ಮದುವೆಯಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಅದು ಸ್ಫೋಟವಾಗಿದೆ, ಹೇಗೆ ಗೊತ್ತಾ?

0
716

Kannada News | Karnataka News

ಮದುವೆಯಲ್ಲಿ ಸಾಮಾನ್ಯವಾಗಿ ಎಲ್ಲರು ಅಲಂಕಾರದ ವಸ್ತುಗಳು, ಬೆಳ್ಳಿ, ಬಂಗಾರ ಅಥವಾ ಯಾವುದಾದರು ಅಮೂಲ್ಯ ವಸ್ತುಗಳು, ಕಾರ್ಡ್ಗಳು, ಹೂಗುಚ್ಛಗಳನ್ನು, ಅಡುಗೆಯ ಸಾಮಾನುಗಳು ಅಥವಾ ಗೃಹ ಉಪಕರಣಗಳನ್ನು ವಧು-ವರರಿಗೆ ಉಡುಗೊರೆ ನೀಡುತ್ತಾರೆ. ಆದರೆ, ಈ ಮದುವೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಸ್ಪೋಟಕ ವಸ್ತುವನ್ನುಉಡುಗರೆಯಾಗಿ ನೀಡಿದ್ದಾನೆ.

ಹೌದು, ಅಪರಿಚಿತ ವ್ಯಕ್ತಿಯೊಬ್ಬ ಸ್ಪೋಟಕ ವಸ್ತುವನ್ನುಉಡುಗರೆಯಾಗಿ ನೀಡಿದ್ದಾನೆ, ಮದುವೆಯಲ್ಲಿ ಬಂದ ಉಡುಗೊರೆಯನ್ನು ತೆರೆದಾಗ ಅದು ಸ್ಫೋಟವಾಗಿ ವರ ಹಾಗೂ ಆತನ ಅಜ್ಜಿ ಸಾವನ್ನಪ್ಪಿದ್ದು, ವಧುವಿಗೆ ಗಂಭೀರ ಗಾಯಗಳಾಗಿರುವ ಘಟನೆ ಒಡಿಶಾದ ಬೋಲಾಂಗೀರ್ ಜಿಲ್ಲೆಯಲ್ಲಿ ನಡೆದಿದೆ.

ಮಾಡುವೆ ನಡೆದು ಐದು ದಿನಗಳ ನಂತರ ಬುಧುವಾರ ಆರತಕ್ಷತೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಆರತಕ್ಷತೆಯ ಸಮಯದಲ್ಲಿ ಬಂದ ಎಲ್ಲ ಉಡುಗೊರೆಗಳನ್ನು ತೆರೆದು ನೋಡುವಾಗ ಈ ಆಘಾತಕಾರಿ ಘಟನೆ ನಡೆದಿದೆ. ಉಡುಗೊರೆ ಸ್ಫೋಟವಾಗುತ್ತಿದ್ದಂತೆ ಮನೆಯಲ್ಲಿದ್ದ ವರನ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ ಗಾಯಗೊಂಡಿದ್ದ ವರ ಚಿಕಿತ್ಸೆ ಫಲಿಸದೇ ರೂರ್ಕೆಲಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಉಡುಗರೆಗಳನ್ನು ಏರಿಯುತ್ತಿರುವಾಗ ಸ್ವಲ್ಪ ದೂರದಲ್ಲಿದ್ದ ವಧು ಬದುಕುಳಿದ್ದಿದ್ದಾಳೆ. ಆದರೆ, ಸ್ಫೋಟದಿಂದ ವಧುವಿಗೂ ಗಂಭೀರ ಗಾಯಗಳಾಗಿದ್ದು, ಬುರ್ಲಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಉಡುಗೊರೆ ಯಾರು ನೀಡಿದರು ಎಂದು ಇನ್ನು ತಿಳಿದು ಬಂದಿಲ್ಲ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಗೊರೆ ಸ್ಫೋಟಗೊಂಡಾಗ ಗಾಯಗೊಂಡಿದ್ದ ವರ ರೂರ್ಕೆಲಾದ ಇಸ್ಪಟ್ ಜನರಲ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ, ಆತನ ಅಜ್ಜಿಯನ್ನು ಆಸ್ಪತ್ರೆಗೆ ಕರೆತರುವಾಗ ದಾರಿಯ ಮದ್ಯೆಯೇ ಕೊನೆಯುಸಿರೆಳೆದ್ದಿದ್ದಾರೆ ಎಂದು ಬೋಲಾಂಗೀರ್ ನ ಮುಖ್ಯ ಜಿಲ್ಲಾ ವೈದ್ಯಕೀಯ ಅಧಿಕಾರಿ ವಿವರಿಸಿದ್ದಾರೆ.