ಇನ್ಮುಂದೆ ಚಿನ್ನಕ್ಕೆ ಹಾಲ್‌ಮಾರ್ಕ್ ಕಡ್ಡಾಯ; ಜ.1ರಿಂದ ಜಾರಿ? ಹಾಲ್‌ಮಾರ್ಕ್ ಕಡ್ಡಾಯದಿಂದ ಗ್ರಾಹಕರಿಗೇನು ಲಾಭ??

0
499

ದೇಶದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದ್ದು, ಮದುವೆಯ ಸೀಸನ್ ಆಗಿದ್ದರಿಂದ ಎಷ್ಟೇ ದುಭಾರಿಯಾದರು ಜನರು ಬಂಗಾರ ಕೊಳ್ಳುತ್ತಾರೆ. ಆದರೆ ಕೆಲವು ನಕಲಿ ಬಂಗಾರ ಜನರಲ್ಲಿ ನೆಮ್ಮದಿ ಕೆಡಸಿದ್ದು, ಕೆಲವರು ಸರಿಯಾಗಿ ಪರೀಕ್ಷಿಸಿ ಖರೀದಿ ಮಾಡಿದರೆ ಇನ್ನು ಕೆಲವರು ಸರಿಯಾಗಿ ನೋಡದೆ ಒಡವೆಗಳನ್ನು ಖರೀದಿ ಮಾಡಿ ಮೋಸಕ್ಕೆ ಹೋಗುತ್ತಾರೆ. ಅದಕ್ಕಾಗಿ ಭಾರತದಲ್ಲಿ ಹೊಸ ವರ್ಷ ಜನವರಿ 1ರಿಂದ ಚಿನ್ನಕ್ಕೆ ಹಾಲ್‌ ಮಾರ್ಕ್ ಗುರುತು ಕಡ್ಡಾಯವಾಗಲಿದ್ದು. ನಕಲಿ ಚಿನ್ನದ ಹಾವಳಿ ತಪ್ಪಲಿದೆ.

Also read: ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಹುದ್ದೆಗೆ ಬಿಇ, ಎಂಎಸ್ಸಿ ಓದಿದವರಿಂದ 7000 ಅರ್ಜಿ; ವಿದ್ಯಾವಂತರಿಗೆ ಮೋದಿ ಸರ್ಕಾರದಿಂದ ಏನಾದ್ರು ಸಿಗುತ್ತಾ??

ಚಿನ್ನಕ್ಕೆ ಹಾಲ್‌ಮಾರ್ಕ್ ಕಡ್ಡಾಯ?

ಹೌದು ದೇಶದಲ್ಲಿ ಮಾರಾಟವಾಗುವ ಚಿನ್ನಕ್ಕೆ ಹಾಲ್‌ಮಾರ್ಕ್ ಕಡ್ಡಾಯ ಮಾಡುವ ಚಿಂತನೆ ನಡೆದಿದ್ದು ಇದು ಉತ್ತಮ ಯೋಚನೆ ಆಗಿದ್ದು ಬಳಕೆದಾರರ ಹಿತದೃಷ್ಟಿಯಿಂದ ಇದು ಉತ್ತಮವಾದರೂ, ಆರಂಭಿಕ ಹಂತದಲ್ಲಿ ಅಡಚಣೆ ಆಗಲಿದೆ ಎಂದು ಜ್ಯುವೆಲರ್ಸ್ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ವಿಶ್ವವ್ಯಾಪಾರ ಸಂಘಟನೆ (ಡಬ್ಲ್ಯುಟಿಒ) ಚಿನ್ನಾಭರಣಗಳಿಗೆ ಹಾಲ್‌ ಮಾರ್ಕ್ ಚಿಹ್ನೆಯನ್ನು ಕಡ್ಡಾಯಗೊಳಿಸುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಜಾರಿಗೊಳಿಸಲು ಅಂತಿಮ ಗಡುವನ್ನೂ ವಿಧಿಸಿತ್ತು.

ಅದರಂತೆ ಈಗ WTO ಹಾಲ್‌ ಮಾರ್ಕ್ ಅನ್ನು ಕಡ್ಡಾಯಗೊಳಿಸುವುದಕ್ಕೆ ಸಂಬಂಧಿಸಿ ಬಿಡುಗಡೆಗೊಳಿಸಿರುವ ಅಧಿಸೂಚನೆಯ ಗಡುವು ಡಿಸೆಂಬರ್‌ 8ಕ್ಕೆ ಮುಕ್ತಾಯವಾಗುತ್ತಿದೆ. ಇದಕ್ಕೆ ತಪ್ಪಿದರೆ ಡಬ್ಲ್ಯುಟಿಒ ಸದಸ್ಯತ್ವ ಹೊಂದಿರುವ ರಾಷ್ಟ್ರಗಳಲ್ಲಿ ಜ್ಯುವೆಲ್ಲರಿ, ಚಿನ್ನ ಕುರಿತ ವಹಿವಾಟಿಗೆ ಅಡಚಣೆ ಉಂಟಾಗಲಿದೆ. ಹೀಗಾಗಿ ಶೀಘ್ರದಲ್ಲಿಯೇ ಹಾಲ್‌ ಮಾರ್ಕ್ ಕಡ್ಡಾಯಗೊಳಿಸಬೇಕಾದ ಒತ್ತಡ ಉಂಟಾಗಿದೆ. 2018ರ ಜೂನ್‌ 14ರಂದು ಸರಕಾರ ಬಂಗಾರ ಮತ್ತು ಬೆಳ್ಳಿಯ ಜ್ಯುವೆಲ್ಲರಿಗಳ ಮೇಲೆ ಹಾಲ್‌ ಮಾರ್ಕ್ ಅಗತ್ಯ ಎಂದು ತಿಳಿಸಿತ್ತು. ಅದಕ್ಕಾಗಿ ಸರಕಾರ 14, 18 ಮತ್ತು 22 ಕ್ಯಾರಟ್‌ ಬಂಗಾರದ ಮೇಲೆ ಹಾಲ್‌ ಮಾರ್ಕ್ ಅನ್ನು ಕಡ್ಡಾಯಗೊಳಿಸಲು ಉದ್ದೇಶಿಸಿದೆ.

