ಹೇರ್ ಫಾಲ್ ಸಮಸ್ಯೆಗೆ ಔಷಧಿ ತೆಗೆದುಕೊಳ್ಳುವ ಮುನ್ನ ಎಚ್ಚರ; ಸ್ವಲ್ಪ ಹೆಚ್ಚು ಕಡಿಮೆಯಾದರೆ ಪ್ರಾಣಕ್ಕೆ ಕುತ್ತು, ಯಾಕೆ ಅಂತ ಈ ಮಾಹಿತಿ ನೋಡಿ.!

0
171

ಹದಿಹರೆಯರಲ್ಲಿ ಸಾಮನ್ಯವಾಗಿ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ. ಅದಕ್ಕಾಗಿ ಹಲವು ಮಾತ್ರೆ ಔಷಧಿಗಳನ್ನು ತೆಗೆದುಕೊಳ್ಳುವುದು ಒಂದು ಟ್ರೆಂಡ್ ಆಗಿದೆ. ಇದನ್ನೇ ಬ್ಯುಸಿನೆಸ್ ಎಂದುಕೊಂಡ ಹಲವು ಕಂಪನಿಗಳು ಸಾವಿರಾರು ಕೋಟಿಗಳಲ್ಲಿ ಹಣ ಗಳಿಸುತ್ತಿವೆ. ಆದರೆ ಔಷಧಿ ಪಡೆದ ಜನರು ಮಾತ್ರ ಯಾವುದೇ ಲಾಭವಿಲ್ಲದೆ ಹಣದ ಜೊತೆಗೆ ಇರುವ ಕೂದಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹದೆ ಒಂದು ಘಟನೆ ಯುವತಿಯೊಬ್ಬರು ಹೇರ್ ಫಾಲ್ ಆಗೋದನ್ನು ತಡೆಯಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.

Also read: ಹಾಲು ಕುಡಿಯುವ ಮುನ್ನ ಎಚ್ಚರ; ಶಾಂಪೂ, ಯೂರಿಯಾದಿಂದ ಹಾಲು ತಯಾರಿಸಿ ಕೋಟ್ಯಾಧಿಪತಿಗಳಾದ 10 ಡೈರಿ ಮಾಲೀಕರ ಜಾಲ ಪತ್ತೆ!!

ಹೌದು ಹೇರ್ ಫಾಲ್ ತಡೆಯಲು ತೆಗೆದುಕೊಂಡ ಔಷಧಿ ಯುವತಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಎಮ್ಮಿಗನೂರಿನಲ್ಲಿ ನಡೆದಿದೆ. 19 ವರ್ಷದ ಮೌನಿಕ ಮೃತ ದುರ್ದೈವಿ ಯುವತಿಯಾಗಿದ್ದು. ಎಮ್ಮಿನಗನೂರಿನ ಹರಿಜನವಾಡ ನಿವಾಸಿಗಳಾದ ಕದ್ರಿಕೋಟ ನರ್ಸನ್ನ ಹಾಗೂ ರಾಮೇಶ್ವರಮ್ಮ ದಂಪತಿಯ ಪುತ್ರಿಯಾಗಿದ್ದಾಳೆ. ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆ ತಲೆಯ ಕೂದಲು ಉದುರುವಿಕೆಯಿಂದ ಬೇಸತ್ತು ಔಷಧಿ ಪಡೆದುಕೊಂಡಿದ್ದಾಳೆ. ಆದರೆ ಆ ಔಷಧಿಯೇ ಆಕೆಯ ಪ್ರಾಣವನ್ನೇ ಬಲಿ ಪಡೆದುಕೊಂಡಿದೆ.

