ಪ್ರೀತಿಸಿ ಕೈಕೊಡಲು ಯತ್ನಿಸಿದ ಯುವಕನ ಮುಖಕ್ಕೆ ಪ್ರಿಯತಮೆಯಿಂದಲೇ ಆ್ಯಸಿಡ್ ದಾಳಿ..

0
335

ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ಸಾಕಾದ ನಂತರ ಪ್ರಿಯತಮೆಯನ್ನು ದೂರ ಮಾಡಲು ಹೋಗಿ, ಪ್ರಿಯತಮೆಯಿಂದಲೇ ಆ್ಯಸಿಡ್ ದಾಳಿಗೆ ಒಳಗಾದ ಯುವಕ, ಮುಖ ಸುಟ್ಟುಕೊಂಡಿದ್ದು, ಯುವತಿಯ ಕೈ ಎಲ್ಲ ಸುಟ್ಟ ಘಟನೆ ದೇಶವನ್ನು ಬೆಚ್ಚಿಬಿಳಿಸಿದೆ. ಈ ಘಟನೆಯಲ್ಲಿ ಮುಖ್ಯ ಪಾತ್ರದಾರಿಯಾದ ಯುವತಿ ತನ್ನ ಪ್ರಿಯಕರನ ಬೈಕಿನಲ್ಲಿ ಹಿಂಬದಿ ಕುಳಿತು ಸಾಗುತ್ತಿದ್ದ ವೇಳೆ ಆತನನ್ನು ಸರಿಯಾಗಿ ಮುಟ್ಟಲು ಆಗುತ್ತಿಲ್ಲ ಎಂಬ ನೆಪ ಹೇಳಿ ಹೆಲ್ಮೆಟ್ ತೆಗೆಯಲು ಹೇಳಿ ನಂತರ ಈ ಕೃತ್ಯ ನಡೆಸಿರುವುದು ನವದೆಹಲಿಯಲ್ಲಿ ಬೆಳಕಿಗೆ ಬಂದಿದೆ.

Also read: 75 ವರ್ಷಗಳ ಬಳಿಕ ಒಂದಾದ ಪ್ರೇಮಿಗಳು; ಅಮರ ಪ್ರೀತಿಗೆ ಸಾಕ್ಷಿಯಾದ ಪ್ರೀತಿ ಇದೇನಾ?, ಈ ಕಥೆ ಓದಿ ನೋಡಿ ಕಳೆದ ನಿಮ್ಮ ಪ್ರೀತಿವೂ ಹೀಗೆಯೇ ಸಿಗಬಹುದು..

ಆಸಿಡ್ ದಾಳಿ ಮಾಡಿದ ಕಲಿಯುಗದ ಕನ್ಯೆ?

ಹೌದು ಇಷ್ಟು ದಿನ ಪ್ರೀತಿ ನಿರಾಕರಿಸಿದ ಯುವತಿಯರ ಮೇಲೆ, ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ನಡೆಯುತಿತ್ತು, ಆದರೆ ಈಗ ಕಲಿಯುಗದ ಕನ್ಯೆಯರು ಬದಲಾಗಿದ್ದು, ಮಹಿಳೆಯರಿಂದ ಯುವಕರ ಮೇಲೆ ದಾಳಿ ನಡೆಯುತ್ತಿರುವುದು ಆಶ್ಚರ್ಯ ಕೆರಳಿಸಿದೆ. ಅಷ್ಟಕ್ಕೂ ಈ ಕೃತ್ಯ ವೆಸಗಳು ಕಾರಣವೇನು? ಎನ್ನುವುದರ ಬಗ್ಗೆ ಪ್ರೇಮಿಗಳು ಕಾರಣ ತಿಳಿಸಿದ್ದಾರೆ.

ಏನಿದು ಘಟನೆ?

ನವದೆಹಲಿಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರೀತಿಸಿ ದೈಹಿಕ ಸಂಬಂಧ ಹೊಂದಿದ್ದರು. ಆದರೆ ಆ ಯುವಕ ತಾನು ಮದುವೆ ಆಗುವುದಿಲ್ಲ. ನನ್ನನ್ನು ಬಿಟ್ಟು ಬಿಡು ಎಂದು ಹೇಳಿದ್ದಾನೆ. ಆದರೆ ಇದರಿಂದ ರೊಚ್ಚಿಗೆದ್ದ ಯುವತಿ ಆತನ ಮುಖಕ್ಕೆ ಆ್ಯಸಿಡ್ ದಾಳಿ ನಡೆಸಿದ್ದಾಳೆ” ಎಂದು ಉಪ ಪೊಲೀಸ್ ಆಯುಕ್ತರಾದ ಮೋನಿಕಾ ಭಾರದ್ವಾಜ್ ಹೇಳಿದ್ದಾರೆ. ಜೂನ್ 11ರಂದು ಇಬ್ಬರೂ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಯಾರೋ ಆ್ಯಸಿಡ್ ದಾಳಿ ನಡೆಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾಳಿಯಲ್ಲಿ ಸ್ಕೂಟಿ ಓಡಿಸುತ್ತಿದ್ದ ಯುವಕನ ಮುಖ ಸಂಪೂರ್ಣವಾಗಿ ಸುಟ್ಟಿದ್ದು, ಯುವತಿಯ ಕೈ ಮೇಲೆ ಸ್ವಲ್ಪ ಗಾಯಗಳಾಗಿದ್ದವು.

