ದೇವಸ್ಥಾನಗಳಲ್ಲಿ ಪ್ರಸಾದವಾಗಿ ಕೊಡುವ ರುಚಿ ರುಚಿಯ ಗೊಜ್ಜವಲಕ್ಕಿಯನ್ನು ಮನೆಯಲ್ಲೇ ಸುಲಭವಾಗಿ ಮಾಡೋದನ್ನು ಹೇಳಿಕೊಡ್ತೀವಿ ನೋಡಿ!!

0
1819

ಗೊಜ್ಜವಲಕ್ಕಿ ಬೇಕಾಗುವ ಪದಾರ್ಥಗಳು

 • ಒಂದು ದೊಡ್ಡ ಲೋಟದಲ್ಲಿ ಅವಲಕ್ಕಿ
 • ಒಂದು ಬಟ್ಟಲು ಹುಣಿಸೆ ಹಣ್ಣಿನ ರಸ
 • ಸ್ವಲ್ಪ ಹುಳಿಸಾರು ಪುಡಿ
 • ಉಪ್ಪು
 • ಎಣ್ಣೆ
 • ಕಡಲೆ ಕಾಯಿ ಬೀಜ
 • ಒಂದು ಬಟ್ಟಲು ಕೊಬ್ಬರಿ ತುರಿ
 • ಬೆಲ್ಲ ಸ್ವಲ್ಪ
 • ಕರಿಬೇವು
 • ಸಾಸಿವೆ
 • ಅರಿಶಿಣ
 • ಹಿಂಗು

ಮಾಡುವ ವಿಧಾನ…

 1. ಅವಲಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ಸ್ವಲ್ಪ ಪುಡಿ ಮಾಡಿಕೊಳ್ಳಬೇಕು
 2. ಹುಣಸೆ ಹಣ್ಣನ್ನು ನೆನೆಸಿ ರಸ ತೆಗೆದುಕೊಳ್ಳಬೇಕು
 3. ನಂತರ ಆ ರಸಕ್ಕೆ ಹುಳಿ ಸಾರು ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಿ ಮಿಶ್ರಣ ಮಾಡಿ. 4 ರಿಂದ 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
 4. ತೊಳೆದ ಅವಲಕ್ಕಿಯನ್ನು ಮಿಶ್ರಣಕ್ಕೆ ಹಾಕಿ ಕಲೆಸಿಡಿ.
 5. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ
 6. ಅದಕ್ಕೆ ಸಾಸಿವೆ, ಕರಿಬೇವು, ಕಡಲೆ ಬೀಜ ಹಾಕಿ ಫ್ರೈ ಮಾಡಿಕೊಳ್ಳಿ
 7. ನಂತರ ಅದಕ್ಕೆ ಅರಿಶಿಣ ತುರಿದ ಕೊಬ್ಬರಿ, ಹಿಂಗು ಹಾಕಿ, ಸ್ವಲ್ಪ 2 ರಿಂದ 3 ನಿಮಿಷಗಳ ಕಲ ಈ ಒಗ್ಗರಣೆಯನ್ನು ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಿ.
 8. ಈಗ ಈ ಒಗ್ಗರಣೆಯನ್ನು ನೆನೆಸಿಟ್ಟ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
 9. ಈಗ ಬ್ರಾಹ್ಮಣ ಶೈಲಿಯಲ್ಲಿ ಗೊಜ್ಜವಲಕ್ಕಿ ಸವಿಯಲು ಸಿದ್ಧ.