ನನ್ನ ಹುಡುಗಿಯ ನಂಬರ್ ನನ್ನ ಗೆಳೆಯನಿಗೆ ಕೊಟ್ಟಾಗ…!

0
1795

ರಮೇಶ ಮತ್ತು ಕವಿತಾ ಮುದ್ದು ಪ್ರೇಮಿಗಳು ಹಕ್ಕಿಯ ಹಾಗೆ ಪ್ರೀತಿಯ ರೆಕ್ಕೆ ಕಟ್ಟಿಕೊಂಡು ತಮ್ಮ ಪ್ರೀತಿಯ ಬಾನಿನಲ್ಲಿ ತೇಲುತ್ತ. ಖುಷಿ ಖುಷಿಯಾಗಿ ಪ್ರಣಯ ಪೇಮಿಗಳು ಲವ್ ಮಾಡತೀರುತ್ತಾರೆ.

Image result for love

ರಮೇಶನಿಗೆ ರಂಗ ಅನ್ನುವ ಒಬ್ಬ ಆತ್ಮೀಯ ಗೆಳಯ. ರಂಗ ರಮೇಶ ಯಾವಾಗಲು ತುಂಬ ಆತ್ಮೀಯತೆಯಿಂದ ಇದ್ದ ಗೆಳೆಯರು.
ರಮೇಶ ತನ್ನ ಕವಿತಾನ ಹೇಗೆ ಹಚ್ಚಿಕೊಂಡಿದ್ದನೋ ಹಾಗೆಯೆ ತನ್ನ ಗೆಳೆಯ ರಂಗನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುವ ಮನಸು ರಮೇಶನದ್ದು.

ಆದರೆ ಒಂದು ವಿಚಾರ ತುಂಬ ಮುಖ್ಯ ಏನು ಅಂದ್ರೆ ರಮೇಶನ ಹುಡುಗಿ ಕವಿತಾಗಳಿಗೂ ಮತ್ತು ರಂಗನಿಗೂ ಯಾವುದೇ ಪರಿಚಯ ಸ್ನೇಹ ಸಂಬಂಧಗಳು ಇರುವುದಿಲ್ಲ.

ರಮೇಶ ಮತ್ತು ಕವಿತಾ ಲವ್ ಸ್ಟೋರಿ ದಿನ ದಿನ ಹೆಚ್ಚಾಗುತ್ತದೆ ಹೀಗೆ ಒಂದು ದಿನ ರಮೇಶ ಮತ್ತು ಕವಿತಾಳ ಮದ್ಯೆ ಸಣ್ಣದೊಂದು ವಿಚಾರಕ್ಕೆ ದೊಡ್ಡ ಜಗಳವಾಗಿ ತಮ್ಮ ಸಂಬಂಧವನ್ನು ಕಳೆದುಕೊಳ್ಳುತ್ತಾರೆ.

ದಿನ ಕಳೆದಂತೆ ರಮೇಶ ತನ್ನ ಪ್ರೀತಿಯನ್ನು ಮರೆತು ಬಿಡುತ್ತಾನೆ ಅತ್ತ ಕವಿತನು ಸಹ ಒಂದು ಲೆಕ್ಕದಲ್ಲಿ ಪ್ರೀತಿಯನ್ನು ಮರೆತು ಸುಮ್ಮನಾಗಿರುತ್ತಾಳೆ.

ಆದರೆ ಹುಡುಗರು ಮನಸು ಸುಮ್ನೆ ಇರಲ್ಲ ಅನ್ಸುತ್ತೆ .ಯಾಕೆ ಅಂದ್ರೆ ರಮೇಶ ತನ್ನ ಪ್ರೀತಿಯ ವಿಚಾರವನ್ನು ತನ್ನ ಗೆಳೆಯ ರಮೇಶನಿಗೆ ಒಂದು ದಿನ ಹೇಳಿ. ಮಗ ನಮ್ಮ ಹುಡುಗಿ ಕಣೋ ಆದರೆ ಇವಾಗ ನಾವು ಲವ್ ಮಾಡುತ್ತಿಲ್ಲ ಆದರೂ ಅವಳು ಏನ್ ಮಾಡ್ತಿದಾಳೆ ಹೇಗಿದಾಳೆ.ಸುಮ್ನೆ ತಿಳ್ಕೊಬೇಕು ಕಣೋ ನೀನು ಒಂದು ಹೆಲ್ಪ್ ಮಾಡ್ತಿಯಾ ಅಂತ ಕೇಳ್ತಾನೆ ಆಗ ರಂಗನು ಗೆಳೆಯನಿಗೋಸ್ಕರ ಸರಿ ಮಗ ಅಂತಾನೆ.

