ಆರೋಗ್ಯಕ್ಕೆ ತುಂಬಾ ಒಳ್ಳೇದು ಮತ್ತೆ ಫಟಾಫಟ್ ಅಂತ ಮಾಡಬಹುದಾದ ಗೋಧಿ ದೋಸೆ ಇಂದೇ ಟ್ರೈ ಮಾಡಿ..!!

0
2110

ಗೋಧಿ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿನ ಕೊಬ್ಬಿನಂಶ ಕಡಿಮೆಯಾಗಿ ಬೊಜ್ಜು ನಿವಾರಣೆಯಾಗುತ್ತದೆ. ಅಲ್ಲದೆ ಮಧುಮೇಹದ ಸಮಸ್ಯೆ ಇರುವವರೂ ಅನ್ನಕ್ಕೆ ಬದಲಾಗಿ ಗೋಧಿ ಆಹಾರವನ್ನು ಸೇವಿಸುವುದರಿಂದ ಕಾಯಿಲೆ ಹತೋಟಿಗೆ ಬರುತ್ತದೆ. ಅಂತಹ ಬಗೆ ಬಗೆ ಗೋಧಿ ಖಾದ್ಯಗಳಲ್ಲಿ ಗೋಧಿ ದೋಸೆ ಕೂಡ ಒಂದು. ಅಷ್ಟೇ ಅಲ್ಲ ಮಹಿಳೆಯರಿಗೆ ಗೋಧಿಯಿಂದ ಉಪಯೋಗ ಹೆಚ್ಚು. ಏಕೆಂದರೆ ಗೋಧಿ ಪದಾರ್ಥ ಸೇವಸುವುದರಿಂದ ಸ್ತನ ಕ್ಯಾನ್ಸರ್‌ಅನ್ನು ಸಹ ತಡೆಯಬಹುದು ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ. ಇದು ದೇಹದಲ್ಲಿರುವ ಅನಗತ್ಯ ಕೊಬ್ಬಿನಂಶಗಳನ್ನು ಕರಗಿಸುವುದಲ್ಲದೆ, ದೇಹ ಹೆಚ್ಚು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುತ್ತದೆ. ಆರೋಗ್ಯಕ್ಕೆ ತುಂಬಾ ಒಳ್ಳೇದು ಮತ್ತೆ ಫಟಾಫಟ್ ಅಂತ ಮಾಡಬಹುದಾದ ಗೋಧಿ ದೋಸೆ ಇಂದೇ ಟ್ರೈ ಮಾಡಿ..

ಬೇಕಾಗುವ ಸಾಮಗ್ರಿಗಳು

 • ಗೋಧಿ ಹಿಟ್ಟು
 • ಚಿರೋಟಿ ರವಾ (ಇದನ್ನು ಹಾಕುವುದರಿಂದ ದೋಸೆ ಗರಿಗರಿಯಾಗಿ ಬರುತ್ತವೆ)
 • ಹಸಿಮೆಣಸಿನಕಾಯಿ
 • ಸಣ್ಣಗೆ ಹೆಚ್ಚಿದ ಈರುಳ್ಳಿ (ಬೇಕಾದರೆ ಹಾಕಬಹುದು ಅಥವಾ ಹಾಕದೆ ಕೂಡ ಇರಬಹುದು)
 • ಕರಿಬೇವು
 • ಸ್ವಲ್ಪ ಅಡಿಗೆ ಸೋಡಾ
 • ಸ್ವಲ್ಪ ಜೀರಿಗೆ
 • ರುಚಿಗೆ ತಕ್ಕಷ್ಟು ಉಪ್ಪು
 • ಸ್ವಲ್ಪ ಎಣ್ಣೆ ಅಥವಾ ತುಪ್ಪ

ಮಾಡುವ ವಿಧಾನ

 1. ಗೋದಿಹಿಟ್ಟು, ಸ್ವಲ್ಪ ರವೆ, ಉಪ್ಪು, ಕರಿಬೇವು, ಹಸಿಮೆಣಸಿನಕಾಯಿ, ಜೀರಿಗೆ, ಸ್ವಲ್ಪ ಅಡಿಗೆ ಸೋಡಾ ಒಟ್ಟಿಗೆ ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.
 2. ರುಬ್ಬಿಕೊಂಡ ಹಿಟ್ಟಿಗೆ ಕರಿಬೇವಿನ ಸೊಪ್ಪು ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ.
 3. ೧೫ ರಿಂದ ೨೦ ನಿಮಿಷಗಳ ವರೆಗೆ ಹಿಟ್ಟನ್ನು ನೆನೆಯಲು ಬಿಡಿ.
 4. ನಂತರ ಒಂದು ದೋಸೆ ಪ್ಯಾನ್ ಬಿಸಿಮಾಡಿ. ಪ್ಯಾನಿನ ಮೇಲೆ ತುಪ್ಪ ಅಥವಾ ಎಣ್ಣೆ ಸವರಿ, ಇದರ ಮೇಲೆ ನಿಧಾನವಾಗಿ ದೋಸೆ ಹೊಯ್ಯಿರಿ.
 5. ಸಣ್ಣ ಉರಿಯಲ್ಲಿ ದೋಸೆಯನ್ನು ಎರಡೂ ಬದಿಗಳಲ್ಲಿ ಬೇಯಿಸಿ.

ಗೋದಿ ದೋಸೆ ತಯಾರು !!.ಇನ್ನೇಕೆ ತಡ, ಬೆಣ್ಣೆ ಮತ್ತು ಚಟ್ನಿಯ ಜತೆ ಇದನ್ನು ಸವಿಯಿರಿ.