ನರೇಂದ್ರ ಮೋದಿ ಸರ್ಕಾರದಿಂದ ಕೇಂದ್ರ ನೌಕರರಿಗೆ ಗುಡ್ ನ್ಯೂಸ್: ಶೇ. 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ..

0
291

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕೇಂದ್ರ ಸರ್ಕಾರವು, ವಿವಿಧ ಕೊಡುಗೆಗಳನ್ನು ನೀಡಿ ಸುದ್ದಿಯಲ್ಲಿದೆ ಅದೇ ಸಾಲಿನಲ್ಲಿ ಕೇಂದ್ರ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದು, ನೌಕರರಲ್ಲಿ ಮಂದಹಾಸ ಮೂಡಿದೆ. ಹೌದು ಸರ್ಕಾರ ತುಟ್ಟಿಭತ್ಯೆಯನ್ನು 2019ರ ಜ.1ರಿಂದ ಪೂರ್ವ ಅನ್ವಯವಾಗುವಂತೆ ಶೇ.3ರಷ್ಟುಏರಿಕೆ ಮಾಡಿದೆ. ಈ ಹಿನ್ನೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದ ಸಭೆಯಲ್ಲಿ ನೌಕರರ ತುಟ್ಟಿ ಭತ್ಯೆ ಏರಿಕೆಗೆ ಒಪ್ಪಿಗೆ ನೀಡಲಾಗಿದೆ.


Also read: 12ನೇ ಆವೃತ್ತಿ IPL ವೇಳಾಪಟ್ಟಿ ಪ್ರಕಟ; 2019 ರ ಐಪಿಎಲ್ ಹಬ್ಬಕೆ ತಿಂಗಳಷ್ಟೇ ಬಾಕಿ, ನಿಮ್ಮ ನೆಚ್ಚಿನ ಪದ್ಯ ಯಾವದಿನ ಇದೆ ನೋಡಿ..!

ಈ ಹಿನ್ನೆಲೆಯಲ್ಲಿ (ಡಿಎ) ಶೇ. 3ರಷ್ಟು ಏರಿಕೆ ಮಾಡಲು ಕೇಂದ್ರ ಸಚಿವ ಸಂಪುಟ ಸಭೆ ಮಂಗಳವಾರ ಒಪ್ಪಿಗೆ ನೀಡಿದೆ. ಡಿಎ ಹೆಚ್ಚಳದಿಂದ ಸುಮಾರು 1.1 ಕೋಟಿ ಕೇಂದ್ರ ಸರ್ಕಾರಿ ನೌಕರರು ಹಾಗು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಜನವರಿ 1, 2019ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿ ಭತ್ಯೆ ಏರಿಕೆಯನ್ನು ಜಾರಿ ತರಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ. 9ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದು, ಇದೀಗ ಶೇ. 3ರಷ್ಟು ಏರಿಕೆಯೊಂದಿಗೆ ಶೇ. 12ಕ್ಕೆ ತಲುಪಿದೆ. ಈ ಸಂಬಧ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.
48.41 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 62.03 ಲಕ್ಷ ಪಿಂಚಣಿದಾರರು ಡಿಎ ಏರಿಕೆಯ ಲಾಭ ಪಡೆಯಲಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ಈ ಹೆಚ್ಚಳವಾಗಿದೆ. ಅಂತೂ ಲೋಕಸಭಾ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಸರ್ಕಾರ ಕೇಂದ್ರ ನೌಕರರಿಗೆ ಸಿಹಿಸುದ್ದಿ ನೀಡಿದೆ.


Also read: ಕೆಲ ದಿನಗಳ ಹಿಂದೆ ಪುಂಡಾಟಿಕೆ ಮಾಡಿ ಹಂಪಿ ಸ್ಮಾರಕ ಕೆಡವಿದ್ದ ಉತ್ತರ ಭಾರತೀಯರಿಗೆ ತಲಾ 70 ಸಾವಿರ ರೂಗಳ ಭಾರೀ ದಂಡ!

