ಅಡುಗೆ ರುಚಿ ಹೆಚ್ಚಿಸುವ ಮತ್ತು ಔಷಧೀಯ ಗುಣವಿರುವ ಶುಂಠಿಯನ್ನು ಬಳಸಿ ತಯಾರಿಸುವ ತಂಬುಳಿ ಮಾಡುವ ವಿಧಾನ…!!

0
938

‘ಭೋಜನೆ ತಂಬುಳೀಂ ಚೈವ, ಶಯನೆ ಕಂಬಳಿ ಪ್ರಿಯಂ’ ಎಂದು ಸುಭಾಷಿತ ಹೇಳುತ್ತದೆ. ಅಂದರೆ ಊಟಕ್ಕೆ ತಂಬುಳಿ ಇರಬೇಕು, ಹೊದ್ಧು ಮಲಗಲು ಕಂಬಳಿ ಇರಬೇಕು ಎಂದು ಹೇಳುವ ಮೂಲಕ ತಂಬುಳಿಯ ಮಹತ್ವವನ್ನು ಹೇಳಿದ್ದಾರೆ ತಂಬ್ಳಿ ನೈಸರ್ಗಿಕವಾಗಿದ್ದು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ತಂಬ್ಳಿ ಜೊತೆ ಹಾಕುವ ಜೀರಿಗೆ, ಸಾಸುವೆ, ಮೆಣಸು ಜೀರ್ಣಕ್ರಿಯೆಯಲ್ಲಿ ಸಹಾಯಕವಾಗಿದೆ. ಶುಂಠಿ ತಂಬುಳಿ ತಯಾರಿಸುವ ವಿಧಾನ ತಿಳಿಯೋಣ ಬನ್ನಿ.

Also read: ಅನೇಕ ರೋಗಗಳಿಗೆ ಏಕೈಕ ರಾಮಬಾಣ ಈ ಅತ್ತಿ ತಂಬುಳಿ..!!

ಸಾಮಗ್ರಿಗಳು

Also read: ಆರೋಗ್ಯಕ್ಕೆ ತರೇಹವಾರಿ ತಂಬುಳಿಗಳು

  • ಶುಂಠಿ
  • ತೆಂಗಿನ ತುರಿ 1/4 ಕಪ್
  • ಮೊಸರು 2 ಕಪ್
  • ಎಣ್ಣೆ ಅಥವಾ ತುಪ್ಪ ಒಂದು ಸ್ಪೂನ್
  • ಸಾಸಿವೆ ಸ್ವಲ್ಪ
  • ಇಂಗು ಚಿಟಿಕೆ
  • ಒಣಮೆಣಸಿನ ಕಾಯಿ ೨ (ಹಸಿಮೆಣಸಿನಕಾಯಿಯನ್ನು ಸಹ ಉಪಯೋಗಿಸಬಹುದು)
  • ಕರಿಬೇವು ಸ್ವಲ್ಪ
  • ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ ತೆಂಗಿನ ತುರಿ ಹಾಗೂ ಶುಂಠಿಯನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ.

ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ, ಇಂಗು, ಒಣಮೆಣಸಿನ ಕಾಯಿ, ಕರಿಬೇವು ಸೇರಿಸಿ ಹುರಿಯಿರಿ.

ನಂತರ ರುಬ್ಬಿದ ಮಿಶ್ರಣ, ನೀರು, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ, ತಣ್ಣಗಾದ ನಂತರ ಗಟ್ಟಿ ಮೊಸರಿಗೆ ಸೇರಿಸಿ.