ನಿಮ್ಮ ಕೈಯಲ್ಲಿ ಸ್ಮಾರ್ಟ್-ಫೋನ್ ಇದ್ದರೆ ಸಾಕು ನೀವೇ ಟ್ರಾಫಿಕ್ ಪೊಲೀಸ್ ಆಗಬಹುದು, ಹೇಗೆ ಅಂತೀರಾ ಮುಂದೆ ಓದಿ!!

0
216

ಕೇಂದ್ರ ಸರ್ಕಾರ ರಸ್ತೆ ಸಂಚಾರಕ್ಕೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಉಲ್ಲಂಘನೆಯ ಮಾಡಿದ ವಾಹನ ಸವಾರರಿಗೆ ದೊಡ್ಡ ಮೊತ್ತದ ದಂಡವನ್ನು ವಿಧಿಸಿದೆ. ಆದರು ಕೂಡ ಸಂಚಾರ ನಿಯಮ ಉಲಂಘನೆಗೆ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನುವುದು ಕೇಳಿಬರುತ್ತಿದೆ. ಅದಕ್ಕಾಗಿ ಹೆಚ್ಚಿನ ಕ್ರಮವನ್ನು ಕೈಗೊಳ್ಳಲು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೊಸ ಯೋಚನೆ ಮಾಡಿದ್ದು, ಸವಾರರು ಸಂಚಾರ ಉಲ್ಲಂಘನೆಯ ಮಾಡುವ ಫೋಟೋವನ್ನು ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

ಉಲ್ಲಂಘನೆಗೆ ‘ಪಬ್ಲಿಕ್ ಐ’ ಆ್ಯಪ್?

ಹೌದು ಬೆಂಗಳೂರಿನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲಿ ನೋಡಿದರು ವಾಹನಗಳೇ ಎದ್ದು ಕಾಣುತ್ತಿವೆ ಅದರಂತೆ ರಸ್ತೆ ನಿಯಮದ ಬಗ್ಗೆ ಕ್ಯಾರೆ ಮಾಡದೇ ನಿಯಮ ಉಲಂಘನೆ ಮಾಡುತ್ತಿದ್ದಾರೆ. ಇದೆಲ್ಲವನ್ನು ನೋಡಿಕೊಳ್ಳಲು ಪೊಲೀಸರಿಗೆ ಸಾಕಾಗುತ್ತಿಲ್ಲ, ಕೆಲವು ರಸ್ತೆಗಳಲ್ಲಿ ಟ್ರಾಪಿಕ್ ಪೊಲೀಸ್ ಇಲ್ಲದನ್ನು ನೋಡಿದ ಸವಾರರು ಬೇಕಾಬಿಟ್ಟಿ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡು. ಪ್ಲೇ ಸ್ಟೋರಿಗೆ ಹೋಗಿ ‘ಪಬ್ಲಿಕ್ ಐ’ ಆ್ಯಪ್ ಡೌನ್‍ಲೋಡ್ ಮಾಡಿ ಸಂಚಾರ ಉಲ್ಲಂಘನೆಯಾಗಿದ್ದರೆ ಈ ಆ್ಯಪ್ ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿ.

Also read: ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಅಭಿಯಾನವಲ್ಲ, ಪ್ಲಾಸ್ಟಿಕ್ ನಿಷೇಧ ಕುರಿತು ಗೊಂದಲದಲ್ಲಿದ್ದ ದೇಶದ ಜನರಿಗೆ ಪ್ರಧಾನಿ ಮೋದಿ ಸ್ಪಷ್ಟನೆ.!

