ಫಟಾಫಟ್ ತಯಾರಿಸಬಹುದಾದ ರುಚಿಕರ ಘೀ ರೈಸ್

0
3496

ಹೆಚ್ಚೇನು ತಯಾರಿ ಮಾಡಿಕೊಳ್ಳದೇ ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ಸರಳವಾಗಿ ಮಾಡುವ ಘೀ ರೈಸ್.

ಬೇಕಾಗುವ ಪದಾರ್ಥಗಳು:

1/4 ಕೆ.ಜಿ. ಅಕ್ಕಿ,
4 ಈರಿಳ್ಳಿ,
ಲವಂಗ,
2 ತುಂಡು ಚೆಕ್ಕೆ (ದಾಲಚಿನ್ನಿ),
2 ಲೀಟರ್ ಚಮಚ ತುಪ್ಪ
ರುಚಿಗೆ ಉಪ್ಪು

ಮಾಡುವ ವಿಧಾನ:

ಅಕ್ಕಿಯನ್ನು ಚೆನ್ನಾಗಿ ತೊಳೆದು, ಒಣಗಿಸಿ, ಪಕ್ಕದಲ್ಲಿಡಿ.
ಈರೊಳ್ಳಿಯನ್ನು ಸಣ್ಣಗೆ ಹೆಚ್ಚಿ ಒಲೆಯ ಮೇಲೆ ಬಾಣಲೆಯನ್ನಿಟ್ಟು ತುಪ್ಪ ಹಾಕಿ ಕಾದ ನಂತರ ಈರೊಳ್ಳಿಯನ್ನು ಸಣ್ಣಗೆ ಹಾಗೆ ಕೆಂಪಗೆ ಹುರಿದು ತೊಳೆದಿಟ್ಟ ಅಕ್ಕಿಯನ್ನು ಹಾಕಿ.
ಅಕ್ಕಿ ಬಿಳಿ ಬಿಳಿ ಆಗುವವರೆಗೆ ಮುಗುಚ ಬೇಕು.
ಆ ಮೇಲೆ 3 ಲೋಟ ನೀರು ಹಾಕಿ ಮುಚ್ಚಿಡಬೇಕು. ಅನ್ನ ಬೇಯದಿದ್ದರೆ ಪುನಃ ನೀರು ಚುಮುಕಿಸಬಹುದು.
ನಂತರ ಉದುರುದುರಾಗಿ ಬೆಂದ ನಂತರ ಉಪ್ಪು ಹಾಕಿ, ಚೆಕ್ಕೆ, ಲವಂಗವನ್ನು ಜಜ್ಜಿ ಹಾಕಿ ಮಗಚುವುದು ಇದು ತಿನ್ನಲು ಬಲು ರುಚಿ ಇದನ್ನು ಊಟಕ್ಕೂ ಉಪಯೋಗಿಸಬಹುದು.
ಬೇಕಾದರೆ ಗೋಡಂಬಿ, ಒಣದ್ರಾಕ್ಷಿ, ಹುರಿದ ಈರುಳ್ಳಿಯನ್ನು ಸೇರಿಸಿ, ಘೀ ರೈಸ್ ಅನ್ನು ಬಿಸಿಯಾಗಿ ಬಡಿಸಿ.