ಮನೆಯಲ್ಲೇ ಬೆಳೆಸಿ ಶುಂಠಿ

0
577

ಶುಂಠಿ ಆರೋಗ್ಯ ರಕ್ಷಕ ತಿನಿಸುಗಳಲ್ಲೊಂದು, ನಿತ್ಯ ಅಡುಗೆ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಆದರೆ ಶುಂಠಿಯಲ್ಲಿನ ಆರೋಗ್ಯ ರಕ್ಷಕ ಗುಣ ಕೇವಲ ಅದು ತಾಜಾ ಇರುವವರೆಗೆ ಮಾತ್ರವೇ ಉಳಿದಿರುತ್ತದೆಂದು ಅನೇಕ ತಜ್ಞರು ಹೇಳುತ್ತಾರೆ. ಮಾರುಕಟ್ಟೆಯಿಂದ ನಾವು ತರುವ ಶುಂಠಿಯ ತಾಜಾತನದ ಮೇಲೆಸ್ವಲ್ಪ ನಂಬಿಕೆ ಕಡಿಮೆ ಹಾಗಾದರೆ ತಾಜಾ ಶುಂಠಿ ಸಿಗುವುದಾದರೂ ಎಲ್ಲಿ?. ಅದಕ್ಕೆಂದೇ ನಾವು ಶುಂಠಿಯನ್ನು ಮನೆಯಲ್ಲಿಯೇ ಅಗತ್ಯಕ್ಕನುಗುಣವಾಗಿ ಬೆಳಸಿ, ಬಳಸುವುದರಿಂದ ಶುಂಠಿಯ ತಾಜಾತನ ನಮಗೆ ದೊರೆತು ಆರೋಗ್ಯವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಮನೆಯಲ್ಲಿ ಶುಂಠಿಯನ್ನು ಬೆಳೆಯುವ ಆಲೋಚನೆ ನಿಮ್ಮದಾಗಿದ್ದರೆ ಅದನ್ನು ಹೇಗೆ ಬೆಳೆಯುತ್ತೀರಿ?. ಚಿಂತೆ ಬಿಡಿ. ಇದನ್ನು ಬೆಳೆಯಲು ಯಾವುದೇ ಮಾನವ ಸಂಪನ್ಮೂಲಗಳ ಅಥವಾ ಹತ್ತಾರು ಹೆಕ್ಟೇರ್’ಗಳಷ್ಟು ಕೃಷಿ ಭೂಮಿಯ ಅಗತ್ಯವಿಲ್ಲ. ಶುಂಠಿ ಬೆಳೆಯಲು ಮೆನೆಯ ಕೈತೋಟದಲ್ಲಿ ಅಂಗೈಯಗಲ ಜಾಗ ಅಥವಾ ಅಲಂಕಾರಿಕ ಹೂಗಿಡಗಳನ್ನು ಬೆಳೆಸಲು ತಂದಿಟ್ಟಿರುವ ಹೂಕುಂಡದಲ್ಲಿಯೇ ಬೆಳೆಸಬಹುದು.

ಶುಂಠಿ ಬೆಳೆಯಲು ತೀರ್ಮಾನಿಸಿರುವ ಹೂಕುಂಡ ಅಥವಾ ಕೈತೋಟದಲ್ಲಿನ ಅಗತ್ಯದಷ್ಟು ಜಾಗವನ್ನು ಮೊದಲಿಗೆ ಮಣ್ಣನ್ನು ಸಡಿಲಿಸಿ ಸಿದ್ಧಪಡಿಸಿಕೊಂಡು ನಂತರ ಮಮನೆಯಲ್ಲಿ ಇರುವ ಈಗಾಗಲೇ ‘ಕಣ್ಣು’ ಹೊಂದಿದ ಅಥವಾ ಕುಡಿ ಬಂದ ಶುಂಠಿಯನ್ನು  ತೆಗೆದುಕೊಂಡು ಕುಂಡದಲ್ಲಿ ಎರಡು ಅಥವಾ ಮೂರು ಶುಂಠಿಗಳನ್ನು ಒಂದಕ್ಕೊಂದು ತಾಗದಂತೆ ಮಣ್ಣಿನಲ್ಲಿರಿಸಿ. ಕುಡಿಗಳು ಮೇಲಕ್ಕೆ ಇರಬೇಕು, ಪ್ರಾರಂಭದಲ್ಲಿ ನೀರನ್ನು ಹಿನಿಗಳ ರೂಪದಲ್ಲಿ ಚಿಮುಕಿಸುತ್ತಿರಬೇಕು. ಅದು ಚಿಗುರಿ ಬೆಳೆಯಲು ಪ್ರಾರಂಭಿಸಿದ ನಂತರ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹಾಕಬೇಕು.

ಚಳಿಗಾಲ ಅಥವಾ ಅತೀ ಕಡಿಮೆ ತಾಪಮಾನದ ದಿನಗಳಲ್ಲಿ ನೀರನ್ನು ಹೆಚ್ಚು ಹಾಕಬಾರದು. ಅದು ಗಿಡವನ್ನು ಬಾಡಿಸುತ್ತದೆ. ಶುಂಠಿ ಬೆಳೆಗೆ ಅಧಿಕ ಉಷ್ಣಾಂಶದ ಅಗತ್ಯವಿರುವುದಿಲ್ಲ, 25-30 ಡಿಗ್ರಿ ತಾಪಮಾನದಲ್ಲಿ ಇದು ಸರಾಗವಾಗಿ ಚಿಗುರೊಡೆದು ಬೆಳೆಯುತ್ತದೆ.