಳುತ್ತಾರೆ, ಇನ್ನು ಕೆಲವರು ಹಾಸಿಗೆ ಇದ್ದಷ್ಟು ಕಾಲು ಚಾಚು. ಹಗಲುಗನಸು ಕಾಣಬೇಡಪ್ಪಾ ಅಂತ ಅಂದುಕೊಳ್ಳುವವರು ಇದ್ದಾರೆ.

ಈಗಿನ ಜೀವನದಲ್ಲಿ ದುಡ್ಡು ಮಾಡೋಕೆ ಅನೇಕ ಮಾರ್ಗಗಳಿವೆ. ದುಡ್ಡು ಗಳಿಸುವ ಬಹುತೇಕ ಯುವ ಜನತೆಯಲ್ಲಿ ಇಂತಹ ಅನೇಕ ಮಾರ್ಗಗಳನ್ನು ಅನುಸರಿಸಿ ಅವರನ್ನು ಹಣ ಉಳಿಸುವ ವಿಚಾರದಲ್ಲಿ ನಿಷ್ಕ್ರಿಯರನ್ನಾಗಿ ಮಾಡುತ್ತದೆ ಅಥವಾ ಅವರಿಗೆ ಸೂಕ್ತವಲ್ಲದ ಯಾವುದೋ ಉಳಿತಾಯ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೆಪಿಸುತ್ತದೆ. ಹಾಗಾದರೆ ಹೆಚ್ಚು ದುಡ್ಡು ಮಾಡುವುದು ಹೇಗೆ? ಅದಕ್ಕಾಗಿ ಗಮನಿಸಬೇಕಾದ ಸಂಗತಿಗಳಾವುವು ಎನ್ನುವುದನ್ನು ತಿಳಿಯೋಣ ಬನ್ನಿ…

ಸಮಯದ ಸದುಪಯೋಗ

ಒಮ್ಮೆ ಕಳೆದು ಹೋದ ಹೊತ್ತು ಮತ್ತೆ ಸಿಗಲ್ಲ. ಜೀವನದಲ್ಲಿ ಸಾಧನೆ ಆಗಿರಲಿ ಅಥವಾ ದುಡ್ಡು ಸಂಪಾದನೆ ಆಗಿರಲಿ ಸಮಯವನ್ನು ವ್ಯರ್ಥ ಮಾಡಬಾರದು. ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ಸಿಗುವ ಸಮಯ ಒಂದೇ. ಸಮಯದ ಸದುಪಯೋಗವನ್ನು ಸರಿಯಾಗಿ ಬಳಸಿಕೊಂಡರೆ ಸಾಧನೆಗೆ ಅದೇ ಮೊದಲ ಮೆಟ್ಟಿಲಾಗುತ್ತದೆ.

ಲೆಕ್ಕಾಚಾರದ ವ್ಯವಹಾರ ನಿಮ್ಮದಾಗಿರಲಿ

ನೀವು ಏನೇ ಬುದ್ಧಿ ಉಪಯೋಗಿಸಿ ತಲೆ ಕೆಳಗೆ ಮಾಡಿ ನಿಮ್ಮ ಇಷ್ಟ ಬಂದಂತೆ ನಡೆಯಲು ಹೋದರೆ ನೀವು ಯಾವುದೆ ರೀತಿಯ ಯಶಸ್ಸು ಕಾಣಸಿಗುವುದಿಲ್ಲ. ಹಾಗಾಗಿ ದುಡ್ಡು ಮಾಡುವ ಕೆಲಸಕ್ಕೆ ನಿಮ್ಮದೆಯಾದ ಪಕ್ಕಾ ಲೆಕ್ಕಾಚಾರದ ವ್ಯವಹಾರ ಇರಲಿ. ಇದು ಉತ್ತಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸಹಕಾರಿಯಾಗಿದೆ.

ಮಾಡುವ ಕೆಲಸವನ್ನು ಶ್ರದ್ಧೆ ಇಂದ ಮಾಡಬೇಕು

ಜೀವನದಲ್ಲಿ ಕಷ್ಟಪಡದೇ ಯಾವುದೂ ಸುಲಭವಾಗಿ ದಕ್ಕುವುದಿಲ್ಲ. ತುಂಬಾ ದುಡ್ಡು ಮಾಡಬೇಕು ಅನ್ನೋರು ಜೀವನದಲ್ಲಿ ಕಷ್ಟಪಡದೇ ಅರಾಮಾಗಿ ಕಾಲ ಕಳೆಯಬೇಕು ಅನ್ನೋ ಮನಸ್ಥಿತಿಯನ್ನು ಹೊಂದಿರಬಾರದು. ಅರಾಮಾಗಿರಬೇಕು ಅನ್ನೋದೇ ಮನುಷ್ಯನ ಶರೀರದಲ್ಲೇ ಇರುವ ದೊಡ್ಡ ಶತ್ರು. ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿ ಕ್ಷಣ ಹೊಸ ಸಂಗಾತಿಗಳನ್ನು / ವಿಚಾರಗಳನ್ನು ಹುಡುಕುತ್ತಾ ಮುನ್ನಡೆಯಬೇಕು.