ನೀವು ಕಳುಹಿಸಿದ ಫೋಟೋವನ್ನು ಟ್ರಾಫಿಕ್ ನಿಯಂತ್ರಣ ಕೇಂದ್ರದಲ್ಲಿ ಪರಿಶೀಲಿಸಿ ಇ ಚಲನ್ ಕಳುಹಿಸಲಾಗುವುದು. ಕಳುಹಿಸಿದ ವ್ಯಕ್ತಗಳ ವಿವರವನ್ನು ಗೌಪ್ಯವಾಗಿಡಲಾಗುವುದು. ನೀವು ನಾಗರಿಕ ಪೊಲೀಸರಾಗಿ ಎಂದು ಹೇಳಿದ್ದಾರೆ. ಈ App ಎಲ್ಲರ ಮೊಬೈಲ್-ಗಳಲ್ಲಿ ಸಿಗುತ್ತಿದ್ದು ನಿಮ್ಮ ಮುಂದೆ ಯಾರಾದರು ರಸ್ತೆ ನಿಯಮ ಪಾಲಿಸದೆ ಹೋದರೆ ಆ ವಾಹನದ ಫೋಟೋ ಕಳುಹಿಸಿ ದಂಡಕ್ಕೆ ಗುರಿಪಡಿಸಬಹುದು. ಇದರಿಂದ ಸವಾರರು ಬರಿ ಪೊಲೀಸರಿಗೆ ಹೆದರದೇ ಸಾರ್ವಜನಿಕರಿಗೆ ಹೆದರಿ ನಿಯಮ ಪಾಲಿಸುತ್ತಾರೆ ಎನ್ನುವುದು ಇವರ ಉದ್ದೇಶವಾಗಿದೆ.

ಈ ಹಿಂದೆ ಕೂಡ ಟ್ವೀಟ್ ಮಾಡಿ. ಸ್ವಯಂ ಪ್ರೇರಿತವಾಗಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಇಚ್ಛೆ ಪಡುವವರು ಹತ್ತಿರದ ಟ್ರಾಫಿಕ್​ ಪೊಲೀಸ್​ ಠಾಣೆಯನ್ನು ಸಂಪರ್ಕಿಸಬೇಕು. ಎಂದು​ ಭಾಸ್ಕರ್​ ರಾವ್​, ಟ್ವೀಟ್ ಮಾಡಿ “ಸುಲಲಿತ ಸಂಚಾರಕ್ಕೆ ಅನುವು ಮಾಡಿಕೊಡುವುದಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ಹೀಗಾಗಿ ಟ್ರಾಫಿಕ್​​ ವಾರ್ಡನ್​ಗಳ ಸಂಖ್ಯೆಯನ್ನು 390ರಿಂದ 2,500ಕ್ಕೆ ಏರಿಕೆ ಮಾಡುತ್ತಿದ್ದೇವೆ. ಹೀಗಾಗಿ ಆಸಕ್ತರು ಇದಕ್ಕೆ ಕೈ ಜೋಡಿಸಬಹುದು. ಇದಕ್ಕಾಗಿ ನೀವು ಸ್ಥಳೀಯ ಪೊಲೀಸ್​ ಠಾಣೆಯನ್ನು ಸಂಪರ್ಕಿಸಿ,” ಎಂದು ತಿಳಿಸಿದರು.

Also read: ಕೇಂದ್ರದ ಅಧೀನ ಸಂಸ್ಥೆ ‘ಅಂಚೆ ಬ್ಯಾಂಕ್-ಗಳಲ್ಲಿ ವ್ಯಾವಹಾರಿಕ ಭಾಷೆಯಾಗಿ ಇಂಗ್ಲಿಷ್ – ಹಿಂದಿ ಮಾತ್ರ ಹಾಗಾದ್ರೆ ಕನ್ನಡಕ್ಕೆ ಇಲ್ವಾ ಮರ್ಯಾದೆ??

ಅದರಂತೆ ಟ್ರಾಫಿಕ್​ ನಿಯಂತ್ರಣಕ್ಕೆ ಹೊಸ ಹೆಜ್ಜೆ ಇಟ್ಟಿದ್ದು, ಇಂತಹ ಸಮಾಜ ಸೇವೆ ಮಾಡಬೇಕೆನ್ನುವ ಇಚ್ಛೆ ಇರುತ್ತದೆಯೋ ಅವರು ಹತ್ತಿರದ ಟ್ರಾಫಿಕ್​ ಠಾಣೆಗೆ ಭೇಟಿ ನೀಡಬಹುದು. ನಿಮಗೆ ಹೊಂದಾಣಿಕೆ ಆಗುವ ಸಮಯದಲ್ಲಿ, ನಿಮಗಿಷ್ಟದ ಜಾಗದಲ್ಲಿ ನೀವು ಟ್ರಾಫಿಕ್​ ನಿಯಂತ್ರಣ ಮಾಡಬಹುದು ಇದೊಂದು ಹೊಸ ಪ್ರಯೋಗವಾಗಿದೆ. ಇದೆಲ್ಲ ವಿಚಾರವಾಗಿದೆ ಎಂದು ತಿಳಿಸಿದರು ಈಗ ಮತ್ತೆ app ಮೂಲಕ ಫೋಟೋ ಕಳುಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.