ಭಾರತಕ್ಕೆ GMOಬರಲಿದೆ, GMOಎಂದರೇನು?? ಮುಂದೆ ಓದಿ!!!

0
980

ತಳಿ ವಿಜ್ಞಾನ

ತಳಿ ವಿಜ್ಞಾನವೆಂದರೆ- ಜೀವಿಯೊಂದರ ಅನುವಂಶಿಕ ಲಕ್ಷಣಗಳನ್ನು ನಿರ್ಧರಿಸುವ ಜೀನ್‍ಗಳ ಸಮುದಾಯಕ್ಕೆ ಅಪೇಕ್ಷಿತ ಜೀನ್‍ಗಳನ್ನು ಉದ್ದೇಶಪೂರ್ವಕವಾಗಿ ಸೇರಿಸುವುದರ ಮೂಲಕ ಜೀವಿಯ ಅನುವಂಶಿಕತೆಯನ್ನು ಬದಲಾಯಿಸುವುದು. ಆಹಾರ ಬೆಳೆಯುವ ಸಸ್ಯಗಳಿಗೆ ಇತರೆ ಜೀನ್‍ಗಳನ್ನು, ಪ್ರಾಣಿಗಳ ಜೀನನ್ನು ಸಹ ಜೋಡಿಸುವುದರಿಂದ ಆಹಾರ ಜಾಸ್ತಿ ದಿನ ಕೆಡದೆ ಇಡಬಹುದು. ಕೀಟಗಳ ಬಾಧೆಯನ್ನು ತಪ್ಪಿಸುವುದು ಹಾಗೂ ವಾತಾವರಣದ ವೈಪರೀತ್ಯ ವನ್ನು ಎದುರಿಸಬಲ್ಲದೆಂಬುದು ವಿಜ್ಞಾನಿಗಳ ನಂಬಿಕೆ.

ಇದು ಮೇಲು ನೋಟಕ್ಕೆ ಆಶಾದಾಯಕವಾಗಿ ಕಂಡರೂ ಸಹ ಹಾಗೂ ಹೊಸದರಲ್ಲಿ ಇವರ ಎಣಿಕೆಯಂತೆ ಒಳ್ಳೆಯ ಫಲಿತಾಂಶಗಳನ್ನು ಕೊಟ್ಟರೂ ಸಹ ಕೆಲವು ಕಾಲದ ನಂತರ ಅದರ ದುಷ್ಪರಿಣಾಮಗಳು ವಿಜ್ಞಾನಿಗಳ ನಂಬಿಕೆಯನ್ನು ಬುಡಮೇಲು ಮಾಡುತ್ತದೆ. ಇದಕ್ಕೆ ಉದಾಹರಣೆ ಉತ್ತರ ಚೀನಾದಲ್ಲಿ ತಳಿ ವಿಜ್ಞಾನದಿಂದ ಬೆಳೆದ ಹತ್ತಿ ಮೊದಲಿಗಿಂತಲೂ ಹೆಚ್ಚು ಕ್ರಿಮಿಗಳ ಬಾಧೆಯಿಂದ ನಾಶವಾಗಿರುವುದು ಒಂದು ಅಧ್ಯಯನದಿಂದ ಕಂಡುಬಂದಿದೆ.

ಇದರಿಂದಾಗಿ ತಳಿ ವಿಜ್ಞಾನದಿಂದ ಬೆಳೆದ ಬೆಳೆಗಳಿಗೆ ಸುದೀರ್ಘ ಕಾಲದಲ್ಲಿ ಆಗಬಹುದಾದ ಅನಾಹುತಗಳ ಬಗ್ಗೆ ಮರು ಪರಿಶೀಲನೆ ಮಾಡಬೇಕಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ತಳಿ ವಿಜ್ಞಾನದಿಂದ ಲಕ್ಷಾಂತರ ಎಕರೆಯಲ್ಲಿ ಬೆಳೆದ ಹತ್ತಿಗೆ ಮಿತಿಮೀರಿದ ಕೀಟಕಗಳು ಲಗ್ಗೆ ಹಾಕಿ ಬೆಳೆಗಳನ್ನು ನಾಶಪಡಿಸಿರುವುದಲ್ಲದೆ ಈ ಕೀಟಕಗಳು 200 ವಿವಿಧ ಹಣ್ಣು, ತರಕಾರಿ ಬೆಳೆಗಳಿಗೂ ವ್ಯಾಪಿಸಿ ಬಹಳಷ್ಟು ಹಾನಿಯಾಗಿರುವುದು ಕಂಡುಬಂದಿದೆ. ನಮ್ಮ ದೇಶದಲ್ಲೇ ಬಿಟಿ ಹತ್ತಿ ಬೆಳೆದ ರೈತರು ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸಹ ಇಲ್ಲಿ ಸ್ಮರಿಸಿಕೊಳ್ಳಬಹುದು.