ಯುವತಿಗೆ ಎಲ್ಲರಂತೆ ತನಗೂ ಉದ್ದ ಕೂದಲು ಬೆಳೆಯಬೇಕು ಎಂದು ಆಸೆ ಪಟ್ಟಿದಳು, ಆದರೆ ದಿನ ಹೋದಂತೆ ಆಕೆಯ ಕೂದಲು ಸಾಕಷ್ಟು ಉದುರುತ್ತಿತ್ತು. ಹೀಗಾಗಿ ಆಕೆ ನೊಂದಿದ್ದಳು. ಅಲ್ಲದೆ ಹೇಗಾದರೂ ಮಾಡಿ ಕೂದಲು ಉದೋರನ್ನು ನಿಲ್ಲಿಸಿ, ಅದನ್ನು ಮತ್ತೆ ಬೆಳೆಯುವಂತೆ ಮಾಡಬೇಕೆಂದು ನಿರ್ಧರಿಸಿ ಚಿಕಿತ್ಸೆಯ ಮೊರೆ ಹೋಗಿದ್ದಾಳೆ. ಅದರಂತೆ ಸಮೀಪದ ವೈದ್ಯರೊಬ್ಬರನ್ನು ಸಂಪರ್ಕಿಸಿದ್ದಾಳೆ. ಹಾಗೆಯೇ ಕೂದಲು ಉದುರುವಿಕೆಯನ್ನು ತಡೆಯುತ್ತದೆ ಎಂದು ಡಾಕ್ಟರ್ ಔಷಧಿಯನ್ನೂ ನೀಡಿದ್ದಾರೆ. ಇದನ್ನು ತೆಗೆದುಕೊಂಡ ಬಳಿಕ ಮೌನಿಕಾ ದೇಹದಲ್ಲಿ ಗುಳ್ಳೆಗಳು ಬೀಳಲು ಆರಂಭವಾಗಿದೆ. ಇದರಿಂದ ಆತಂಕಗೊಂಡ ಆಕೆ ಕೂಡಲೇ ಔಷಧಿ ಬರೆದುಕೊಟ್ಟ ಡಾಕ್ಟರ್ ಹಾಗೂ ಮೆಡಿಕಲ್ ಅಂಗಡಿಯ ಮಾಲೀಕನ ಗಮನಕ್ಕೆ ತಂದಿದ್ದಾಳೆ. ಈ ವೇಳೆ ಮಡಿಕಲ್ ಮಾಲೀಕ, ಅದರಿಂದ ಯಾವುದೇ ತೊಂದರೆ ಆಗಲ್ಲ. ಸ್ವಲ್ಪ ಸಮಯ ಈ ರೀತಿ ಆಗುತ್ತದೆ. ಆ ನಂತರ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಿದ್ದಾರೆ.

Also read: ಭಾರತದಲ್ಲಿ ತಯಾರಾಗುವ ವಿವಿಧ ಬ್ರಾಂಡ್ ಉಪ್ಪುಗಳು ಕ್ಯಾನ್ಸರ್ ಕಾರಕವಂತೆ; ಅಮೆರಿಕಾದ ಲ್ಯಾಬ್-ನಿಂದ ಪತ್ತೆಯಾಯಿತು ಆಘಾತಕಾರಿ ಸುದ್ದಿ!!

ಮಗಳ ಮೈಯನ್ನು ನೋಡಿ ಮೌನಿಕ ಪೋಷಕರು 3 ದಿನಗಳಿಂದ ನಿರಂತರವಾಗಿ ಮೆಡಿಕಲ್ ಗೆ ಬಂದು ಆಕೆಯ ಮೈಮೇಲೆ ಗುಳ್ಳೆಗಳು ಬೀಳೋದು ಕಡಿಮೆಯಾಗುವಂತೆ ಔಷಧಿ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಮೆಡಿಕಲ್ ಅವರು ಅವರ ಮನವಿಯನ್ನು ತಿರಸ್ಕರಿಸುವ ಮೂಲಕ ಅಸಡ್ಡೆ ತೋರಿದ್ದಾರೆ. ಇದರಿಂದ ಯುವತಿಯ ಮೈಮೇಲೆ ಗುಳ್ಳೆಗಳು ಹೆಚ್ಚಾಗುತ್ತಾ ಹೋಗಿವೆ. ಯುವತಿಯ ನರಳಾಟ ಹೆಚ್ಚಾಗಿ ಕಳೆದ ಭಾನುವಾರ ಮೌನಿಕ ಸ್ಥಿತಿ ಚಿಂತಾಜನವಾಗಿ ಆಕೆ ಮೃತಪಟ್ಟಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಮೌನಿಕ ಪೋಷಕರು ಹಾಗೂ ಆಕೆಯ ಸಂಬಂಧಿಕರು ಮೆಡಿಕಲ್ ಶಾಪ್ ಎದುರು ಪ್ರತಿಭಟನೆ ನಡೆಸಿದ್ದಾರೆ. ಮೆಡಿಕಲ್ ಬಂದ್ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ವೈದ್ಯ ಹಾಗೂ ಮೆಡಿಕಲ್ ಶಾಪ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಅದಕ್ಕಾಗಿ ಯಾವುದೇ ಔಷಧಿಗಳನ್ನು ಪಡೆಯವ ಮುನ್ನ ಸರಿಯಾರಿ ಪರೀಕ್ಷಿಸಿ ಉಪಯೋಗಿಸುವುದು ಒಳ್ಳೆಯದು.