ಸ್ಪರ್ಧಾತ್ಮಕ ಕಾಲದಲ್ಲಿ 9 ಸರ್ಕಾರಿ ಹುದ್ದೆಗಳನ್ನು ಪಡೆದು ಅವುಗಳನ್ನು ತ್ಯೆಜಿಸಿದ ಯುವತಿ ತನ್ನ ಗುರಿಯತ್ತೆ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾಳೆ..

0
296

ಮನುಷ್ಯನಿಗೆ ಗುರಿ ಎನ್ನುವುದು ಮುಖ್ಯ ಅದರಂತೆ ನಡೆದರೆ ಯಾವುದು ಅಸಾದ್ಯವಿಲ್ಲ ಅನೋದಕ್ಕೆ ಈ ಯುವತಿಯೇ ಸಾಕ್ಷಿ. ಏಕೆಂದರೆ ಇಷ್ಟೊಂದು ಸ್ಪರ್ಧಾತ್ಮಕ ಕಾಲದಲ್ಲಿ ಸಿಕ್ಕ 9 ಸರ್ಕಾರಿ ಹುದ್ದೆಗಳನ್ನು ಬಿಟ್ಟು ಉಪನ್ಯಾಸಕಿಯಾಗಲು ಹೊರಟಿರುವ ಯುವತಿಯ ಸಾಧನೆ ಮೆಚ್ಚುವುದೇ. ಈ ಕಾಲದಲ್ಲಿ ಒಂದು ಸರ್ಕಾರಿ ಕೆಲಸ ಸಿಕ್ಕರೆ ಸಾಕು ಜೀವನ ಪೂರ್ತಿ ಸುಖವಾಗಿರಬಹುದು ಎನ್ನುವರು ಬಹಳಷ್ಟು ಜನರಿದ್ದಾರೆ. ಆದರೆ ಗುರಿ ಇಟ್ಟುಕೊಂಡ ಹುದ್ದೆ ಪಡೆದೆ ತೀರುತ್ತೇನೆ ಎನ್ನುವ ಜನರು ಬೆರೆಳೆಣಿಕೆಯಷ್ಟಿದ್ದಾರೆ. ಅವರ ಸಾಲಿನಲ್ಲಿ ಬರುವ ಯುವತಿಯೇ ಈ ದ್ರಾಕ್ಷಾಯಣಿ.

ಯಾರು ಈ ದ್ರಾಕ್ಷಾಯಿಣಿ?

Also read: ಗಂಡು ಮಗು ಬೇಕು ಅಂತ ಹೆಣ್ಣು ಮಗು ದ್ವೇಷಿಸುವ ಸಮಾಜಕ್ಕೆ ಮಾದರಿಯಾದ ಕತೆ; ಹೆಣ್ಮಗು ಆಯ್ತು ಅಂತಾ ಕೋಟಿ ವೆಚ್ಚದ ಗುಡಿ ಕಟ್ಟಿದ ತಂದೆ..

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ದೊರೆಯುವುದೇ ಕಷ್ಟ. ಅಂಥದ್ದರಲ್ಲಿ ಕೊಪ್ಪಳ ಜಿಲ್ಲೆಯ ತಾಲೂಕಿನ ವದಗನಾಳ ಗ್ರಾಮದ ದಾಕ್ಷಾಯಿಣಿ ಹುಚ್ಚನಗೌಡ ಮಾಲೀಪಾಟೀಲ್‌ (27) ಯುವತಿ 9 ಬಾರಿ ಸರ್ಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ. 9 ಬಾರಿಯೂ ನೇಮಕಾತಿಯನ್ನು ತಿರಸ್ಕರಿಸಿರುವ ಗ್ರಾಮೀಣ ಪ್ರತಿಭೆ ಇದೀಗ 10ನೇ ಪ್ರಯತ್ನಕ್ಕೆ ಮುಂದಾಗಿದ್ದಾಳೆ. ಉಪನ್ಯಾಸಕ ಹುದ್ದೆಯೇ ಬೇಕೆಂದು ಪಣತೊಟ್ಟು ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ದೃಢಸಂಕಲ್ಪ ಮಾಡಿಕೊಂಡಿದ್ದಾರೆ.