ವಿಜ್ಞಾನಿಗಳು ಮಾಡುತ್ತಿರುವ ತೀವ್ರ ಸ್ವರೂಪದ ಬದಲಾವಣೆಗಳು ನಿಜಕ್ಕೂ ಪರಿಣಾಮಕಾರಿಯಾಗಿದ್ದರೆ ಇಂತಹ ಅದ್ಭುತ ಸೃಷ್ಟಿಯಲ್ಲಿ ಬದಲಾವಣೆಗಳನ್ನು ಪ್ರಕೃತಿಯೇ ಅಳವಡಿಸಿಕೊಳ್ಳುತ್ತಿತ್ತು. ಆದರೆ ವಾಸ್ತವ ಸಂಗತಿಯೇ ಬೇರೆ. ವಿಜ್ಞಾನಿಗಳ ಪ್ರಕಾರ ಪ್ರಕೃತಿದತ್ತವಾದ ಬೆಳೆಗಳಲ್ಲಿ ಅಥವಾ ಹಣ್ಣಿನ ಗಿಡಗಳಲ್ಲಿ ದೋಷಗಳಿವೆ.

ಅದನ್ನು ಸರಿಪಡಿಸಲು ತಮ್ಮ ತಂತ್ರಜ್ಞಾನವನ್ನು ಬಳಸುವುದರಿಂದ ಉತ್ತಮ ಫಲವನ್ನು ಪಡೆಯಬಹುದೆಂಬುದು ಅವರ ವಾದ. ಆದರೆ ಇದು ಅವರ ದುರಹಂಕಾರವನ್ನು ತೋರಿಸುತ್ತದೆ. ಪ್ರಕೃತಿಯಲ್ಲಿ ಸೃಷ್ಟಿಯಾದ ಆಹಾರಗಳು ಒಂದು ನಿರ್ದಿಷ್ಟ ರೀತಿಯಲ್ಲಿ ಸೃಷ್ಟಿಯಾಗಿದ್ದು ಜೀವಿಗಳ ಶರೀರಕ್ಕೆ ಅನುಗುಣವಾಗಿ ಮತ್ತು ಅದರ ಬೆಳವಣಿಗೆಗೆ ಪೂರಕವಾಗಿರುತ್ತದೆ. ಬದಲಾವಣೆ ಮಾಡಿದ ಆಹಾರ ಪದಾರ್ಥಗಳ ಸೇವನೆ ಖಂಡಿತ ಮನುಷ್ಯನ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ ಹಾಗೂ ಇದನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ. ಹಣ್ಣು, ತರಕಾರಿಗಳು

ನೋಡುವುದಕ್ಕೆ ಬಹಳ ಅಂದವಾಗಿ ದಷ್ಟಪುಷ್ಟವಾಗಿ ಕಂಡರೂ ಅದರಲ್ಲಿ ಸತ್ವವಾಗಲಿ, ರುಚಿಯಾಗಲಿ ಇಲ್ಲ. ಈ ಪ್ರಯೋಗದ ಹಿಂದೆ ಇರುವ ಉದ್ದೇಶ ಪ್ರಕೃತಿಗೆ ಸವಾಲು ಹಾಕುತ್ತಿರುವ ಹೆಮ್ಮೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಇದರ ಸ್ವಾಮ್ಯವನ್ನು ಹೊಂದಿರುವುದರಿಂದ ಹಣ ಮಾಡಲು ಕಂಡುಕೊಂಡಿರುವ ಒಂದು ವಿಧಾನ.

ಮೊತ್ತಮೊದಲು ತಳಿ ವಿಜ್ಞಾನದಿಂದ ತಯಾರಾದದ್ದು ಟೊಮೆಟೊ. ಇದು `ರುಚಿಯನ್ನು ಸಂರಕ್ಷಿಸುವುದು’ ಎಂದು ಕರೆಯಲ್ಪಟ್ಟಿತ್ತು. ಇದನ್ನು ಪ್ರಯೋಗ ಶಾಲೆಯಲ್ಲಿ ಇಲಿಗಳಿಗೆ ತಿನ್ನಲು ಕೊಟ್ಟಾಗ ಅವು ಅದನ್ನು ಮುಟ್ಟಲಿಲ್ಲವಂತೆ. ಬಲಾತ್ಕಾರವಾಗಿ ತಿನ್ನಿಸಿದಾಗ ಅನಾರೋಗ್ಯದಿಂದ ಬಳಲಿದವಂತೆ. ಮೂಕ ಪ್ರಾಣಿಗಳಿಗೆ ಇರುವಷ್ಟು ಜ್ಞಾನ ಮಾನವರಿಗೆ ಇಲ್ಲವೆಂದರೆ ಎಂತಹ ಶೋಚನೀಯ ಸಂಗತಿ.

