ನಿಮ್ಮಲ್ಲಿ ಪೌಷ್ಟಿಕತೆ ಕಡಿಮೆ ಇದ್ದರೆ ನೀವು ಗೋದಿ ಹೂರಣವನ್ನು ಸೇವಿಸಿ ದಷ್ಟಪುಷ್ಟವಾಗಿರಿ…!

0
1540

ಹೌದು ಗೋದಿಯಿಂದ ತಯಾರಿಸುವ ಈ ಆಹಾರ ನಿಮ್ಮ ಆರೋಗ್ಯಕ್ಕೆ ತುಂಬ ಒಳಿತು ನೀವು ಈ ಆಹಾರವನ್ನು ಸೇವಿಸಿದರೆ ನಿಮ್ಮ ಅಪೌಷ್ಟಿಕತೆ ಬರದಂತೆ ನೀವು ತಡೆಗಟ್ಟಬಹುದು. ಅಪೌಷ್ಟಿಕತೆಯನ್ನು ಹೊಡೆದೋಡಿಸಲು ಸುಲಭ ಖಾದ್ಯ ಗೋದಿ ಮತ್ತು ಬೆಲ್ಲದಿಂದ ತಯಾರಿಸುವ ವ್ಯಂಜನ. ಉತ್ತರ ಕರ್ನಾಟಕದಲ್ಲಿ ಋತುಮತಿಯರಾದಾಗ, ಬಾಣಂತಿಯರಿಗೆ ಈ ಖಾದ್ಯಗಳನ್ನು ಯಥೇಚ್ಛವಾಗಿ ನೀಡಲಾಗುತ್ತದೆ.

ಈ ಗೋದಿ ಹೂರಣವನ್ನು ಹೇಗೆ ಮಾಡೋದ ಅಂತ ನಾವು ಹೇಳಿಕೊಡುತ್ತೇವೆ ನೀವು ಮಾಡಿಕೊಂಡು ಸೇವಿಸಿ ದಷ್ಟಪುಷ್ಟರಾಗಿರಿ.
ಗಾಡಿಯಲ್ಲಿ ನೀವು ಮಾಡಿಕೊಳ್ಳಬಹುದಾದ ಆಹಾರಗಳು ಇಲ್ಲಿವೆ ನೋಡಿ.

ಗೋದಿ ಉಂಡೆ:
ಇದಕ್ಕೆ ಬೇಕಾಗುವ ಸಾಮಗ್ರಿಗಳು:ಗೋದಿ 1ಕಪ್,ಸಕ್ಕರೆ, ತುಪ್ಪ ಮುಕ್ಕಾಲು ಕಪ್, ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ, ಕಡಲೆ ಬೇಳೆ ಕಾಲು ಕಪ್.

source:Shyla’s Kitchen

ಇದನ್ನು ಮಾಡುವ ವಿಧಾನ: ಗೋದಿ, ಕಡಲೆ ಬೇಳೆ ಹುರಿದು ನುಣ್ಣಗೆ ಪೌಡರ್ ಮಾಡಿಕೊಳ್ಳಿ. ಆರಿದ ನಂತರ ತುಪ್ಪ ಕರಗಿಸಿ ಕಲಸಿ. ಸಕ್ಕರೆ ಪುಡಿ, ಒಣದ್ರಾಕ್ಷಿ, ಗೋಡಂಬಿ ಹಾಕಿ ಚೆನ್ನಾಗಿ ಕಲಿಸಿ ಉಂಡೆ ಕಟ್ಟಿ.

ಗಾರಿಗೆ:
ಸಾಮಗ್ರಿ: ಗೋದಿ ಹಿಟ್ಟು 1 ಕಪ್, ಬೆಲ್ಲ ಮುಕ್ಕಾಲು ಕಪ್, ನೀರು ಕಾಲು ಕಪ್, ಎಣ್ಣೆ ಕರಿಯಲು, ಹುರಿಕಡಲೆ, ಸೋಂಪು ಸ್ವಲ್ಪ.

source:itslife.in

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಬೆಲ್ಲ ನೀರು ಹಾಕಿ ಒಲೆ ಮೇಲಿಟ್ಟು ಬೆಲ್ಲ ಕರಗಿದ ನಂತರ ಗೋದಿಹಿಟ್ಟು ಹಾಕಿ ಕಲಸಿ ಕೆಳಗಿಳಿಸಿ. ಈಗ ಹುರಿಕಡಲೆ ಸ್ವಲ್ಪ ಸೋಂಪು ಹಾಕಿ ನಾದಿ. ಚಪಾತಿಯಂತೆ ಲಟ್ಟಿಸಿ ಬೇಕಾದ ಆಕಾರಕ್ಕೆ ಕತ್ತರಿಸಿ ಎಣ್ಣೆಯಲ್ಲಿ ಕರಿಯಿರಿ.

ಮಾದ್ಲಿ:
ಸಾಮಗ್ರಿ: ಗೋದಿ ರವೆ 1 ಕಪ್, ಸಕ್ಕರೆ, ಹುರಿಕಡಲೆ, ಸೋಂಪು-ಸ್ವಲ್ಪ, ಒಣ ಕೊಬ್ಬರಿ ತುರಿ ಕಾಲುಕಪ್

ಮಾಡುವ ವಿಧಾನ: ಗೋದಿ ರವೆಯನ್ನು ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ 15 ನಿಮಿಷ ನೆನೆಯಲು ಬಿಡಿ. ಚಪಾತಿಯಂತೆ ಲಟ್ಟಿಸಿ ಎಣ್ಣೆ ಹಾಕದೆ ಬೇಯಿಸಿ. ಚಪಾತಿಯನ್ನು ತುಣುಕು ಮಾಡಿ ಮಿಕ್ಸಿಗೆ ಹಾಕಿ ರವೆಯಂತೆ ಪುಡಿ ಮಾಡಿಕೊಳ್ಳಿ.

ಒಂದು ಪಾತ್ರೆಗೆ ಹಾಕಿ ಇದಕ್ಕೆ ರುಚಿಗೆ ಬೀಕಾದಷ್ಟು ಸಕ್ಕರೆ, ಸೋಂಪು, ಹುರಿಕಡಲೆ, ಒಣಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಸಿ. ತಿನ್ನುವಾಗ ತುಪ್ಪ ಬೆರೆಸಿ ಸೇವಿಸಿ ಅಥವಾ ಹಾಲು ಕೂಡ ಹಾಕಿಕೊಂಡು ಸೇವಿಸಬಹುವುದು.