9 ಸರ್ಕಾರಿ ಹುದ್ದೆಗಳು:

ಪ್ರಾಥಮಿಕ ಶಾಲಾ ಶಿಕ್ಷಕಿ (2019 ಫೆ.1), ಹಾಸ್ಟೆಲ್‌ ಮೇಲ್ವಿಚಾರಕಿ (ಡಿ.15, 2018​), ಮೊರಾರ್ಜಿ ವಸತಿ ಶಾಲೆಯಲ್ಲಿ ಕನ್ನಡ ಶಿಕ್ಷಕಿ (ನ.19 ,2018​), ಸಮಾಜ ವಿಜ್ಞಾನ ಶಿಕ್ಷಕಿ (ನ.19, 2018), ಮೊರಾರ್ಜಿ ವಸತಿ ಶಾಲೆಯಲ್ಲಿ ಹಾಸ್ಟೆಲ್‌ ವಾರ್ಡನ್‌, ನವೋದಯ ಮಾದರಿ ಶಾಲೆಯಲ್ಲಿ ಶಿಕ್ಷಕಿ (ಅ.20, 2018), ರೆಸಿಡೆನ್ಶಿಯಲ್‌ ಶಾಲೆಯಲ್ಲಿ ಶಿಕ್ಷಕಿ (ನ.20, 2018​), ಎಸ್ಸಿ, ಎಸ್ಟಿಹಾಸ್ಟೆಲ್‌ ವಾರ್ಡ್‌ನ (ಡಿ.16, 2018) ಹುದ್ದೆಗೆ ಸರ್ಕಾರ ಆಯ್ಕೆ ಮಾಡಿದೆ. ಆದರೆ ಇದ್ಯಾವುದಕ್ಕೂ ಬೇಡ ಎಂದಿರುವ ಪ್ರತಿಭೆ ದಾಕ್ಷಾಯಿಣಿ. ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದಲ್ಲೇ ಎಂಎ ಬಿಎಡ್‌ ಪದವಿ ಮಾಡಿದ್ದಾರೆ. ದಾಕ್ಷಾಯಿಣಿ ಅವರದ್ದು ಅವಿಭಕ್ತ ಕುಟುಂಬವಾಗಿದ್ದು ಒಂದೇ ಮನೆಯಲ್ಲಿ 18 ಮಂದಿ ವಾಸವಿದ್ದಾರೆ. ಅವರ ಅಪ್ಪ, ಅಮ್ಮ ವ್ಯವಸಾಯ ಮಾಡುತ್ತಿದ್ದು, ಮನೆಯಲ್ಲಿನ ಎಲ್ಲರೂ ದಾಕ್ಷಾಯಿಣಿ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹ ನೀಡಿದ್ದರಿಂದ 3 ಹೈ-ಕ ಕೋಟಾ​ದಡಿ, 5 ಜನ​ರಲ್‌ ಮೆರಿಟ್‌ನಡಿ ಸರ್ಕಾರಿ ಹುದ್ದೆಗೆ ಯುವತಿ ಆಯ್ಕೆಯಾಗಿದ್ದಾಳೆ.

ತಮ್ಮ ಸಾಧನೆ ಬಗ್ಗೆ ದ್ರಾಕ್ಷಾಯಿಣಿ:

Also read: ಹೆಣ್ಣು ಮಕ್ಕಳೇ ಹುಷಾರ್; ಸಹಾಯ ಕೇಳಿ ಅಳುತ್ತ ಬರುವ ಚಿಕ್ಕ ಮಕ್ಕಳಿಗೆ ಸಹಾಯ ಮಾಡಲು ಅವರ ಹಿಂದೆ ಹೋದ್ರೆ ನಿಮ್ಮ ಕತೆ ಅಷ್ಟೇ..