ತಳಿ ವಿಜ್ಞಾನದಲ್ಲಿ ಪರಿಣಿತರೆಂದು ಹೇಳಿಕೊಳ್ಳುವವರು ಹೇಳುವುದೇನೆಂದರೆ ಇದನ್ನು ಕಠಿಣ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಅಪಾಯಕಾರಿ ಅಂಶ ಯಾವುದೂ ಕಂಡುಬಂದಿಲ್ಲ. ಪ್ರಪಂಚದಾದ್ಯಂತ ತಳಿ ವಿಜ್ಞಾನ ಬಳಸಿ ವಿವಿಧ ಬೆಳೆಗಳನ್ನು 25,000 ಪ್ರಯೋಗ ಶಾಲೆಗಳಲ್ಲಿ ಬೆಳೆಯುತ್ತಿದ್ದಾರೆ. ನಮ್ಮ ದೇಶದಲ್ಲಿ ಕೆಲವು ವರ್ಷಗಳ ಹಿಂದೆ ಬದನೆಕಾಯಿ ವಿಷಯದಲ್ಲಿ ಕೋಲಾಹಲವೇ ಎದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಬ್ಬ ಹಿರಿಯ ವಿಜ್ಞಾನಿ ಡಾ. ಜೇನ್ ರಿಸ್ಲರ್ ಹಾಗೂ ಡಾ. ಮಾರ್ಗರೇಟ್ ಮೆಲೋನ್ ಇವರು ಅಮೆರಿಕ ಸರ್ಕಾರದ ಕೃಷಿ ಇಲಾಖೆಯಲ್ಲಿ ವಿಜ್ಞಾನಿಗಳಾಗಿದ್ದಾರೆ. ಅವರು ಹೇಳಿರುವುದೇನೆಂದರೆ ಪ್ರಯೋಗ ಶಾಲೆಯಲ್ಲಿ ಈ ತಳಿ ವಿಜ್ಞಾನದಿಂದ ಬೆಳೆದ ಬೆಳೆಗಳ ಬಗ್ಗೆ ಸರಿಯಾದ ಮಾಹಿತಿ ದೊರಕುವುದಿಲ್ಲ.

ನೈಜೀರಿಯಾದ ಅಂತಾರಾಷ್ಟ್ರೀಯ ಉಷ್ಣವಲಯದ ಕೃಷಿ ಸಂಸ್ಥೆಯ ಹ್ಯಾಂಸ್ ಹೆರರ್ ಹಾಗೂ ಫಿಲಿಫೈನ್ಸ್‍ನ ನೂರ್ಲೆ ಶೆಫರ್ಡ್ ಅತಿ ಹೆಚ್ಚು ಕೀಟನಾಶಕ ಔಷಧಿಗಳನ್ನು ಬಳಸುವುದರಿಂದ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚಾಗುತ್ತೆ ಎಂದಿದ್ದಾರೆ. ಈ ಕೀಟನಾಶಕ ಔಷಧಿಗಳು ಬಾಧಕ ಕ್ರಿಮಿಗಳನ್ನು ಕೊಲ್ಲುವುದಲ್ಲದೆ ಹಲವಾರು ಒಳ್ಳೆಯ ಕ್ರಿಮಿಗಳನ್ನೂ ಕೊಲ್ಲುತ್ತವೆ. ಇದರ ಬಳಕೆಯಿಂದ ಒಂದು ವರ್ಷ ಉತ್ತಮ ಬೆಳೆ ಬಂದರೂ ಸಹ ಕಾಲಕ್ರಮೇಣ ಕ್ರಿಮಿಕೀಟಕಗಳು ಹೆಚ್ಚಾಗಿ ಬಹಳಷ್ಟು ಹಾನಿಯಾಗುವುದು. ಮೇಲೆ ಕೊಟ್ಟಿರುವ ಚೀನಾದ ಘಟನೆ ಇದನ್ನು ದೃಢಪಡಿಸುತ್ತದೆ. ತಳಿ ವಿಜ್ಞಾನದಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಬಹಳ ಅನುಭವವಿರುವ ಡಾ. ಜೇನ್ ರೈಸರ್ `ನಾವು ಕೂಲಂಕಷವಾಗಿ ಪರಿಶೀಲಿಸಿದಾಗ ವಿಜ್ಞಾನಿಗಳಿಗೆ ಆಘಾತವಾಗುವುದು ಖಂಡಿತ’ ಎನ್ನುತ್ತಾರೆ.