ಅನ್ನ ಭಾಗ್ಯ ಯೋಜನೆಗೆ ಮೀಸಲಿದ್ದ ಆಹಾರ ಪದಾರ್ಥಗಳು ಜನರಿಗೆ ಸೇರದೆ ಗೋದಾಮಿನಲ್ಲೇ ಕೊಳೆಯುತ್ತಿದೆ!!

0
491

ಸರ್ಕಾರ ಕಡು ಬಡವರಿಗೆ ಹಾಗೂ ಹಸಿವಿನಿಂದ ಬಳಲುತ್ತಿರುವ ಜನರಿಗಾಗಿ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಅದ್ರಲ್ಲಿ ಒಂದು ಅನ್ನ ಭಾಗ್ಯ ಯೋಜನೆ. ರಾಜ್ಯ ಸರ್ಕಾರ ಈ ಯೋಜನೆಗೆ ಕೋಟ್ಯಾಂತರ ರೂಪಾಯಿ ಹಣವನ್ನು ವ್ಯಯ ಮಾಡುತ್ತಿದೆ. ಆದ್ರೆ ಬಡವರಿಗೆ ಇದರ ಲಾಭ ಸಿಕ್ಕಿದಿಯಾ ಎಂದು ಪರೀಕ್ಷಿಸುವ ಗೋಜಿಗೂ ಹೋಗಿಲ್ಲ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನ್ನ ಭಾಗ್ಯ ಯೋಜನೆಯ ವಸ್ತುಗಳು ಗೋದಾಮುಗಳಲ್ಲೇ ಕೊಳೆಯುತ್ತಿವೆ.  ಇದಕ್ಕೆ ತಾಜಾ ಉದಾಹರಣೆಯಾಗಿ ಆನೇಕಲ್, ಜಿಗಣಿ ಹಾಗೂ ಸರ್ಜಾಪುರದಲ್ಲಿರುವ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಗೋದಾಮುಗಳಲ್ಲಿ ಟನ್‍ಗಟ್ಟಲೇ ಗೋಧಿ ಕೊಳೆಯುತ್ತಿದೆ. ಆನೇಕಲ್​ ಗೋದಾಮಿನಲ್ಲಿ 331 ಕ್ವಿಂಟಾಲ್​​, ಜಿಗಣಿಯಲ್ಲಿ 125 ಕ್ವಿಂಟಲ್ ಹಾಗೂ ಸರ್ಜಾಪುರದಲ್ಲಿ 100 ಕ್ವಿಂಟಾಲ್ ಗೋಧಿ ಹಾಳಾಗಿದ್ದು, ಆಹಾರ ಧಾನ್ಯಗಳು ಹಾಳಾಗಿವೆ. ಅಲ್ಲದೆ ಉಪಯೋಗಕ್ಕೆ ಬಾರದ ರೀತಿಯನ್ನು ತಲುಪಿವೆ.

ಇನ್ನು ಈ ಗೋದಿಯನ್ನು ರಾಜ್ಯ ಸರ್ಕಾರ 12 ತಿಂಗಳ ಹಿಂದೆ ಖರೀದಿ ಮಾಡಿ, ಫಲವಾನುಭವಿಗಳಿಗೆ ನೀಡುವ ಉದ್ದೇಶವನ್ನು ಹೊಂದಿತ್ತು. ಆದರೆ ಈಗ ಈ ಪದಾರ್ಥಗಳು ಗೋಧಾಮಿನಲ್ಲಿ ಹಾಳಾಗುತ್ತಿರುವುದಕ್ಕೆ ಆಕ್ರೋಶ ಕೇಳಿ ಬರುತ್ತಿದೆ. ಇನ್ನು ಈ ಯೋಜನೆಯನ್ನು ನೀಡುವ ರಾಗಿ ಹಸಿದ ಜನರ ಹೊಟ್ಟೆ ಸೇರುತ್ತಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತ ಪಡಿಸಿದ್ದಾರೆ.

ಇನ್ನು ಈ ಬಗ್ಗೆ ತಮ್ಮದೇ ಧಾಟಿಯಲ್ಲಿ ಉತ್ತರ ನೀಡುವ ಅಧಿಕಾರಿಗಳು ನಾವು ಗೋದಾಮಿನಲ್ಲಿನ ಪದಾರ್ಥಗಳ ಸ್ಯಾಂಪಲ್​ ಪರೀಕ್ಷೆಗೆ ಒಳಪಡಿಸಿದ್ದೇವೆ. ವರದಿ ಬಂದ ಬಳಿಕ ಕ್ರಮ ಕೈ ಗೊಳ್ಳುತ್ತೇವೆ. ಆದ್ರೆ ಇಲ್ಲಿನ ಜನ ಇಷ್ಟು ದಿನ ಈ ಪದಾರ್ಥವನ್ನು ಏಕೆ ಹೀಗೆ ಮುಚ್ಚಿ ಇಟ್ಟಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ.