ಹೀಗೂ ಉಂಟೆ: ಮಾಲೀಕನ ಜೇಬಿನಿಂದ 66,000 ರೂ. ಹಣ ತಿಂದ ಕಿಲಾಡಿ ಮೇಕೆ

0
580

ಆಡು ಮುಟ್ಟದ ಸೊಪ್ಪಿಲ್ಲ ಅನ್ನೋ ಮಾತಿದೆ. ಆದರೆ ಈ ಕಿಲಾಡಿ ಮೇಕೆ ತಿಂದಿದ್ದು ಬರೋಬ್ಬರಿ 66,000 ರೂ.! ನಂಬಲು ಸಾಧ್ಯವಾಗದೆ ಇದ್ದರು, ನಂಬುವಂತಹ ಘಟನೆ ಉತ್ತರ ಪ್ರದೇಶದ ಕನೌಜ್ ನಲ್ಲಿ ನಡೆದಿದೆ.

ಉತ್ತರ ಪ್ರದೇಶದ ಕನೌಜ್ ಬಳಿಯ ಸೀಲ್ವಪುರದಲ್ಲಿ ಸರ್ವೇಶ್ ಕುಮಾರ್ ಪಾಲ್ ಎಂಬ ರೈತ ಮನೆ ಕಟ್ಟಿಸಲು ಹಣ ಹೊಂದಿಸಿದ್ದ. ಹಸಿವಿನಿಂದ ಕಂಗೆಟ್ಟಿದ್ದ ಮೇಕೆ ಆತನ ಪ್ಯಾಂಟ್ ಜೇಬಿನಲ್ಲಿ 66,000 ರೂ. ಹಣ ಇಟ್ಟಿದ್ದ. ಮೊದಲೇ ಪೇಪರ್ ತಿನ್ನುವ ಚಾಳಿ ರೂಢಿಸಿಕೊಂಡಿದ್ದ ಆತ ಸಾಕಿದ್ದ ಮೇಕೆ, ಸರ್ವೇಶ್ ಪ್ಯಾಂಟಿನಲ್ಲಿದ್ದ 2000 ರೂ. ನೋಟುಗಳನ್ನು ತಿಂದಿದೆ.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ಸರ್ವೇಶ್ ಅಳಿದುಳಿದ ಒಂದೆರಡು ನೋಟುಗಳನ್ನು ಮೇಕೆ ಬಾಯಿಯಿಂದ ಎಳೆದುಕೊಂಡಿದ್ದಾನೆ. ಹೀಗೆ ಪೇಪರ್ ತಿನ್ನುತ್ತಿದ್ದ ಮೇಕೆ ಬರೋಬ್ಬರಿ 66,000 ರೂ. ಹಣ ತಿಂದಿದ್ದು, ಸುತ್ತಮುತ್ತ ಭಾರೀ ಸುದ್ದಿಯಾಗಿದ್ದು.