ನಾನು ನನ್ನ ಶಿಕ್ಷಣ ಮುಗಿದ ನಂತರ 2016ರ ಡಿಸೆಂಬರ್‌ನಲ್ಲಿ ಸರ್ಕಾರಿ ನೌಕರಿಗಾಗಿ ಅರ್ಜಿ ಹಾಕುವುದಕ್ಕೆ ಪ್ರಾರಂಭಿಸಿದ್ದೇನೆ. ಅಂದಿನಿಂದ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಸರ್ಕಾರ ಕರೆದ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದೇನೆ. ಪ್ರಾರಂಭದಲ್ಲಿ ಕಂದಾಯ ಇಲಾಖೆಗೆ ಪರೀಕ್ಷೆ ಬರೆದಾಗ ಪಾಸಾಗಲಿಲ್ಲ, ಆನಂತರ ಬೆಸ್ಕಾಂ ಪರೀಕ್ಷೆ ಬರೆದೆ ಅದರಲ್ಲಿ ಸಫಲವಾಗಲಿಲ್ಲ. ತದನಂತರ ಕೊಪ್ಪಳದ ಖಾಸಗಿ ಕೋಚಿಂಗ್‌ ಸೆಂಟರ್‌ ಒಂದರಲ್ಲಿ ಸ್ವಲ್ಪ ದಿನ ತರಬೇತಿ ಪಡೆದು, ಪರೀಕ್ಷೆ ಸಮಯದಲ್ಲಿ ದಿನನಿತ್ಯ ಕಠಿಣ ಪರಿಶ್ರಮ ಪಟ್ಟು ಓದಿದ ಪರಿಣಾಮ 2 ವರ್ಷದಲ್ಲಿ ಬರೊಬ್ಬರಿ 9 ಸರ್ಕಾರಿ ಹುದ್ದೆಗಳು ಅರಸಿ ಬಂದಿವೆ. ಈ ಮೂಲಕ ಹೇಳಬೇಕು ಎಂದರೆ ಮೊದಲಿಗೆ ನಾವು ಏನು ಓದಬೇಕು ಎಂಬ ಐಡಿಯಾ ಇರಬೇಕು, ವಿಷಯಕ್ಕೆ ಸಂಬಂಧಿಸಿದ ಪರ್ಫೆಕ್ಟ್ ಆಗಿರುವ ಅಂಶ ಮನದಟ್ಟು ಮಾಡಿಕೊಳ್ಳಬೇಕು. ಜೀವನದಲ್ಲಿ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ಹೇಳಿದ್ದಾರೆ.

ಈ ಸಾಧನೆಗೆ ಸ್ಪೂರ್ತಿ ಸರ್ಕಾರಿ ಶಾಲೆಯ ಶಿಕ್ಷಣ:

ದ್ರಾಕ್ಷಾಯಿಣಿಯವರು ಹೇಳುವ ಪ್ರಕಾರ, ಸರ್ಕಾರಿ ಶಾಲೆಯಲ್ಲಿ ಕಲಿತಿದ್ದಕ್ಕೆ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಯಿತು. ಕೆಲವರಲ್ಲಿ ಸರ್ಕಾರಿ ಶಾಲೆಯಲ್ಲಿ ಕಲಿತರೆ ಕೆಲಸ ಸಿಗುವುದಿಲ್ಲ ಎಂಬ ಕೀಳರಿಮೆ ಇದೆ. ಅದನ್ನು ಮೊದಲು ತೊಲಗಿಸಬೇಕು. ಸರ್ಕಾರಿ ಶಾಲೆಯಲ್ಲಿಯೂ ಉತ್ತಮ ಶಿಕ್ಷಣ ದೊರೆಯುತ್ತದೆ. ಪ್ರಮುಖವಾಗಿ ಕುಟುಂಬದ, ಸಹಕಾರ ಸ್ನೇಹಿತೆಯರ, ಸಹಕಾರ ವಿದ್ದರೆ ಯಾವುದೇ ಗುರಿ ಮುಟ್ಟಲು ಸಾಧ್ಯವಾಗುತ್ತೆ. ನನ್ನ ಎಲ್ಲ ಸಾಧನೆಗೆ ಸರ್ಕಾರಿ ಶಾಲೆಯ ಶಿಕ್ಷಣ ಎಂದು ಹೆಮ್ಮೆ ಪಡುತ್ತಾರೆ.