Also read: ನಿದ್ದೆ ಪ್ರಿಯರಿಗೆ ಸುವರ್ಣಾವಕಾಶ; 9 ಗಂಟೆ ಮಲ್ಕೊಂಡ್ರೆ ಸಿಗುತ್ತೆ ಬರೋಬ್ಬರಿ 1 ಲಕ್ಷ ರೂ. ಸಂಬಳ.!

ಹಾಲ್‌ ಮಾರ್ಕ್ ಅಗತ್ಯತೆ ಏನು?

ಚಿನ್ನದ ಪರಿಶುದ್ಧತೆ ಅಥವಾ ಗುಣಮಟ್ಟವನ್ನು ದೃಢೀಕರಿಸಲು ಹಾಲ್‌ ಮಾಕ್‌ ಅಗತ್ಯ. ಇದು ಇದ್ದರೆ ಚಿನ್ನದ ಮರು ಮಾರಾಟದ ವೇಳೆ ಗ್ರಾಹಕರಿಗೆ ಆಗಿನ ಮಾರುಕಟ್ಟೆಯಲ್ಲಿನ ದರವೇ ಸಿಗುತ್ತದೆ. ಗ್ರಾಹಕ ಬಳಕೆಯ ವಸ್ತುಗಳಿಗೆ ಐಎಸ್‌ಐ, ಖಾದ್ಯ ವಸ್ತುಗಳಿಗೆ ಅಗ್‌ಮಾರ್ಕ್ ಇದ್ದಂತೆ ಚಿನ್ನಾಭರಣಗಳ ಶುದ್ಧತೆಗೆ ಹಾಲ್‌ಮಾರ್ಕ್. ಆಭರಣದಲ್ಲಿ ಬಳಸಲಾಗಿರುವ ಚಿನ್ನದ ಶುದ್ದತೆಗೆ ಇದೊಂದು ಪ್ರಮಾಣ ಪತ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಮಾನಗಳಿಂದಲೂ ಹಾಲ್‌ಮಾರ್ಕ್ ಶುದ್ಧತೆಗೆ ಮಾನದಂಡವಾಗಿದೆ. ಭಾರತದಲ್ಲಿ ಇದುವರೆಗೆ ಆಭರಣ ತಯಾರಕರಿಗೆ ಹಾಲ್‌ಮಾರ್ಕ್ ಕಡ್ಡಾಯವಾಗಿಲ್ಲ. ತಮ್ಮ ಆಭರಣಗಳಿಗೆ ಹಾಲ್‌ಮಾರ್ಕ್ ಪಡೆಯುವುದು ಅವರ ಆಯ್ಕೆಗೆ ಬಿಟ್ಟ ವಿಚಾರ. 2000 ರಿಂದಲೇ ಹಾಲ್‌ಮಾರ್ಕ್ ಸೌಲಭ್ಯ ಭಾರತದಲ್ಲಿ ಆರಂಭವಾಗಿದ್ದು, 2005 ರಿಂದ ಬೆಳ್ಳಿ ಮತ್ತಿತರ ಪ್ರಶಸ್ತ ಲೋಹಗಳ ಆಭರಣಗಳಿಗೂ ಹಾಲ್‌ಮಾರ್ಕ್ ಸೌಲಭ್ಯ ಶುರುವಾಗಿದೆ.

ಮೆಟ್ರೊ ನಗರಗಳಲ್ಲಿ ಮೊದಲು ಕಡ್ಡಾಯ?

Also read: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಹಾವಳಿ, ವಿದೇಶಗಳಿಂದ ಬರುವ ಚಾಕೋಲೇಟ್ ಡಬ್ಬದಲ್ಲಿ ಡ್ರಗ್ಸ್ ಕಂಡ ಪೊಲೀಸರಿಗೇ ಆಶ್ಚರ್ಯ!!!

ಬ್ರ್ಯಾಂಡೆಡ್‌ ಜ್ಯುವೆಲ್ಲರಿ ಮಳಿಗೆಗಳಲ್ಲಿ ಹಾಲ್‌ ಮಾರ್ಕ್ ಸಾಮಾನ್ಯವಾಗಿದೆ. ಮೂಲಗಳ ಪ್ರಕಾರ ಮೆಟ್ರೊ ನಗರಗಳಲ್ಲಿ ಮೊದಲು ಕಡ್ಡಾಯವಾಗಲಿದೆ. ನಂತರ ಮೂರು ಹಂತಗಳಲ್ಲಿಉಳಿದ ಕಡೆ ಕಡ್ಡಾಯವಾಗಲಿದೆ. ಸರಕಾರ 861 ಹಾಲ್‌ ಮಾರ್ಕಿಂಗ್‌ ಕೇಂದ್ರಗಳನ್ನೂ ತೆರೆಯುವ ಉದ್ದೇಶ ಹೊಂದಿದೆ. ಗ್ರಾಹಕರಲ್ಲೂಹಾಲ್‌ಮಾರ್ಕ್ ಕುರಿತ ಜಾಗೃತಿ ಹೆಚ್ಚತೊಡಗಿದೆ.