ಸತ್ತ ಮೇಲೆ ಮನುಷ್ಯ ಪ್ರೇತಾತ್ಮನಾಗಿ ಅಲೆಯುತ್ತಾನೆ: ಧೃಡೀಕರಿಸಿದೆ ಹೊಸ ಸಂಶೋಧನೆ!!!

0
3636

ದೇವರಿದ್ದರೇ ಭೂತನು ಉಂಟೂ

ಜಗತ್ತಿನಲ್ಲಿ ಮುಕ್ಕೋಟಿ ದೇವರಿದ್ದಾರೆ. ಸಂಕಟ ಬಂದಾಗ ವೆಂಕಟರಮಣ ಎಂದು ನೆನೆಯುತ್ತಲೇ ಇರುತ್ತೇವೆ. ದೇವರು ಇದ್ದಾನೆ ಎನ್ನುವುದಾದರೆ, ಭೂತಗಳು ಇವೆಯೇ ಎಂಬ ಅನುಮಾನ ಕಾಡದೆ ಇರದು. ಇದಕ್ಕಾಗಿ ಸಂಶೋಧಕರು ಭೂತಗಳ ಬಗ್ಗೆ ಅಧ್ಯಯನ ನಡೆಸಿದ್ದು, ಇದರ ಸವಿಸ್ತಾರವಾದ ಮಾಹಿತಿಯನ್ನು ಕಲೆಹಾಕಿದ್ದಾರಂತೆ.


ಇತ್ತೀಚೀಗೆ ವಿದೇಶಗಳಲ್ಲಿ ನಡೆಸಿದ ಸರ್ವೇ ಪ್ರಕಾರ ಅಮೆರಿಕದಲ್ಲಿ ಶೇ ೪೨ರಷ್ಟು ಮತ್ತು ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್‌ನ್‌ಲ್ಲಿ) ಶೇ ೫೨ ರಷ್ಟು ಮಂದಿ ಭೂತ ಪ್ರೇತಗಳನ್ನು ನಂಬುತ್ತಾರಂತೆ. ಈ ಬಗ್ಗೆ ಬ್ರಿಟಿಷ್ ಸಂಶೋಧಕರಾದ ಬ್ರೈನ್ ಕಾಕ್ಸ್ ತಮ್ಮದೇ ಆಧಾರದಲ್ಲಿ ಭೂತಗಳು ಇವೆ ಎನ್ನುವುದಕ್ಕೆ ಸಾಕ್ಷಿ ಸಮೇತ ಸಾಬೀತು ಮಾಡಲು ಹೊರಟಿದ್ದಾರೆ.

Image result for ghost

ಸತ್ತ ವ್ಯಕ್ತಿ ನಂತರದ ದಿನಗಳಲ್ಲಿ ಭೂತ ಪ್ರೇತಾತ್ಮನಾಗಿ ಹೇಗೆ ತಿರುಗಾಡುತ್ತಾನೆ. ಆತನಿಗೆ ಹಸಿವಾದರೆ ಏನನ್ನು ತಿನ್ನುತ್ತಾನೆ. ಹೇಗೆ ವಿಹರಿಸುತ್ತಾನೆ ಇಂತಹ ಸಾಕಷ್ಟು ಮೈನವೇರಿಳಿಸುವ ವಿಷಯಗಳ ಬಗ್ಗೆ ಕಾಕ್ಸ್ ಮಾಹಿತಿ ಸಂಗ್ರಹಿಸಿದ್ದಾರೆ. ಇದಕ್ಕಾಗಿ ಸ್ವತಃ ಅವರೇ ಅಧ್ಯಯನ ನಡೆಸಿದ್ದಾರೆ. ಭೂತಕಾಲ, ಭವಿಷ್ಯ ಮತ್ತು ಪ್ರಸಕ್ತ ಕಾಲಘಟ್ಟದಲ್ಲಿ ನಡೆಯುವ ಎಲ್ಲಾ ಘಟನೆಗಳಲ್ಲು ಸಂಬಂಧ ಇರುತ್ತದೆ ಎಂದು ಕಾಕ್ಸ್ ಅವರ ಅಧ್ಯಯನದಿಂದ ತಿಳಿದುಬರುತ್ತದೆ.

ಮನುಷ್ಯನ ಒಳಗಿನ ಆತ್ಮಕ್ಕೆ ಸಾಕಷ್ಟು ಶಕ್ತಿ ಇರುತ್ತದೆ. ಅದು ಲೋಕ ಸಂಚಾರಿ, ಈಗ ಮನುಷ್ಯನ ದೃಷ್ಟಿ ಒಂದು ಕಡೆ ಹೇಗೆ ಇರುವುದಿಲ್ಲವೋ ಹಾಗೆ ಆತ್ಮದ ಸಂಚಾರವು ಒಂದೆಡೆ ನಿಲ್ಲುವುದಿಲ್ಲ. ಜೀವಂತ ವಿದ್ದಾಗ ಮಾತ್ರ ಮನುಷ್ಯ ಒಂದೆಡೆ ನೆಲೆಯೂರಿ ನಿಲ್ಲುತ್ತಾನೆ. ಆದರೆ ಆತ್ಮಕ್ಕೆ ಯಾವುದೇ ಸಂಕೋಲಿಗಳಿರುವುದಿಲ್ಲ. ಹೀಗಾಗಿ ಆತ್ಮ ಎಲ್ಲೆಡೆ ಸಂಚರಿಸುತ್ತಿರುತ್ತದೆ. ಅದಕ್ಕೆ ಯಾವುದೇ ಲಗಾಮು ಹಾಕುವುದಕ್ಕೆ ಸಾಧ್ಯವಿಲ್ಲ.

Image result for ghost
ಮನುಷ್ಯ ಎನ್ನುವುದನ್ನು ಕಾಕ್ಸ್ ಇಲ್ಲಿ ಒಂದು ಸಿಸ್ಟಂಗೆ ಹೋಲಿಸುತ್ತಾರೆ. ಅದರ ಶಕ್ತಿ ಆತ್ಮ ಎನ್ನುವುದಾದರೆ, ಒಂದಲ್ಲ ಒಂದು ದಿನ ಎಲ್ಲಾರೂ ಶಕ್ತಿಯನ್ನು ಕಳೆದುಕೊಳ್ಳುತ್ತಾರೆಯೇ ಹೊರತು ಚಿರಂಜೀವಿಗಳಾಗಿರಲು ಸಾಧ್ಯವಿಲ್ಲ ಎಂದು ಕಾಕ್ಸ್ ತಮ್ಮದೇ ಆದ ದಾಟಿಯಲ್ಲಿ ಭೂತಗಳ ಬಗ್ಗೆ ವಿವರಣೆ ನೀಡುತ್ತಾರೆ.