ಬಯಲುಸೀಮೆಯ ಕುಕ್ಕೆ ಸುಬ್ರಮಣ್ಯವೆಂದೇ ಖ್ಯಾತಿ ಪಡೆದಿರುವ ಶ್ರೀ ಘಾಟಿ ಸುಬ್ರಮಣ್ಯ ಸ್ವಾಮಿ ದೇಗುಲದಲ್ಲಿ ನೀವು ಎಂದೂ ಊಹಿಸಲಾಗದ ರಹಸ್ಯಗಳಿವೆ. ತಪ್ಪದೆ ಒಮ್ಮೆ ಭೇಟಿ ಕೊಡಿ..!!

1
1616

ಪ್ರತಿ ದೇಗುಲದ ಗರ್ಭಗುಡಿಗೆ ವಿರುದ್ದ ದಿಕ್ಕಿನಲ್ಲಿ ಒಂದು ಕನ್ನಡಿ ಇರುವುದನ್ನು ಸಾಮಾನ್ಯವಾಗಿ ನೀವು ನೋಡಿರುತ್ತೀರಿ ಆದರೆ ಇಲ್ಲಿ ಕನ್ನಡಿಯು ಇರುವ ಜಾಗವು ಬೇರೆ. ಏನಪ್ಪಾ ಇದರಲ್ಲಿ ವಿಶೇಷ ಅಂದರೆ, ಇಲ್ಲಿ ಪೂರ್ವಾಭಿಮುಖನಾದ ಏಳು ಹೆಡೆಗಳ ಸುಬ್ರಹ್ಮಣ್ಯ ಸ್ವಾಮಿಯ ಎದುರು, ಪಶ್ಚಿಮಾಭಿಮುಖವಾಗಿರುವ ಲಕ್ಷ್ಮೀನರಸಿಂಹ ಸ್ವಾಮಿ ಮೂರ್ತಿಯಿದೆ. ಅಲ್ಲಿಗೆ ಬರುವ ಭಕ್ತರಿಗೆ ಎರಡು ವಿಗ್ರಹಗಳ ದರ್ಶನವಾಗಲೆಂದು, ಒಂದು ದೊಡ್ಡ ಕನ್ನಡಿಯನ್ನು ಗರ್ಭಗುಡಿಯಲ್ಲಿ ಆರಾಧ್ಯ ಹಿಂದೆ ಇರಿಸಲಾಗಿದೆ. ಇದರಿಂದ ದರ್ಶನಕ್ಕಾಗಿ ಬರುವ ಭಕ್ತರಿಗೆ ಎರಡು ವಿಗ್ರಹಗಳ ದರ್ಶನವಾಗಿ ದೇವರ ಕೃಪೆ ಸಿಗುತ್ತದೆ ಅಂತ. ಈ ರೀತಿ ಕನ್ನಡ ಆರಾಧ್ಯ ಹಿಂದೆ ಇರುವುದನ್ನು ಕಾಣಸಿಗುವುದು ತುಂಬಾ ಅವರೂಪ.

Also read: ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವವರು ಮರಕತದಲ್ಲಿರೋ ಶ್ರೀ ದುರ್ಗಾಪರಮೇಶ್ವರಿಯನ್ನು ನೋಡಲು ಮರೀಬೇಡಿ…!!

 

ಒಂದೇ ಗರ್ಭಗುಡಿಯ ಒಡಲೊಳಗಿನ ಉದ್ಭವ ಶಿಲೆಯೊಳು ಹರಿ-ಹರರ ವಂಶಸ್ಥರು ನೆಲೆಸಿರುವುದು ಒಂದು ಅಪರೂಪದ ಸಂಗತಿ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರಿಗೆ ಸಂಡೂರಿನ ಘೋರ್ಪಡೆ ವಂಶದ ಅರಸರು 1600ರಲ್ಲಿ ಶ್ರೀ ಸ್ವಾಮಿಯವರಿಗೆ ದೇವಾಲಯವನ್ನು ನಿರ್ಮಿಸಿದರು. ಇದು ಅತ್ಯಂತ ಪುರಾತನ ದೇವಾಲಯಗಳಲ್ಲಿ ಇದು ಕೂಡ ಒಂದು.