Also read: ವಿಚಿತ್ರ ಪ್ರೇಮ ಕತೆ; ಮದುವೆಯಾದ ಒಂದೇ ವಾರದಲ್ಲಿ ಮದುವೆ ಮಾಡಿಸಿದ ಪುರೋಹಿತನ ಜೊತೆಯಲ್ಲೇ ನವವಿವಾಹಿತೆ ಪರಾರಿ..

ಈ ಬಗ್ಗೆ ಇಬ್ಬರಲ್ಲೂ ವಿಚಾರಿಸಿದಾಗ ಇಬ್ಬರೂ ಬೈಕ್ ನಲ್ಲಿ ಬರುತ್ತಿದ್ದಾಗ ಯಾರೋ ಈ ರೀತಿ ಕೃತ್ಯ ಎಸಗಿದ್ದಾರೆ ಎಂದಿದ್ದಾರೆ . ಆದರೆ , ಆ್ಯಸಿಡ್ ದಾಳಿ ನಡೆಸಿದವರು ಯಾರು ಎಂಬುದು ಪತ್ತೆಯಾಗಲಿಲ್ಲ. ಎರಡು ಮೂರು ದಿನಗಳು ಕಳೆದರೂ ಪೊಲೀಸರಿಗೆ ಆರೋಪಿಯ ಬಗ್ಗೆ ಸುಳಿವೇ ಸಿಗಲಿಲ್ಲ . ನಂತರ ಪೊಲೀಸರು ಇಬ್ಬರಿಂದಲೂ ಹೇಳಿಕೆಗಳನ್ನು ಪಡೆದುಕೊಂಡರು. ಆದರೂ ಆ್ಯಸಿಡ್ ಎರಚಿದವರು ಯಾರು ಎಂಬುದು ಪತ್ತೆಯಾಗಲಿಲ್ಲ . ಆದರೆ, ಯುವತಿಯ ಕೈಗಳಲ್ಲಿ ಮಾತ್ರ ಆಸಿಡ್‌ನಿಂದಾಗಿ ಗಾಯವಾಗಿತ್ತು. ಇವೆಲ್ಲವನ್ನೂ ಗಮನಿಸಿದ ಪೊಲೀಸರು ಕೂಡಲೆ ತೀವ್ರ ವಿಚಾರಣೆಗೆ ಒಳಪಡಿಸಿದರು. ಯುವಕ ನೀಡಿದ ಹೇಳಿಕೆಯಲ್ಲಿ, ನಾವು ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಅಂದು ಇಬ್ಬರೂ ಬೈಕ್‌ನಲ್ಲಿ ಹೊರಡುವ ಮುನ್ನ ಮದುವೆಯಾಗುವಂತೆ – ಆಕೆ ಕೇಳಿದಳು. ಅದಕ್ಕೆ ನಾನು ಮದುವೆಯ ವಿಚಾರ ಬೇಡ, ನನ್ನನ್ನು ಮರೆತುಬಿಡು, ನಿನ್ನಷ್ಟಕ್ಕೆ ನೀನು ಇದ್ದು ಬಿಡು, ನನ್ನಷ್ಟಕ್ಕೆ ನಾನಿರುತ್ತೇನೆ ಎಂದು ಹೇಳಿದೆ.

ಆಗ ಆಕೆ ಸುಮ್ಮನಾದಳು. ಸ್ವಲ್ಪ ಸಮಯದ ನಂತರ ಇಬ್ಬರೂ ಕೊನೆಯದಾಗಿ ಬೈಕ್ ರೈಡ್ ಹೋಗಲು ತೀರ್ಮಾನಿಸಿದೆವು. ದಾರಿಮಧ್ಯೆ ಆಕೆ ನನ್ನ ಹೆಲ್ಮಟ್ ತೆಗೆಯುವಂತೆ ಹೇಳಿದಳು. ನಾನು ತೆಗೆದೆ, ಸ್ವಲ್ಪ ದೂರ ಹೋಗುತ್ತಿದ್ದಂತೆ ಮುಖಕ್ಕೆ ಏನೋ ಎರಚಿದಂತಾಯಿತು. ಮುಂದೆ ಬೈಕ್ ಓಡಿಸಲಾರದೆ ನಿಲ್ಲಿಸಿದೆ. ಅವಳಿಗೂ ಕೈಗಳಲ್ಲಿ ಗಾಯಗಳಾಗಿದ್ದವು . ನಮ್ಮನ್ನು ನೋಡಿದ | ದಾರಿಹೋಕರೊಬ್ಬರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು ಎಂದು ಹೇಳಿದ . ಕೂಡಲೆ ಆರೋಪಿಯ ಜಾಡು ಹಿಡಿದ ಪೊಲೀಸರು ಯುವತಿಯನ್ನು ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದರು . ಆಗ ಆಕೆ ನಿಜ ಸಂಗತಿ ಬಾಯಿಬಿಟ್ಟಳು. ನನ್ನನ್ನು ಮೂರು ವರ್ಷ ಪ್ರೀತಿಸಿ, ದೈಹಿಕ ಸಂಪರ್ಕವನ್ನೂ ಬೆಳೆಸಿ ಈಗ ನನ್ನಿಂದ ದೂರ ಇರು ಎಂದು ಹೇಳಿದ. ಅದಕ್ಕೆ ಆತನ ಮುಖಕ್ಕೆ ಶೌಚಾಲಯದಲ್ಲಿ ಬಳಸುವ ಆ್ಯಸಿಡ್ ತೆಗೆದು ಎರಚಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾಳೆ.