ಗಿರೀಶ್ ಕಾರ್ನಾಡ್ ಅವರ ಸಾವನ್ನು ಸಂಭ್ರಮಿಸಿದ ವಿರೋಧಿಗಳು; ಹಿರಿಯ ಸಾಹಿತಿಗಳ ಬಗ್ಗೆ ತೋರಿತ್ತಿರುವ ವಿಕೃತ ವರ್ತನೆಗೆ ಬಾರಿ ವಿರೋಧ…

0
517

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಸಾವಿನ ಸುದ್ದಿ ಇಡಿ ದೇಶದಲ್ಲಿ ದುಃಖ ತಂದಿದ್ದು. ಅವರ ಅಭಿಮಾನಿ ವರ್ಗ ಹಾಗೂ ಬಂಧುಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ, ಅದರಂತೆ ಪ್ರಧಾನಿ ಮೋದಿಯವರು ಕೂಡ ಸಂತಾಪ ಸೂಚಿಸಿ ಟ್ವೀಟ್ ಮಾಡಿ. ಎಲ್ಲಾ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗಿರೀಶ್ ಕಾರ್ನಾಡ್ ಅವರನ್ನು ಅವರ ಬಹುಮುಖಿ ಪ್ರತಿಭೆಯ ಖಾರಣ ಸ್ಮರಿಸಿಕೊಳ್ಳುತ್ತೇನೆ. ಅಂದು ಸಂತಾಪ ತಿಳಿಸಿದರೆ ಇನ್ನೂ ಕೆಲವು ಕಾರ್ನಾಡ್ ಅವರ ವಿರೋಧಿಗಳಿಂದ ಟೀಕೆಗಳು ಕೇಳಿಬಂದಿವೆ.

ಹೌದು ಕನ್ನಡದ ಖ್ಯಾತ ಸಾಹಿತಿ, ನಾಟಕಕಾರ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡ್​ ಇಂದು ದೈವಾದೀನರಾಗಿದ್ದಾರೆ. ಆದರೆ, ಯು.ಆರ್. ಅನಂತಮೂರ್ತಿ ಸಾವನ್ನಪ್ಪಿದಾಗ ಪಠಾಕಿ ಸಿಡಿಸಿ ಸಂಭ್ರಮಿಸಿದ ಅದೇ ಮನಸ್ಥಿತಿಗಳು ಇಂದು ಗಿರೀಶ್ ಕಾರ್ನಾಡ್ ಅವರ ಸಾವನ್ನೂ ಸಂಭ್ರಮಿಸುತ್ತಿವೆ. ಇಂತಹ ಹೀನ ಕೃತ್ಯಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸಂತಸವನ್ನು ಹಂಚಿಕೊಳ್ಳುತ್ತಿರುವ ವಿರೋಧಿಗಳು ಸಾವಿನಲ್ಲೂ ಈ ತರಹದ ವರ್ತನೆ ತೋರುವುದು ಅವರ ಗೌರಕ್ಕೆ ದಕ್ಕೆ ತರುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ವಿರೋಧಿಗಳ ಸಂಭ್ರಮ?

ಈ ಹಿಂದೆ ಅನಂತಮೂರ್ತಿಯವರು ನಿಧನರಾಗಿದ್ದಾಗ ಸಾವನ್ನು ಸಂಭ್ರಮಿಸಿದ ಅದೇ ಜನ ಇಂದು ಗಿರೀಶ್ ಕಾರ್ನಾಡ್ ಅವರ ಸಾವನ್ನೂ ಸಂಭ್ರಮಿಸುತ್ತಿದ್ದಾರೆ. ಇಂತಹ ಜನರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕೂಗು ಮತ್ತೆ ಕೇಳಿ ಬರುತ್ತಿದೆ. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಆಡಳಿತರೂಢ ಸರ್ಕಾರ ಸಾವನ್ನು ಸಂಭ್ರಮಿಸುವ ಇಂತಹ ಜನರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇದು ರಾಜ್ಯದ ಗೌರವಕ್ಕೆ ದಕ್ಕೆ ತರುವಂತಹದು ಎನ್ನುವ ಮಾತುಗಳು ಕೇಳಿಬರುತ್ತಿವೆ. ವ್ಯಕ್ತಿ ಯಾರೇ ಆಗಿರಲಿ ಅವರ ಸಾವನ್ನು ಸಂಭ್ರಮಿಸುವುದು ಪೈಶಾಚಿಕ ಮನಸ್ಥಿತಿ. ಆದರೆ, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಅಂತಹ ಮನಸ್ಥಿತಿಗಳೇ ತಾಂಡವವಾಡುತ್ತಿವೆ. ಕೆಲವರು ಕಾರ್ನಾಡ್ ಸಾವನ್ನಪ್ಪಿರುವುದು ಒಳ್ಳೆಯ ಸುದ್ದಿ ಎಂದರೆ, ಮತ್ತೆ ಕೆಲವರು ಅವರ ವಿರುದ್ಧ ಅಸಂಬದ್ಧ ಹಾಗೂ ಅವಾಚ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಕಾರ್ನಾಡ್ ಅವರನ್ನು ಟೀಕಿಸಿದ್ದಾರೆ.

ಅದರಂತೆ ಕೆಲವರು ಮರಳಿ ಹುಟ್ಟಿ ಬನ್ನಿ ನಮ್ಮ ದೇಶದಲ್ಲಿ ಅಂತು ಅಲ್ಲಾ ಪಾಕಿಸ್ತಾನದಲ್ಲಿ ಓಂ ಶಾಂತಿ, ಇನ್ನೂ ಕೆಲವರು ಇವನ ಆತ್ಮಕೆ ಶಾಂತಿ ಸಿಗಬಾರದು ಎಂದು ದೇವರಲ್ಲಿ ಪ್ರಾಥನೇ ಎಂದು ಬರೆದುಕೊಂಡಿದ್ದಾರೆ. ಇನ್ನು ಹಲವು ವಿರೋಧಿಗಳು, ಭಾರತ ದೇಶದ ದೊಡ್ಡ ಪೀಡೆ ತೋಲಗಿರುವುದಕ್ಕೆ ಖುಷಿಯಾಗಿದೆ ಖುಷಿಯಾಗಿದೆ ಎಂದು ಬರೆದರೆ, ಹುಟ್ಟಿ, ಬೆಳಸಿ, ಆಶ್ರಯ ಕೊಟ್ಟ ದೇಶವನ್ನು ಪ್ರೀತಿಸದವನ ಬಗ್ಗೆ ನಾನೇನು ಹೇಳಲಿ, ಎಂದರೆ ಈ ಸಾವು ಸಂತೋಷ ಎಂದು ಹಲವರು ಕೇಳಿದ್ದಾರೆ. ಇಂತಹ ಅನಿಷ್ಟ ಪದ್ದತಿಗಳನ್ನು ಬೆಳೆಸಿಕೊಂಡು ಬರುತ್ತಿರುವ ವಿರೋಧಿಗಳಿಗೆ ಈ ಘಟನೆಯೇ ಕೊನೆಯಾಗಬೇಕು ಎನ್ನುವುದು ಗಿರೀಶ್ ಕಾರ್ನಾಡ್ ಅಭಿಮಾನಿಗಳ ಹಾಗೂ ಸಾಹಿತಿಗಳ ಅಭಿಪ್ರಾಯವಾಗಿದೆ.

Also read: ಕಾನೂರು ಹೆಗ್ಗಡತಿಯ ಒಡೆಯ ಇನ್ನಿಲ್ಲ; ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ವಿಧಿವಶ..