ರಮೇಶ ರಂಗನಿಗೆ ನಂಬರ್ ಕೊಟ್ಟು ಮಗ ಇದು ಅವಳ ನಂಬರ್ ಇದುಕ್ಕೆ ಕಾಲ್ ಮಾಡಿ ವಿಚಾರಿಸಿ ನಂಗೆ ಹೇಳು ಮಗ ಅಂತಾನೆ.
ರಂಗ ಸರಿ ಮಗ ಅಂತ ಆ ನಂಬರ್ ಗೆ ಕಾಲ್ ಮಾಡಿ ಹೇಗೋ ಪರಿಚಯ ಮಾಡಿಕೊಂಡು. ಅವಳಿಗೆ ಹತ್ತಿರವಾಗಿ ಅವಳ ಬಗ್ಗೆ ತನ್ನ ಗೆಳೆಯನಿಗೆ ಹೇಳ್ತಾನೆ.

ಹೀಗೆ ದಿನ ಕಳೆದಂತೆ ರಂಗ ಕವಿತಾ ತುಂಬ ಆತ್ಮೀಯ ಸ್ನೇಹಿತರಾಗಿ ಮುಂದುವರಿಯುತ್ತಾರೆ. ಆದರೆ ಇದು ರಮೇಶನಿಗೆ ತಿಳಿಯುದಿಲ್ಲ ರಮೇಶನೂ ಅವಳ ನಂಬರ್ ಗೆ ಅವಾಗ ಅವಾಗ ಕಾಲ್ ಮಾಡುತ್ತಿರುತ್ತಾನೆ. ಇದರಿಂದ ಬೇಸರಗೊಂಡ ಕವಿತಾ ಹಳೆಯ ಸಿಮ್ ಬಿಸಾಕಿ ಹೊಸ ಸಿಮ್ಮ್ ತೆಗೆದುಕೊಳ್ಳುತ್ತಾಳೆ.

ಆದರೆ ಹೊಸ ನಂಬರ್ ನ ರಮೇಶನಿಗೆ ಕೊಡುವುದಿಲ್ಲ ಆದ್ರೆ ರಂಗನಿಗೆ ಕೊಡುತ್ತಾಳೆ. ರಂಗನಿಗೆ ಕೊಟ್ಟು ಈ ನಂಬರ್ ನ ನಿನ್ನ ಗೆಳೆಯ ರಮೇಶನಿಗೆ ಕೊಡಬೇಡ ಅಂತ ಹೇಳ್ತಾಳೆ. ಈ ಗ್ಯಾಪ್ ನಲ್ಲಿ ರಂಗ ಮತ್ತು ಕವಿತಾಳಿಗೆ ಲವ್ ಹಾಗಿರುತ್ತೆ. ಮತ್ತೆ ರಂಗ ಮತ್ತು ಕವಿತಾ ತುಂಬ ಲವ್ ಮಾಡುತ್ತಿರುತ್ತಾರೆ.

Image result for love

ಒಂದು ದಿನ ರಮೇಶ ನಮ್ಮ ಕವಿತಾ ನಂಬರ್ ಯಾಕೋ ಕಾಲ್ ಹೋಗ್ತಿಲ್ಲ ಕಣೋ ಹೊಸ ನಂಬರ್ ತಗೊಂಡಿರಬೇಕು ಅನ್ಸುತ್ತೆ ನಿಂಗೆ ಕೊಟ್ಟಿದ್ರೆ ಕೊಡು ಮಗ ನಂಗೆ ಕವಿತಾನ ನೋಡ್ಬೇಕು, ಮಾತಾಡ್ಸಬೇಕು ಅನ್ನಿಸ್ತಿದೆ. ಕವಿತಾನ ಮರೆಯೋಕೆ ಆಗ್ತಿಲ್ಲ ಕಣೋ ಗೆಳೆಯ ಅಂತಾನೆ.
ಆದರೆ ರಂಗನಿಗೂ ಮತ್ತು ಕವಿತಾಗೆ ಲವ್ ಆಗಿರುತ್ತೆ ಈ ವಿಚಾರ ಗೆಳೆಯ ರಮೇಶ್ ಗೆ ಗೊತ್ತಿರಲ್ಲ. ನಂಬರ್ ಕೇಳಿದ ಗೆಳೆಯನಿಗೆ ರಂಗ ಕೊಟ್ಟ ಉತ್ತರ ಮಗ ನಾನು ಕವಿತಾ ಮಾತಾಡಿ ತುಂಬ ದಿನ ಆಗಿದೆ ಅವಳು ಬಗ್ಗೆ ನನ್ನ ಹತ್ತಿರ ಕೇಳ್ಬೇಡ ಮಗ ಅಂತಾನೆ.

ಎಂತಹ ಗೆಳೆಯ ಎಂತಹ ಪ್ರೇಯಸಿ ಜೀವನ ಇಷ್ಟೇ ಕಣ್ರೀ ಯಾರಿಗೆ ಯಾರು ಆಗಲ್ಲ…..