ಬೀದಿ ನಾಯಿಯ ಕಾಟದಿಂದ ಮುಕ್ತವಾಗಬೇಕೆ..? ಈ ಬಾಟಲಿಯನ್ನು ನಿಮ್ಮ ಮನೆಯ ಮುಂದಿಡಿ, ಬೀದಿ ನಾಯಿಗಳು ಮನೆಯ ಹತ್ತಿರವೂ ಸುಳಿಯಲ್ಲ…!!

0
2852

ನಮಗೆ ಸಾಕು ಪ್ರಾಣಿ ಎಂದ ತಕ್ಷಣ ನೆನಪಿಗೆ ಬರುವ ಮೊದಲ ಪ್ರಾಣಿ ಎಂದರೆ ಅದು ನಾಯಿ. ನಾಯಿಗಿಂತಲೂ ನಿಯತ್ತಾದ ಇನ್ನೊಂದು ಪ್ರಾಣಿಯಿಲ್ಲ ಎಂಬ ಮಾತೊಂದಿದೆ. ಕೆಲವರು ಅದರ ಮೇಲಿನ ಪ್ರೀತಿಗೆ, ಕೆಲವರು ರಕ್ಷಣೆಗೆ ಹಾಗು ಶೋಕಿಗಾಗಿ ಸಾಕುತ್ತಾರೆ. ಇನ್ನು ನಾಯಿಯಲ್ಲಿ ವಿವಿಧ ಜಾತಿ, ಒಂದೊಂದು ಸಾವಿರದಿಂದ ಹಿಡಿದು ಲಕ್ಷಾಂತರ ರೂಪಾಯಿ ಬೆಳೆಗೆ ಮಾರಾಟವಾಗುತ್ತವೆ. ಅದೇ ಬೀದಿ ನಾಯಿ ವಿಷಯಕ್ಕೆ ಬರುವುದಾದರೆ ಜನ ಅವಕ್ಕೆ ಹೆದರಿ ದೂರ ಓಡಿಹೋಗುವುದೇ ಜಾಸ್ತಿ, ಇನ್ನು ಇತ್ತೀಚಿನ ದಿನಗಳಲ್ಲಿ ಅಂತೂ ಬಿಡಿ ನಾಯಿ ಕಡಿತದಿಂದ ಎಷ್ಟೋ ಜನ ಗಾಯಗೊಂಡು ಹಾಸಿಗೆ ಹಿಡಿದ್ದಿದ್ದಾರೆ. ಹೀಗೆ ಬೀದಿ ನಾಯಿಯಿಂದ ಕಂಗೆಟ್ಟ ಉಡುಪಿ ಜಿಲ್ಲೆಯ, ಪರ್ಕಳದ ಸೆಟ್ಟಿಬೆಟ್ಟು ನಿವಾಸಿಯಾದ ಪುಂಡಲೀಕ ಆಚಾರ್ಯ ಅವರು ತಮ್ಮ ಮನೆಯ ಸುತ್ತ ಬೀದಿ ನಾಯಿಗಳು ಹೊಲಸು ಮಾಡುತ್ತಿರೋದನ್ನು ಹೇಗಾದರು ನಿಲ್ಲಿಸಬೇಕೆಂದು ಯೋಚಿಸಿ ಒಂದು ಉಪಾಯ ಕಂಡು ಹಿಡಿದ್ದಿದ್ದಾರೆ.

ನಿತ್ಯ ಪುಂಡಲೀಕ ಆಚಾರ್ಯ ಅವರ ಮನೆಯ ಸುತ್ತ-ಮುತ್ತ ಬರುತ್ತಿದ ಬೀದಿ ನಾಯಿಗಳ ಗುಂಪು ಇವರ ಮನೆಯ ಸುತ್ತ-ಮುತ್ತಲು ಹೊಲಸು ಮಾಡಿ ಹೋಗುತ್ತಿದ್ದವು, ಇದನ್ನು ಸ್ವಚ್ಛ ಮಾಡಿ ರೋಸಿ ಹೋಗಿದ್ದ ಇವರು ಈ ನಾಯಿಗಳಿಗೆ ಎಂದರೊಂದು ಗತಿ ಕಾಣಿಸಬೇಕೆಂದು, ಸ್ನೇಹಿತರ ಬಳಿ ಹೋಗಿ ಹೇಳಿದನು. ಆಗ ಇವರ ಒಬ್ಬ ಸ್ನೇಹಿತರು ಒಂದು ವಿಚಿತ್ರವಾದ ಸಲಹೆ ನೀಡಿದರು, ಅದುವೇ ನೀಲಿ ಬಣ್ಣಕ್ಕೆ, ಬೀದಿ ನಾಯಿಗಳು ಹೆದರುತ್ತವೆ ಎಂದು ಹೇಳಿದರು.