ಶ್ರೀ ಸುಬ್ರಹ್ಮಣ್ಯ ಘಾಟಿ ಹೆಸರಿನ ಹಿಂದೆ ಎರಡು ಬೇರೆ-ಬೇರೆ ವಾಡಿಕೆಗಳು ಇವೆ. ಅವು ಸುಬ್ಬರಾಯನ ಘಾಟಿ ಮತ್ತು ಎಸ್.ಎಸ್.ಘಾಟಿ ಎಂದು. ಈ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ನಡೆಯುವ ದನಗಳ ಜಾತ್ರೆ ಘಾಟಿ ಸುಬ್ರಹ್ಮಣ್ಯದಷ್ಟೇ ಹೆಸರುವಾಸಿ. ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಕರ್ನಾಟಕದ ನಾನಾ ಭಾಗಗಳ ರೈತರು ಎತ್ತುಗಳನ್ನು ಮಾರಾಟ ಮಾಡಲು ಹಾಗೂ ಕೊಳ್ಳಲು ಜಾತ್ರೆಗೆ ಬರುತ್ತಾರೆ. ನೀವು ಘಾಟಿ ಸುಬ್ರಮಣ್ಯಕ್ಕೆ ಹೋದಾಗ ತಪ್ಪದೇ ಶ್ರೀ ಲಕ್ಷ್ಮಿ ನರಸಿಂಹನ ದರ್ಶನವೂ ಮಾಡಿ ಬನ್ನಿ. ಎರಡು ದೇವರ ದರ್ಶನ ಒಟ್ಟಿಗೆ ಲಭಿಸುವುದು ಪುಣ್ಯಫಲ.

 

Also read: ಕರ್ನಾಟಕದ ಈ ಒಂಬತ್ತು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದರೆ, ನಿಮ್ಮೆಲ್ಲಾ ಕಷ್ಟಗಳು ಶೀಘ್ರವೇ ಪರಿಹಾರವಾಗುತ್ತೆ, ನೀವು ಎಷ್ಟಕ್ಕೆ ಭೇಟಿ ಕೊಟ್ಟಿದ್ದೀರ?

ಇಲ್ಲಿಯ ಮತ್ತೊಂದು ವಿಶೇಷ. ಮಕ್ಕಳಾಗದವರು, ಬದುಕಿನಲ್ಲಿ ಸುಖ-ಶಾಂತಿಯನ್ನು ಅರಸಿ ಬರುವವರು ಇಲ್ಲಿ ಹರಕೆ ಹೊತ್ತು ಪ್ರತಿಷ್ಠಾಪಿಸಿದ ನೂರಾರು ನಾಗರ ಕಲ್ಲುಗಳನ್ನು ಕಾಣುತ್ತೇವೆ. ಜನಪ್ರಿಯ ಸಂಪ್ರದಾಯದ, ಜೊತೆಗೆ ಜನರ ಮತ್ತು ಭಕ್ತರ ನಂಬಿಕೆಗೆ, ಮಕ್ಕಳಿಲ್ಲದ ದಂಪತಿಗಳಿಗೆ ಪೂಜೆ ಮತ್ತು ಹರಕ್ಕೆಯ ನಂತರ ದೇವರ ಆಶೀರ್ವಾದದ ಫಲವಾಗಿ ಮಕ್ಕಳ ಭಾಗ್ಯ ದೊರಕಿದೆ.

Also read: ಒತ್ತಡಗಳ ಮಧ್ಯೆ ನೆಮ್ಮದಿ ಅರಸುತ್ತಿದ್ದರೆ ಈ ವೀಕೆಂಡ್ ಬೆಂಗಳೂರಿನ ಹೊರವಲಯದಲ್ಲಿರುವ ನವಗ್ರಹಗಳ ಬನ ಶ್ರೀಧರ ಶ್ರೀಗುಡ್ಡಕ್ಕೆ ತಪ್ಪದೇ ಭೇಟಿ ಕೊಡಿ..

ಜಾತಕಗಳಲ್ಲಿ ಸರ್ಪದೋಷ, ನಾಗದೋಷ ಮತ್ತು ಕಾಳಸರ್ಪ ದೋಷ, ಅನಾರೋಗ್ಯ, ವೈವಾಹಿಕ ಜೀವನದಲ್ಲಿನ ಸಂಕಷ್ಟ, ಗಂಡು ಸಂತಾನ ಇಲ್ಲದಿರುವುದು, ಸಂತಾನಹೀನತೆ ಮುಂತಾದ ದೋಷಗಳ ಪರಿಹಾರಕ್ಕಾಗಿ ನಡೆಯುವ ಸಾಂಪ್ರದಾಯಿಕ ಪೂಜೆಯಾದ “ಆಶ್ಲೇಷ ಬಲಿ” ಅಥವಾ “ಆಶ್ಲೇಷ ಬಲಿ ಪೂಜೆ” ಇವು ಸುಬ್ರಮಣ್ಯ ದೇವರ ಸನ್ನಿಧಿಯಲ್ಲಿ ನಡೆಯುವ ವಿಶಿಷ್ಟ ಪೂಜಾ ಪದ್ಧತಿಗಳು.