ನಿಮ್ಮನ್ನು ನೀವು ನಂಬಿ

ದುಡ್ಡನ್ನು ಗಳಿಸಲು ಮೊದಲು ನಮ್ಮ ಮೇಲೆ ನಮಗೆ ನಂಬಿಕೆ, ವಿಶ್ವಾಸ ಇರಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನಾದರೊಂದು ಸಾಧಿಸುವ ಛಲಹೊಂದಿರಬೇಕು. ಕಷ್ಟಪಡದೇ ಇಲ್ಲೇನನ್ನೂ ಸಾಧಿಸಲಾಗುವುದಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರ ಗುರಿಸೇರಲು ಸಾಧ್ಯ. ಇದರ ಜೊತೆಗೆ ನೀವು ಸ್ವತಂತ್ರವಾಗಿ ಏನು ಮಾಡಬಹುದು ಎಂಬ ಯೋಚನೆ ಸದಾ ನಿಮ್ಮಲ್ಲಿ ಇರಬೇಕು. ಹೊಸ ಹೊಸ ಯೋಚನೆಗಳು ಹೊಳೆದಾಗ ಅದು ಹೊಸತನಕ್ಕೆ ನಾಂದಿಯಾಗಿ ದುಡ್ಡು ಗಳಿಸುವ ಕೆಲಸ ತುಂಬಾ ಸುಲುಭವಾಗುತ್ತದೆ. ನಮ್ಮ ಬಳಿ ಇರುವ ಆತ್ಮ ವಿಶ್ವಾಸ, ಛಲ ಮತ್ತು ನಿಮ್ಮ ಬುದ್ಧಿ ಶಕ್ತಿಯನ್ನು ಬಳಸಿ ಹೊಸ ಸಾಹಸಕ್ಕೆ ಮುಂದಾಗಬೇಕು.

ಹಣ ಉಳಿತಾಯ

ದುಡ್ಡು ಗಳಿಸುವ ಬಹುತೇಕ ಜನರು ಮೊದಲು ಪ್ರತಿ ತಿಂಗಳು ಆಗುತ್ತಿರುವ ಖರ್ಚು-ವೆಚ್ಚಗಳ ಪಟ್ಟಿಯ ಮೇಲೆ ಕಣ್ಣಾಡಿಸಿ. ಅದರಲ್ಲಿ ಯಾವುದು ಅನಿವಾರ‌್ಯ ಮತ್ತು ಯಾವುದು ಅನಗತ್ಯ ಎಂಬುದನ್ನು ಪಟ್ಟಿ ಮಾಡಿ. ಅನಗತ್ಯ ವೆಚ್ಚಗಳನ್ನು ದೂರ ಮಾಡಿ. ಇದಕ್ಕೆ ದಢ ನಿಶ್ಚಯ ಅಗತ್ಯ. ಅದಕ್ಕೆ ಉಳಿತಾಯದ ವಿಷಯದಲ್ಲಿ ಹೆಚ್ಚಿನ ಶಿಸ್ತನ್ನು ರೂಢಿಸಿಕೊಳ್ಳಬೇಕು.

ಹಣದ ಸದುಪಯೋಗ

ಅತಿ ಆಸೆ ಒಳ್ಳೆಯದಲ್ಲ, ಅದರಂತೆ, ಶ್ರೀಮಂತಿಕೆಯ ಆಸೆಗಳಿಸಿದಷ್ಟೂ ಮತ್ತಷ್ಟು ಗಳಿಸಬೇಕೆಂಬ ಅತಿ ಆಸೆಯೂ ಕೂಡ ಹಾನಿಕಾರಕ. ಹಾಗಾಗಿ ದುಡ್ಡು ಮಾಡಲೇಬೇಕು ಅನ್ನೋರಿಗೆ ಹಣದ ಸದುಪಯೋಗ ತುಂಬಾನೇ ಮುಖ್ಯ ಆಗಿರುತ್ತದೆ. ದುಡಿಯೋದಕ್ಕಾಗಿ ರಿಸ್ಕ್ ತಗೊಳಿ, ಉಳಿತಾಯ ಮಾಡೋಕ್ಕಾಗಿ ಕೇರ್ ತಗೊಳಿ. ಈ ಮಾತು ಎಷ್ಟು ನಿಜ ಅಲ್ವ. ಕಷ್ಟಪಟ್ಟು ಸಂಪಾದಿಸಿದ ದುಡ್ಡನ್ನು ಅನಾವಶ್ಯಕವಾಗಿ ಖರ್ಚು ಮಾಡದೆ ಒಳ್ಳೆಯ ಕಾರ್ಯಗಳಿಗೆ ಮಾತ್ರ ಬೇಕಾದಷ್ಟು ಖರ್ಚು ಮಾಡಿ ಇಳಿದ ಹಣವನ್ನು ಕೂಡಿಡುವುದಕ್ಕೆ ಶ್ರಮಿಸು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಇದನ್ನು ಮನಿ ಮ್ಯಾನೆಜಮೆಂಟ್ ಅಂತ ಕೂಡ ಕರಿಯಬಹುದು.

