ಅತಿಯಾಗಿ ಕಾಡುವ ಮೂಲವ್ಯಾಧಿ ಸಮಸ್ಯೆಯಿಂದ ದೂರವಿರಲು ಈ ಸುಲಭ ಮನೆ ಮದ್ದುಗಳನ್ನು ಪಾಲಿಸಿ….

0
2053

ಮೂಲವ್ಯಾಧಿ, ಇದು ಬದಲಾಗುತ್ತಿರುವ ಆಹಾರ ಕ್ರಮ ಮತ್ತು ಜೀವನಶೈಲಿಯಿಂದ ಬರುವ ಕಾಯಿಲೆಯಾಗಿದೆ. ಇದು ತುಂಬಾನೆ ನೋವು ಉಂಟು ಮಾಡುತ್ತದೆ, ಇದನ್ನು ಕಡಿಮೆ ಮಾಡಲು ಈ ಮನೆಮದ್ದುಗಳನ್ನು ಪಾಲಿಸಿ ಮತ್ತು ರಿಲ್ಯಾಕ್ಸ್ ಆಗಿರಿ.

1. ನೀರು:

ನಿತ್ಯ 8 ಲೋಟ ಅಥವಾ 6 ಲೀಟರ್ ನೀರನ್ನು ಕುಡಿಯಿರಿ, ಇದರಿಂದ ದೇಹ ಸದಾ ಹೈಡ್ರಾಟೆಡ್ ಆಗಿ ಇರುತ್ತದೆ ಮತ್ತು ನಿಮ್ಮ ಪಚನ ಕ್ರಿಯೆ ಸಾರಾಗವಾಗಿ ನಿಮ್ಮ ಸಮಸ್ಯೆ ದೂರವಾಗುತ್ತದೆ.

2. ಹಸು ಹಾಲು:

ನಿತ್ಯ ಬೆಳ್ಳಗೆ ಒಂದು ಲೋಟ ಹಸುವಿನ ಹಾಲನ್ನು ಚೆನ್ನಾಗಿ ಕಾಯಿಸಿ ಸ್ವಲ್ಪ ತಣ್ಣಗಾಗಲು ಬಿಡಿ ನಂತರ ಒಂದು ನಿಂಬೆ ಹಣ್ಣಿನ ರಸವನ್ನು ಅದರಲ್ಲಿ ಹಿಂಡಿ ಚೆನ್ನಾಗಿ ಕಲಿಸಿ ಕುಡಿಯಿರಿ ಹೀಗೆ ಒಂದುವಾರ ಮಾಡುವುದರಿಂದ ನಿಂಬೆ ಹಣ್ಣಿನಲ್ಲಿರುವ ಆಮ್ಲದ ಅಂಶ ಹಸುವಿನ ಹಾಲಿನ ಜೊತೆ ಸೇರಿ ನಿಮ್ಮ ಮಲದ್ವಾರ ಸಂಭಂದಿತ ಎಲ್ಲ ಸಮಸ್ಯೆಗಳು ದೂರವಾಗುತ್ತವೆ.

3. ಮೊಸರು ಅಥವಾ ಮಜ್ಜಿಗೆ:

ಮಜ್ಜಿಗೆ ಭೂ ಲೋಕದ ಅಮೃತವೆಂದೇ ಕರೆಯಲು ಪಡುತ್ತದೆ ಅದರಿಂದ ನಿತ್ಯ ಆಹಾರದಲ್ಲಿ ಮೊಸರು ಅಥವಾ ಮಜ್ಜಿಗೆ ಇರುವ ಹಾಗೆ ನೋಡಿಕೊಳ್ಳಿ ಇದರಿಂದ ನಿಮ್ಮ ಪೈಲ್ಸ್ ಸಮಸ್ಯೆ ಕಡಿಮೆಯಾಗುತ್ತದೆ.

4. ಹಣ್ಣು ಹಾಗು ತರಕಾರಿಗಳು:

ನಿತ್ಯ ತಾಜಾ ಹಣ್ಣುಗಳು ಹಾಗು ತರಕಾರಿಗಳನ್ನು ಸೇವಿಸಿ, ತರಕಾರಿ ಹಾಗು ಹಣ್ಣುಗಳಲ್ಲಿರುವ ವಿಟಮಿನ್ ಹಾಗು ಖನಿಜಗಳಿಂದ ದೇಹಕ್ಕೆ ಕಾಯಿಲೆ ವಿರುದ್ಧ ಹೊರಡುವ ಶಕ್ತಿ ಸಿಗುತ್ತದೆ.

ಇದರ ಜೊತೆಗೆ ಕೆಲವು ಸಲಹೆಗಳನ್ನು ತಪ್ಪದೆ ಪಾಲಿಸಿ:

1 ಫಾಸ್ಟ್ ಫುಡ್ ಅಥವಾ ಜಂಕ್ ಫುಡ್ ಅನ್ನು ಆದಷ್ಟು ದೂರವಿಡಿ.
2. ಎಣ್ಣೆಯಲ್ಲಿ ಕರಿದ ಆಹಾರದಿಂದ ದೂರವಿರಿ ಹಾಗು ಉಪವಾಸ ಮಾಡಬೇಡಿ.
3. ಹೆಚ್ಚು ಮಸಾಲೆ ಹಾಗು ಖಾರದ ಪದಾರ್ಥಗಳನ್ನು ಸೇವಿಸಬೇಡಿ.
4. ಮಲವಿಸರ್ಜನೆ ತಡೆಹಿಡಿಯಬಾರದು, ಒತ್ತಡ ಹೇರಿ ಮಲವಿಸರ್ಜನೆ ಮಾಡಬಾರದು.