ಈ ಹಿಂದೆ ಕೂಡ ಅರುಣ್ ಜೇಟ್ಲಿಯವರ ಅನಾರೋಗ್ಯದ ಕಾರಣ ರೇಲ್ವೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರು ಮಧ್ಯಂತರ ಹಣಕಾಸು ಸಚಿವರಾಗಿ ಕೊನೆಯ ಬಜೆಟ್ ನ್ನು ಮಂಡಿಸಿ ಹಲವಾರು ಯೋಜನೆಗಳನ್ನು ತಂದು ನಾಗರಿಕರಿಗೆ ಅನುಕೂಲವಾಗುವಂತೆ ಮಾಡಿ ಜನ ಮೆಚ್ಚುಗೆ ಪಡೆದಿದ್ದರು. ಅದೇ ರೀತಿ ಮಧ್ಯಂತರ ಬಜೆಟ್ ನಲ್ಲಿ ನವ ಭಾರತ ನಿರ್ಮಾಣ, ಹಣದುಬ್ಬರ ದರ ನಿಯಂತ್ರಣ, ಜಿಎಸ್ಟಿ ಕೊಡುಗೆ, ಬ್ಯಾಂಕಿಂಗ್ ಕ್ಷೇತ್ರದ ಬದಲಾವಣೆ, ಸ್ವಚ್ಛತಾ ಭಾರತ ಅಭಿಯಾನ, ಆರೋಗ್ಯ ವಲಯ, ಗೃಹ ನಿರ್ಮಾಣ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಗೆ 75 ಸಾವಿರ ಕೋಟಿ, ಕಾಮಧೇನು ಆಯೋಗ ರಚನೆ, ರೈತರಿಗೆ ಶೇ. 2 ಬಡ್ಡಿ ರಿಯಾಯಿತಿ, ಉದ್ಯೋಗ ಖಾತರಿಗೆ ಬಲ, ಇಎಸ್ ಐ ಯೋಜನೆ, ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್ ಯೋಜನೆ, ಪಿಎಂ ಪಿಂಚಣಿ ಯೋಜನೆ, ಉಚಿತ ಎಲ್ಪಿಜಿ ಸಂಪರ್ಕ, ಅಲೆಮಾರಿ ಸಮುದಾಯ ನಿಗಮ, ಮುದ್ರಾ ಯೊಜನೆಯಡಿ ಸಾಲಸೌಲಭ್ಯ, ಮುದ್ರಾ ಯೊಜನೆಯಡಿ ಸಾಲಸೌಲಭ್ಯ, ಉಡಾನ್ ಯೋಜನೆ, ಡಿಜಿಟಲ್ ಕ್ರಾಂತಿ.


Also read: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ CRPF ಯೋಧರ ಸಾಲ ಮನ್ನಾ ಮಾಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌..

ತೆರಿಗೆ ಸಂಗ್ರಹ ದುಪ್ಪಟ್ಟು, ಸಾಗರ ಮಾಲಾ ಯೋಜನೆ, 3 ಲಕ್ಷ ಕೋಟಿ ರಕ್ಷಣಾ ಬಜೆಟ್, SC, ST ಅಭಿವೃದ್ಧಿಗೆ ಬಂಪರ್, ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ, ಆದಾಯ ತೆರಿಗೆದಾರರಿಗೆ ಬಂಪರ್ ಕೊಡುಗೆ, ಸ್ಟ್ಯಾಂಡರ್ಡ್ ಡಿಡಕ್ಷನ್ ಕೊಡುಗೆ, ಗೃಹ ಸಾಲ ತೆರಿಗೆ ವಿನಾಯಿತಿ, ಶಿಕ್ಷಣ, ಹೈನುಗಾರಿಕೆ, ಕೈಗಾರಿಕೆ, ಸಣ್ಣ ಕೈಗಾರಿಕೆಗಳಿಗೆ ಶೇ. 2 ರಷ್ಟು ಬಡ್ಡಿ ವಿನಾಯಿತಿ, ಸ್ವದೇಶಿ ವಸ್ತುಗಳ ಹೆಚ್ಚಿನ ಒತ್ತು ರಾಷ್ಟ್ರೀಯ ಶಿಕ್ಷಣ ಯೋಜನೆಗೆ ರೂ. 38,572 ಕೋಟಿ ಅನುದಾನ ಮೀಸಲು, ಹೈನುಗಾರಿಕೆ ಉತ್ತೇಜನಕ್ಕಾಗಿ ಕಾಮಧೇನು ಯೋಜನೆ ಜಾರಿಮಾಡಿದ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಈಗ ನೌಕರರಿಗೆ ಅನುಕೂಲಮಾಡಿ ಕೊಟ್ಟಿದೆ.