ಒಳ್ಳೆಯದನ್ನು ಕಲಿಯಿರಿ

ನಿನ್ನೆಯಿಂದ ಕಲಿಯಿರಿ, ಇವತ್ತನ್ನು ಬದುಕಿರಿ, ನಾಳೆಯ ಬಗ್ಗೆ ಭರವಸೆ ಇಡಿ. ದುಡ್ಡು ಗಾಳಿಸುವವರು ಮೊದಲು ಕಲಿಯಲು ಸಿದ್ಧವಿರಿ. ಯಾರೇ ಆಗಿದ್ದರೂ, ವಯಸ್ಸು, ಅನುಭವ, ಶಿಕ್ಷಣದ ಬೇಧವಿಲ್ಲದ ಒಳ್ಳೆಯದನ್ನು ಕಲಿಯಿರಿ. ಪ್ರತಿ ವ್ಯಕ್ತಿಗಳು ವಿಶಿಷ್ಟರಾಗಿರುತ್ತಾರೆ ಮತ್ತು ಅವರದೇ ಉದ್ದೇಶ ಹೊಂದಿರುತ್ತಾರೆ ಹೀಗೆ ಪ್ರತಿಯೊಬ್ಬರೂ ಮಾಡುವ ಕೆಲಸ ಕಾರ್ಯಗಳನ್ನು ನೋಡಿ ಅವರು ಮಾಡುವ ತಪ್ಪುಗಳಿಂದ ನೀವು ತುಂಬಾ ಕಲಿಯಬಹುದು. ಮುಂದೆ ನೀವು ಆ ರೀತಿಯ ತಪ್ಪುಗಳನ್ನು ಮಾಡದಂತೆ ಎಚ್ಚರಿಕೆ ವಹಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗಾಗಿ ಜೀವನದಲ್ಲಿ ದುಡ್ಡನ್ನು ಬಯಸುವ ವ್ಯಕ್ತಿ ಸುತ್ತಮುತ್ತಲಿನವರಿಂದ ತುಂಬಾ ಕಲಿಯಬೇಕಾಗುತ್ತದೆ.

ಸ್ಮಾರ್ಟ್‌ ವರ್ಕ್‌ ಮಾಡುವುದನ್ನು ರೂಢಿಸಿಕೊಳ್ಳಿ

ಹಾರ್ಡ್‌ವರ್ಕ್‌ ಜತೆಗೆ ಸ್ವಲ್ಪ ಸ್ಮಾರ್ಟ್‌ ವರ್ಕ್‌ ಮಾಡಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ವ್ಯಕ್ತಿಗಳ ಬುದ್ಧಿ ಮತ್ತು ಅವರ ನಡವಳಿಕೆ ಅವರನ್ನು ಬುದ್ಧಿವಂತ ಎಂದು ಕರೆಯುವಂತೆ ಮಾಡುತ್ತದೆ. ತಮ್ಮನ್ನು ತಾವು ಯಶಸ್ವಿ ವ್ಯಕ್ತಿಯನ್ನಾಗಿ ರೂಪಿಸಿಕೊಳ್ಳಲು ಹಾರ್ಡ್‌ವರ್ಕ್‌ ಪ್ರತಿಯೊಬ್ಬರು ಮಾಡುತ್ತಾರೆ. ಆದರೆ ಸಫಲತೆ ಸ್ಮಾರ್ಟ್‌ ಆಗಿ ವರ್ಕ್‌ ಮಾಡುವವರಿಗೆ ಮಾತ್ರ ಸಿಗುತ್ತದೆ. ಹಾಗಾಗಿ ಈಗೀನ ತಾಂತ್ರಿಕ ಮತ್ತು ವೈಜ್ಞಾನಿಕ ಯುಗದಲ್ಲಿ ಸ್ಮಾರ್ಟ್ ವರ್ಕ್ ಗೆ ಹೆಚ್ಚು ಬೆಲೆ. ಮಾಡುವ ಕೆಲಸವನ್ನು ಸ್ಮಾರ್ಟ್ ಆಗಿ ನಿರ್ವಹಿಸಬೇಕು. ಆಗ ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.