ಸ್ನೇಹಿತ ಕೊಟ್ಟ ಸಲಹೆ ವಿಚಿತ್ರವೆನಿಸಿದರೂ, ಪುಂಡಲೀಕ ಅವರು, ಪ್ರಯತ್ನ ಮಾಡಿದರೆ ತಪ್ಪೇನಿದೆ ಎಂದು ತಮ್ಮ ಮನೆಯಲ್ಲಿಯೇ ಇದ್ದ ಬಟ್ಟೆಗೆ ಹಾಕುವ ಲಿಕ್ವಿಡ್ ನೀಲಿಯನ್ನು ಕೆಲವು ಬಾಟಲಿಯಲ್ಲಿ ಹಾಕಿ ಅದಕ್ಕೆ ನೀರನ್ನು ಕಲಿಸಿ ಮನೆಯ ಸುತ್ತ-ಮುತ್ತಲು ಇಟ್ಟರು. ಈ ಪ್ರಯೋಗ ಅವರಿಗೆ ಅಚ್ಚರಿಯ ರೀತಿ ಕೆಲಸ ಮಾಡಿತು. ಇವರ ಮನೆಯಿಂದ ಕೆಲವೇ ದೂರದಲ್ಲಿ ಬೀದಿ ನಾಯಿಗಳಿದ್ದರೂ ಇವರ ಮನೆ ಬಳಿ ಮಾತ್ರ ಸುಳಿಯಲೇ ಇಲ್ಲ, ಇದನ್ನು ಸ್ನೇಹಿತನಿಗೆ ತಿಳಿಸಿ, ಧನ್ಯವಾದಗಳನ್ನು ಹೇಳಿದ ಪುಂಡಲೀಕ ಈಗ ಬೀದಿ ನಾಯಿಯ ಕಾಟದಿಂದ ಮುಕ್ತವಾಗಿ, ತುಂಬ ಖುಷಿಯಲ್ಲಿದ್ದಾರೆ.

ಈ ನೀಲಿ ಬಣ್ಣದ ನೀರಿರುವ ಬಾಟಲಿಗಳು ಜನರಿಗೆ ಅಚ್ಚರಿ ಮೂಡಿಸಿದೆ, ನೀಲಿ ಬಣ್ಣಕ್ಕೂ ನಾಯಿಗೂ ಏನೋ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಕೆಲವೆಡೆ ಹುಚ್ಚು ಹಿಡಿದ ನಾಯಿಗಳ ಮೇಲೆ ನೀಲಿ ಬಣ್ಣದ ನೀರನ್ನು ಸುರಿಯುತ್ತಿದ್ದರು. ಆಗ ಹುಚ್ಚುನಾಯಿಗಳು ಸತ್ತೇ ಹೋಗುತ್ತಿದ್ದವು ಎನ್ನುವ ಮಾತು ಈಗಲೂ ಇದೆ. ಅದೇ ಹುಚ್ಚು ನಾಯಿಗಳು ಮನುಷ್ಯರನ್ನು ಕಚ್ಚಿದ್ರೂ ಆ ವ್ಯಕ್ತಿಯ ಮೇಲೂ ನೀಲಿ ಬಣ್ಣದ ನೀರನ್ನು ಸುರಿಯುತ್ತಾರೆ ಎಂದು ಹಿರಿಯರು ಹೇಳುತ್ತಿದ್ದರು.

ಒಟ್ಟಿನಲ್ಲಿ ಈ ಹೊಸ ಪ್ರಯೋಗದಿಂದ, ಬೀದಿ ನಾಯಿ ಕಾಟದಿಂದ ಮುಕ್ತವಾಗಲು ಎಲ್ಲ ಜನರಿಗೆ ಒಂದು ಅಸ್ತ್ರ ಸಿಕ್ಕಂತಾಗಿದೆ…!